ಮಡಿಕೇರಿ, ಮೇ ೧೧: “ನಮ್ಮ ಇಲಾಖೆ ನಿರ್ವಹಣೆಯಲ್ಲಿರುವ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಪೈಪ್ ದುರಸ್ತಿ ಕಾರ್ಯ ಮಾತ್ರ ನಾವು ಮಾಡುತ್ತೇವೆ. ಈ ವೇಳೆ ರಸ್ತೆ ಹದಗೆಟ್ಟರೆ, ಅದು ನಮಗೆ ಸಂಬAಧವಿಲ್ಲ” ಎಂಬAತಿದೆ ನಗರದ ಸಂತ ಜೋಸೆಫರ ಶಾಲೆಯ ಮುಂಭಾಗದಲ್ಲಿ ಅಗೆಯಲಾಗಿರುವ ರಸ್ತೆಯ ಪರಿಸ್ಥಿತಿ.
ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿAದ ನಗರದಾದ್ಯಂತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಅಳವಡಿಸಿರುವ ಪೈಪ್‌ಲೈನ್ ಕಾನ್ವೆಂಟ್ ಶಾಲೆಯ ಬಳಿ ಕೆಲ ದಿನಗಳ ಹಿಂದೆ ದುಸ್ಥಿತಿಗೊಳಗಾಗಿ ನೀರು ಸೋರಲಾರಂಭಿಸಿತು. ಇದನ್ನು ಗಮನಿಸಿದ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿದ ಬೆನ್ನಲ್ಲೇ ನೀರು ಸೋರುವಿಕೆ ನಿಲ್ಲಿಸಲಾಯಿತಾದರೂ ಪೈಪ್ ದುರಸ್ತಿಗೆ ಅಗೆಯಲಾಗಿದ್ದ ರಸ್ತೆಯ ಭಾಗವನ್ನು ಮತ್ತೆ ದುರಸ್ತಿ ಮಾಡುವ ಕಾರ್ಯಕ್ಕೆ ಒಂದು ತಿಂಗಳಾದರೂ ಇಲಾಖೆ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಪೈಪ್ ಅಳವಡಿಕೆ ಸಂದರ್ಭ ಇದೇ ರಸ್ತೆಯನ್ನು ಅಗೆದು ಪೈಪ್ ಅಳವಡಿಸಿ ಕಾಂಕ್ರೀಟ್ ಲೇಪಿಸಲಾಗಿತ್ತು. ಇದೇ ಕಾಂಕ್ರೀಟನ್ನು ಮತ್ತೇ ಅಗೆದು ಪೈಪ್ ದುರಸ್ತಿ ಮಾಡಿದ ಬಳಿಕ ಇದೀಗ ತಮಗೆ ಸಂಬAಧವೇ ಇಲ್ಲದ ರೀತಿ ಇಲಾಖೆಯವರು ಮೌನವಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ತಾ.೧೬ ರಿಂದ ಶಾಲೆಗಳು ಕೂಡ ಪ್ರಾರಂಭವಾಗಲಿದ್ದು, ಈ ವ್ಯಾಪ್ತಿಯಲ್ಲಿ ಶಾಲಾ ವಾಹನಗಳನ್ನು ನಿಲ್ಲಿಸಲು ಸಹ ತೊಂದರೆಯಾಗುವುದು ಸಹಜ. ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.