ಗೋಣಿಕೊಪ್ಪಲು, ಮೇ ೧೨: ಪೊನ್ನಂಪೇಟೆ ತಾಲೂಕಿನಲ್ಲಿ ಖಾಸಗಿ ಬಸ್ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು ನೂತನ ಅಧ್ಯಕ್ಷರಾಗಿ ಎಂ.ಪಿ. ರಾಜ ಹಾಗೂ ಕಾರ್ಯದರ್ಶಿಯಾಗಿ ಆಲಿರ ಸಮ್ಮದ್ ಆಯ್ಕೆಗೊಂಡಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಪುಲಿಯಂಡ ಅರುಣ್, ಖಜಾಂಚಿಯಾಗಿ ರವಿ, ಸಹ ಕಾರ್ಯದರ್ಶಿಯಾಗಿ ಶರೀಮ್ ನೇಮಕಗೊಂಡಿದ್ದು ಧನಂಜಯ್, ಸತೀಶ್, ಸುರೇಂದ್ರ., ಎಸ್.ಸಿ. ತಿಮ್ಮಯ್ಯ, ಕೆ.ಎಂ.ದಿನೇಶ್, ಅಜಿತ್ ಗಣಪತಿ, ಸಂಜು, ಅಶೋಕ್, ಅಚ್ಚುತ್ತನ್, ವಿ.ಆರ್.ಸುರೇಶ್, ರಂಜಿತ್, ಸತೀಶ್ (ರಾಣಿ), ಕೆ.ಸಿ.ಮಧು ಹಾಗೂ ಸತೀಶ್‌ಕುಮಾರ್ ಕೆ. ನಿರ್ದೇಶಕರುಗಳಾಗಿ ಆಯ್ಕೆಗೊಂಡಿದ್ದಾರೆ.
ಖಾಸಗಿ ಬಸ್‌ನ ಕಾರ್ಮಿಕರಿಗೆ ಸೂಕ್ತ ಭದ್ರತೆ ಇಲ್ಲದಿರುವುದು, ಖಾಯಂ ನೌಕರಿ ಸಿಗದಿರುವುದು ಮಾಸಿಕ ವೇತನ ನಿಗದಿಯಾಗದಿರುವುದು, ಖಾಸಗಿ ಬಸ್‌ನಲ್ಲಿ ದಶಕಗಳಿಂದ ಸೇವೆ ಮಾಡಿದ್ದರೂ ಕಷ್ಟದ ಸಮಯದಲ್ಲಿ ಯಾವುದೇ ಪರಿಹಾರ ಲಭಿಸದಿರುವುದು ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಸೌಲಭ್ಯಗಳನ್ನು ಪಡೆಯಲು ನೂತನ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ಅಧ್ಯಕ್ಷ ಎಂ.ಪಿ.ರಾಜ ತಿಳಿಸಿದ್ದಾರೆ.
ನೂತನ ಸಂಘದ ಉದ್ಘಾಟನಾ ಕಾರ್ಯಕ್ರಮವು ತಾ. ೧೫ ರಂದು ಸಂಜೆ ೭ ಗಂಟೆಗೆ ಗೋಣಿಕೊಪ್ಪಲುವಿನ ಪೂಜಾರಿ ಆರ್ಕೆಡ್ ಸಭಾಂಗಣದಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಚೇತನ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಎನ್. ತಿಮ್ಮಯ್ಯ, ಗೋಣಿಕೊಪ್ಪ ವೃತ್ತ ನಿರೀಕ್ಷ ಜಯರಾಮ್, ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಮಾಜಿ ಜಿ. ಪಂ.ಸದಸ್ಯ ಸಿ.ಕೆ. ಬೋಪಣ್ಣ, ಗ್ರಾ.ಪಂ. ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಿ.ಎನ್. ಪ್ರಕಾಶ್, ಕಾರ್ಮಿಕ ಸಂಘದ ಕಾನೂನು ಸಲಹೆಗಾರ ಎನ್.ಪಿ. ಮಾದಯ್ಯ, ಹಿರಿಯ ವರ್ತಕ ಸಿ.ಡಿ. ಮಾದಪ್ಪ, ಬಸ್ ಮಾಲೀಕ ಪಿ. ದಿಲನ್ ಚಂಗಪ್ಪ, ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಆಗಮಿಸಲಿದ್ದಾರೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.