ಸೋಮವಾರಪೇಟೆ, ಮೇ ೧೨: ತಾಲೂಕಿನ ದುಂಡಳ್ಳಿ ಹಾಗೂ ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ರೂ. ೯೫ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.

ದುಂಡಳ್ಳಿ ಗ್ರಾಮ ಪಂಚಾಯಿತಿಯಲ್ಲಿ ತಲಾ ೫ ಲಕ್ಷ ವೆಚ್ಚದ ಸುಳುಗಳಲೆ ಬಸವೇಶ್ವರ ದೇವಾಲಯ ರಸ್ತೆ, ಬಿದರೂರು ಹೊಸ ಕಾಲೋನಿ ರಸ್ತೆ, ಮಾದ್ರೆ ರಸ್ತೆ, ಶೆಟ್ಟಿಗನಹಳ್ಳಿ ರಸ್ತೆ, ಕೂಜಗೇರಿ ರಸ್ತೆ, ಅಪ್ಪಶೆಟ್ಟಳ್ಳಿ ಗ್ರಾಮ ರಸ್ತೆ, ಚಂಗಡಹಳ್ಳಿ ಮುಖ್ಯರಸ್ತೆಯಿಂದ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ, ಕಾಜೂರು ಮುಖ್ಯರಸ್ತೆಯಿಂದ ಪ.ಜಾ. ಕಾಲೋನಿ ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಒಟ್ಟು ೫೦ ಲಕ್ಷ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಸೆ ರಸ್ತೆ, ಮಣಗಲಿ-ಹೆಬ್ಬುಲುಸೆ ದೇವಾಲಯ ರಸ್ತೆ, ಕಿತ್ತೂರುಕೊಪ್ಪಲು ರಸ್ತೆ, ಬಾಗೇರಿ ಗ್ರಾಮ ಸಂಪರ್ಕ ರಸ್ತೆ, ಹಂಡ್ಲಿ ಕೊಪ್ಪಲು ರಸ್ತೆ, ನೇರುಗಳಲೆ ಮುಖ್ಯರಸ್ತೆಯಿಂದ ಗ್ರಾಮ ಸಂಪರ್ಕಿಸುವ ಒಳರಸ್ತೆ, ಮಲ್ಲಿಪಟ್ಟಣ ಮುಖ್ಯರಸ್ತೆಯಿಂದ ಪ.ಜಾತಿ ಕಾಲೋನಿ ರಸ್ತೆ, ಸಂಪಿಗೆದಾಳು ರಸ್ತೆ ಅಭಿವೃದ್ಧಿಗೆ ೪೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಶಾಸಕ ರಂಜನ್ ಸೇರಿದಂತೆ ಸ್ಥಳೀಯ ಪ್ರಮುಖರು ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ದುಂಡಳ್ಳಿ ಗ್ರಾ.ಪಂ. ಉಪಾಧ್ಯಕ್ಷ ನಿತಿನ್, ಸದಸ್ಯೆ ಭಾಗ್ಯಮ್ಮ, ದೇವರಾಜ್,ಮನು, ಪಿಡಿಓ ವೇಣುಗೋಪಾಲ್, ಪ್ರಮುಖರಾದ ರಕ್ಷಿತ್, ಕಿರಣ್, ಕೆ.ಟಿ. ಹರೀಶ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ರೂಪಾ, ಸದಸ್ಯ ಬಸವರಾಜು, ಅಶೋಕ್, ಮಾಜೀ ಅಧ್ಯಕ್ಷ ಸಂದೀಪ್, ವಿಎಸ್‌ಎಸ್‌ಎನ್ ಅಧ್ಯಕ್ಷ ವೀರೇಂದ್ರ, ಸದಸ್ಯ ನಾಗೇಶ್,ಪ್ರಮುಖರಾದ ಗುರುಪ್ರಸಾದ್, ತೀರ್ಥಕುಮಾರ್, ರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.