ಮಡಿಕೇರಿ, ಮೇ ೧೨: ಕೊಡಗು ಜಿಲ್ಲೆಯು ಬೆಟ್ಟಗುಡ್ಡಗಳಿಂದ ಕೂಡಿದ ಮಲೆನಾಡು ಪ್ರದೇಶವಾಗಿದ್ದು, ಇಲ್ಲಿನ ಭೂ ಹಿಡುವಳಿಗೆ ಸಂಬAಧಿಸಿದAತೆ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಗಮನ ಸೆಳೆದರು.

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮ್ಮಾ, ಜೋಡಿ, ಜಮ್ಮಬಾಣೆ, ರೇಡಿಮ್ಡ್ ಹಿಡುವಳಿದಾರರಿದ್ದು, ಒಂದು ಆರ್‌ಟಿಸಿಯಲ್ಲಿ ಸುಮಾರು ೧೦-೧೫ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬಸ್ಥರ ಹೆಸರು ಸೇರ್ಪಡೆಗೊಂಡಿರುವುದರಿAದ ರೈತರು ಸಾಲ ಹೊಂದಿಕೊಳ್ಳಲು ಪರಿಹಾರ ಪಡೆಯಲು ಹಾಗೂ ಇನ್ನಿತರ ಉದ್ದೇಶಕ್ಕೆ ಆರ್‌ಟಿಸಿ ನೀಡಲು ತೊಂದರೆಯಾಗುತ್ತಿದೆ. ಆದುದರಿಂದ ಆರ್‌ಟಿಸಿಯಲ್ಲಿ ಹೆಸರಿರುವ ಎಲ್ಲರ ಹೆಸರಿನಲ್ಲಿ ಅವರವರ ಪಾಲಿಗೆ ಬರುವಷ್ಟು ಜಾಗವನ್ನು ಅವರವರ ಹೆಸರಿಗೆ ವಿಭಾಗ ಮಾಡಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಆರ್‌ಟಿಸಿ ಮಾಡುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು.

ಹೆಚ್ಚಿನ ರೈತರ ಭೂಮಿಯು ಪೋಡಿಯಾಗದೇ ಇರುವುದರಿಂದ ರೈತರು ಅರ್ಜಿ ಸಲ್ಲಿಸಿದ್ದಲ್ಲಿ ಮಂಜೂರಾತಿಯ ಮೂಲ ಕಡತ

(ಮೊದಲ ಪುಟದಿಂದ) ಇಲ್ಲವೆಂದು ಸಬೂಬು ಹೇಳಿ ದುರಸ್ತಿ ಕಾರ್ಯ ಆಗದೇ ತೊಂದರೆಯಾಗುತ್ತಿದೆ. ಆದುದರಿಂದ ಈ ಬಗ್ಗೆ ಪರಿಶೀಲಿಸಿ ಜಾಗದ ಮೂಲ ಎಂ.ಸಿ. (ಮ್ಯೂಟೇಷನ್) ಆಧಾರದಡಿಯಲ್ಲಿ ಜಾಗವನ್ನು ದುರಸ್ತಿಪಡಿಸಲು ಕ್ರಮಕೈಗೊಳ್ಳುವುದು.

ಜಾಗದ ದುರಸ್ತಿ ಕಾರ್ಯವನ್ನು ತಹಶೀಲ್ದಾರ್ ಮತ್ತು ಸಹಾಯ ಭೂ ಮಾಪನಾ ಅಧಿಕಾರಿ (ಎಡಿಎಲ್‌ಆರ್)ರವರ ಹಂತದಲ್ಲಿಯೇ ದುರಸ್ತಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸುವುದು.

ರೈತರು ತಮ್ಮ ಒಟ್ಟು ಹಿಡುವಳಿ ೫ ಎಕರೆಗಿಂತ ಕಡಿಮೆ ಒತ್ತುವರಿ ಮಾಡಿಕೊಂಡಿರುವ ಸಿ ಮತ್ತು ಡಿ ವರ್ಗದ ಜಮೀನನ್ನು ಫಾರಂ ನಂ. ೫, ೫೩ ಮತ್ತು ೫೭ರ ಅಡಿಯಲ್ಲಿ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು, ರೈತರು ಒತ್ತುವರಿ ಮಾಡಿರುವ ಸಿ ಮತ್ತು ಡಿ ವರ್ಗದ ಜಮೀನನ್ನು ಅರಣ್ಯ ಇಲಾಖೆಯಿಂದ ವಾಪಸ್ ಪಡೆದು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಮಂಜೂರು ಮಾಡುವುದು.

ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ರೈತರು ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿದ್ದು, ಇಂತಹ ಕೆಲವು ರೈತರು ತಾವು ಮನೆ ಕಟ್ಟಿಕೊಂಡಿರುವ ಮನೆಯ ಜಾಗವು ಸಿ ಮತ್ತು ಡಿ ವರ್ಗಕ್ಕೆ ಸೇರಿದಾಗಿದ್ದು, ಈಗಾಗಲೇ ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಅರ್ಜಿ ಸಲ್ಲಿಸಿದ ರೈತರಿಗೆ ಸಿ ಮತ್ತು ಡಿ ವರ್ಗದ ಜಮೀನಿಗೆ ಹಕ್ಕು ಪತ್ರ ನೀಡುವಂತೆ ಮನವಿ ಸಲ್ಲಿಸಿದರು.