ಮಡಿಕೇರಿ, ಮೇ ೧೨: ಸಾಮಾಜಿಕ ಜಾಲತಾಣಗಳಲ್ಲಿ ಇನ್ಸ್÷್ಟಂಟ್ ಸಾಲ ನೀಡುವ ಆ್ಯಪ್ಗಳ ಮಹಾಪೂರವೇ ಕಂಡುಬರುತ್ತಿದೆ. ಹಲವು ಕಂಪೆನಿಗಳು ಜನರಿಗೆ ಮನೆಯಲ್ಲಿಯೇ ಕುಳಿತು ಕೇವಲ ಆಧಾರ್ ಕಾರ್ಡ್ ಹಾಗೂ ಪ್ಯಾನ್ ನಂಬರ್ಗಳ ಆಧಾರದ ಮೇಲೆ ಸಣ್ಣ ಸಣ್ಣ ಸಾಲಗಳನ್ನು ನೀಡುತ್ತಿವೆ. ಆದರೆ, ಇವರ ಬಡ್ಡಿ ದರ ತುಂಬಾ ವಿಪರೀತವಾಗಿರುತ್ತದೆ. ಇಂತಹುದರಲ್ಲಿ ಹಲವು ಕಂಪೆನಿಗಳು ಜನರನ್ನು ವಂಚಿಸುತ್ತಿವೆ.
ಮೊಬೈಲ್ ಆ್ಯಪ್ನಲ್ಲಿ ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ, ಮಾನಸಿಕವಾಗಿ ಪೀಡಿಸುತ್ತಾ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿರುವ ಘಟನೆಗಳು ಕೊಡಗು ಜಿಲ್ಲೆಯಲ್ಲೂ ನಡೆಯುತ್ತಿದೆ. ಚೋರರು ಫೇಸ್ಬುಕ್, ಇನ್ಸಾ÷್ಟಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಸಾಲ ನೀಡುವುದಾಗಿ ಜಾಹೀರಾತು ನೀಡಿ ಗ್ರಾಹಕರನ್ನು ಸೆಳೆಯುತ್ತಾರೆ. ರೂ. ೩ ಸಾವಿರದಿಂದ ರೂ. ೫ ಲಕ್ಷದವರೆಗೂ ಸಾಲ ನೀಡುವುದಾಗಿ ನಂಬಿಸುತ್ತಾರೆ. ಈ ವೇಳೆ ಪ್ರೊಸೆಸಿಂಗ್ ಶುಲ್ಕವೆಂದು ದುಬಾರಿ ಹಣವನ್ನು ಕಡಿತ ಮಾಡುತ್ತಾರೆ.
(ಮೊದಲ ಪುಟದಿಂದ) ವಾರ ಕಳೆದ ಬಳಿಕ ಬಡ್ಡಿ ವಸೂಲಿಗೆ ಗ್ರಾಹಕರಿಗೆ ಕರೆ ಮಾಡುವ ಚೋರರು, ಬಡ್ಡಿ ಪಾವತಿಸಲು ನಿರಾಕರಿಸಿದರೆ, ಬೆದರಿಕೆಯ ಸಂದೇಶಗಳನ್ನು ರವಾನಿಸುತ್ತಾರೆ. ಇವರ ಕಾಟಕ್ಕೆ ಬೇಸತ್ತು ಗ್ರಾಹಕರು ಬಡ್ಡಿ ಪಾವತಿಸಿದರೂ ಹೆಚ್ಚುವರಿ ಬಡ್ಡಿ ನೀಡುವಂತೆ ಮಾನಸಿಕ ಕಿರುಕುಳ ನೀಡುತ್ತಾರೆ.
ಫೇಸ್ಬುಕ್ ಮೂಲಕ ವೀರಾಜಪೇಟೆಯ ಯುವಕನೋರ್ವ ಸಾಲದ ಮೋಸದ ಬಲೆಗೆ ಬಿದ್ದಿದ್ದಾನೆ. ಜಾಹೀರಾತು ನೋಡಿದ ಯುವಕ ಲೋನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ತನ್ನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವಾಸದ ವಿಳಾಸದ ಮಾಹಿತಿಯನ್ನು ನೀಡಿ, ರೂ. ೩೫೦೦ ಸಾಲ ನೀಡುವಂತೆ ಕೋರಿಕೊಂಡಿದ್ದನು. ಎರಡು ದಿನಗಳ ನಂತರ ಯುವಕನ ಬ್ಯಾಂಕ್ ಖಾತೆಗೆ ರೂ. ೨೨೫೦ ಜಮಾ ಆಗಿತ್ತು. ಹತ್ತು ದಿನಗಳ ನಂತರ ಆ್ಯಪ್ ಕಡೆಯಿಂದ ಕರೆ ಮಾಡಿ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ದುಬಾರಿ ಬಡ್ಡಿ ಪಾವತಿಸಲು ಒತ್ತಾಯಿಸಿದರು. ಬಳಿಕ ಯುವಕ ಹಲವು ಬಾರಿ ಗೂಗಲ್ ಪೇ ಹಾಗೂ ಫೋನ್ ಪೇ ಮುಖಾಂತರ ಒಟ್ಟು ರೂ. ೯೭೫೦ ಹಣವನ್ನು ಪಾವತಿ ಮಾಡಿರುತ್ತಾನೆ.
