ಮಡಿಕೇರಿ, ಮೇ ೧೩: ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವೊಂದನ್ನು ತೆರವುಗೊಳಿಸಲಾಯಿತು.
ನಗರದ ಚೈನ್‌ಗೇಟ್ ಬಳಿ ಕಲಾವಿದ ಸಂದೀಪ್ ಯಾವುದೇ ಅನುಮತಿ ಇಲ್ಲದೆ ಆರ್ಟ್ ಗ್ಯಾಲರಿ ನಿರ್ಮಿಸಿದ್ದ ಕಾರಣ ಕ್ರಮಕೈಗೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಕಟ್ಟಡ ಕೆಡವಲು ಹೋದ ಸಂದರ್ಭ ಸಂದೀಪ್ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದ ಹಿನ್ನೆಲೆ ತೆರವು ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಕಂದಾಯ ಇಲಾಖೆ ವತಿಯಿಂದ ತಹಶೀಲ್ದಾರ್ ಮಹೇಶ್ ಮುಂದಾಳತ್ವದಲ್ಲಿ ನಗರಸಭೆ ಪೌರಾಯುಕ್ತ ರಾಮದಾಸ್, ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವು ಕಾರ್ಯ ನಡೆಯಿತು.