ಸಾಲ ಪಡೆದ ರೂ. ೨೨೫೦ಕ್ಕೆ ಯುವಕ ರೂ. ೯೭೫೦ ಮೊತ್ತವನ್ನು ಮರು ಪಾವತಿ ಮಾಡಿದರೂ ಕಂಪನಿಯವರು ಯುವಕನನ್ನು ಸುಮ್ಮನೆ ಬಿಡಲಿಲ್ಲ. ಇನ್ನೂ ಹೆಚ್ಚಿನ ಹಣವನ್ನು ಪಾವತಿಸದಿದ್ದರೆ ನಿನ್ನ ವೈಯಕ್ತಿಕ ಮಾಹಿತಿಯೊಂದಿಗೆ ಇಡೀ ಕುಟುಂಬದ ಬಗ್ಗೆ ಅಶ್ಲೀಲವಾಗಿ ನಿನ್ನ ಪರಿಚಯಸ್ಥರಿಗೆ ಹಾಗೂ ಗೆಳೆಯರಿಗೆ ಮೆಸೇಜ್ ಮಾಡುವುದಾಗಿ ಬೆದರಿಸಲು ಪ್ರಾರಂಭಿಸಿದರು. ಈಗಾಗಲೇ ದುಬಾರಿ ಹಣವನ್ನು ಕಳೆದುಕೊಂಡಿರುವ ಯುವಕ ಮತ್ತೆ ಹಣವನ್ನು ಪಾವತಿ ಮಾಡಲು ನಿರಾಕರಿಸಿದ್ದಾನೆ. ನಂತರ ಯುವಕನ ವೈಯಕ್ತಿಕ ಮಾಹಿತಿಯೊಂದಿಗೆ ಕುಟುಂಬವನ್ನು ನಿಂದಿಸುವ ಮೆಸೇಜನ್ನು ಯುವಕನ ಮೊಬೈಲ್ ಸಂಪರ್ಕ ಪಟ್ಟಿಯಲ್ಲಿರುವ ಹಲವರಿಗೆ ಮೆಸೇಜ್ ಮಾಡಿರುವ ಕಂಪನಿಯವರು ಕೂಡಲೇ ಯುವಕ ಹಣವನ್ನು ಪಾವತಿಸದಿದ್ದರೆ ನಿಮ್ಮ ಇಡೀ ಕುಟುಂಬದ ಅಶ್ಲೀಲ ಫೋಟೋ ಹಾಗೂ ವೀಡಿಯೋವನ್ನು ಫೇಸ್ಬುಕ್, ಇನ್ಸಾ÷್ಟಗ್ರಾಮ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದಾಗಿ ಗೆಳೆಯರನ್ನೂ ಬೆದರಿಸಿದ್ದಾರೆ. ಯುವಕನ ಹಲವು ಸ್ನೇಹಿತರು ಹಾಗೂ ಪರಿಚಯಸ್ಥರು ಯುವಕನಿಗೆ ಅಶ್ಲೀಲ ಮೆಸೇಜ್ ಬಗ್ಗೆ ಮಾಹಿತಿ ನೀಡಿರುತ್ತಾರೆ. ಮೋಸದ ಗುಂಡಿಗೆ ಬಿದ್ದ ಯುವಕ ಹಣವನ್ನು ಕಳೆದುಕೊಂಡಿದ್ದಲ್ಲದೆ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದಾನೆ. ಇದೀಗ ನೊಂದ ಯುವಕ ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಮಡಿಕೇರಿಯಲ್ಲೂ ವಂಚನೆ
ಇದೇ ರೀತಿಯ ವಂಚನೆ ಪ್ರಕರಣ ಮಡಿಕೇರಿಯಲ್ಲಿಯೂ ನಡೆದಿದೆ. ಮಡಿಕೇರಿಯ ಮಹಾಲಕ್ಷಿö್ಮ ಎಂಬವರ ವ್ಯಾಟ್ಸ್ಪ್ ಸಂಖ್ಯೆಗೆ ಸಂದೇಶವೊAದು ಬಂದಿದ್ದು, ನಿಮ್ಮ ಸಾಲದ ಕಂತು ರೂ. ೭ ಸಾವಿರ ಪಾವತಿಸುವಂತೆ ಸೂಚಿಸಲಾಗಿತ್ತು.
ಆದರೆ, ಮಹಾಲಕ್ಷಿö್ಮ ಯಾವುದೇ ಸಾಲಕ್ಕೆ ಅರ್ಜಿ ಹಾಕಿರಲಿಲ್ಲ. ತನ್ನ ಖಾತೆಯನ್ನು ಪರಿಶೀಲಿಸಿದಾಗಲೂ ಯಾವುದೇ ಹಣ ಜಮೆ ಆಗಿರಲಿಲ್ಲ. ಈ ಬಗ್ಗೆ ವಿಚಾರಿಸಲೆಂದು ಸಂದೇಶ ಬಂದ ಸಂಖ್ಯೆಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ನಂತರದಲ್ಲಿ ಪದೇ ಪದೇ ಕರೆ ಮಾಡುತ್ತಿದ್ದ ವಂಚಕರು ಹಣ ಪಾವತಿಸದಿದ್ದಲ್ಲಿ ನಿಮ್ಮ ವೈಯಕ್ತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿಯೂ ಪೊಲೀಸ್ ದೂರು ನೀಡುವುದಾಗಿಯೂ ಬೆದರಿಕೆ ಹಾಕಲಾಗಿದೆ. ಮಾನಸಿಕವಾಗಿ ನೊಂದ ಮಹಾಲಕ್ಷಿö್ಮ ಕಾಟದಿಂದ ತಪ್ಪಿಸಿಕೊಳ್ಳಲು ರೂ. ೭ ಸಾವಿರವನ್ನು ವಂಚಕರು ಕಳುಹಿಸಿದ ಖಾತೆಗೆ ಜಮೆ ಮಾಡಿದ್ದಾರೆ.
ಇದಾದ ಬಳಿಕ ಮತ್ತೆ ಬೇರೆ ಬೇರೆ ಸಂಖ್ಯೆಗಳಿAದ ಕರೆ, ಸಂದೇಶ ಕಳುಹಿಸುತ್ತಾ ಇನ್ನೂ ಬಡ್ಡಿ ಪಾವತಿಸಬೇಕೆಂದು ಹಿಂಸೆ ನೀಡಲಾಗಿದೆ. ಇದೀಗ ಮಹಾಲಕ್ಷಿö್ಮ ಮಡಿಕೇರಿಯ ಸೈಬರ್ ಕ್ರೆöÊಂ ಪೊಲೀಸರಿಗೆ ಈ ಸಂಬAಧ ದೂರು ನೀಡಿದ್ದಾರೆ.
ಇದೇ ಮಾದರಿಯಲ್ಲಿ ವಂಚನೆ ಮಾಡುತ್ತಿದ್ದ ಇಬ್ಬರನ್ನು ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ ಹಣ ಕಳಿಸುವ ಉದ್ದೇಶದಿಂದ ಚೀನಾ ಮೂಲದ ವ್ಯಕ್ತಿಗಳು ಹಲವು ಸಾಲದ ಆ್ಯಪ್ಗಳನ್ನು ಅಭಿವೃದ್ಧಿಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದರು.
ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂತಹ ವಂಚನೆಯಿAದ ದೂರ ಉಳಿಯಲು ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. ಅದಕ್ಕೂ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿತ್ತು.
ಒಂದು ವೇಳೆ ಸಾರ್ವಜನಿಕರು ಸಾಲ ಪಡೆಯಲು ಯಾವುದಾದರೊಂದು ಮೊಬೈಲ್ ಆ್ಯಪ್ ಅಥವಾ ಅಪರಿಚಿತ ಡಿಜಿಟಲ್ ಪ್ಲಾಟ್ಫಾರ್ಮ್ ಬಳಕೆ ಮಾಡುತ್ತಿದ್ದರೆ ಎಚ್ಚರಿಕೆ ವಹಿಸಬೇಕಾಗಿದೆ.
ಅನಧಿಕೃತ ಡಿಜಿಟಲ್ ಪ್ಲಾಟ್ಫಾರ್ಮ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಚ್ಚರಿಕೆ ನೀಡಿದೆ. ಆರ್ಬಿಐ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ, ಜನರು ತ್ವರಿತ ಸಾಲ ಪಡೆಯಲು ಹೋಗಿ ಡಿಜಿಟಲ್ ಲೆಂಡಿAಗ್ ಹಗರಣಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳಿಂದ ಜನರು ಸಾಲ ಪಡೆಯುವುದನ್ನು ತಪ್ಪಿಸಬೇಕು ಎಂದು ಆರ್ಬಿಐ ಹೇಳಿದೆ. ಈ ಪ್ಲಾಟ್ ಫಾರ್ಮ್/ಆ್ಯಪ್ಗಳು ಯಾವುದೇ ದಾಖಲೆಗಳನ್ನು ಪಡೆಯದೇ ತ್ವರಿತ ಸಾಲವನ್ನು ನೀಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಅಂತಹ ಸಾಲ ನೀಡುವ ಕಂಪೆನಿಗಳ ಇತಿಹಾಸವನ್ನು ಪರಿಶೀಲಿಸಲು ಮರೆಯದಿರಿ ಎಂದು ಆರ್.ಬಿ.ಐ. ಸಲಹೆ ನೀಡಿದೆ. -ವಿಶೇಷ ವರದಿ: ಮುಸ್ತಫ ಸಿದ್ದಾಪುರ