ಮಡಿಕೇರಿ, ಮೇ ೧೧: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಯುಎಇ ಸಮಿತಿ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಹಾಗೂ ಖಾಝೀ ಗೌರವಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕ್ಯಾಬಿನೆಟ್ ಸದಸ್ಯ ದುಬೈನಲ್ಲಿರುವ ಹಂಝ ಎಮ್ಮೆಮಾಡು; ಕೊಡಗು ವೆಲ್ಫೇರ್ ಯುಎಇ ಸಮಿತಿ ಕಳೆದೆರಡು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು, ಒಟ್ಟು ೧೫ ಜೋಡಿಗಳಿಗೆ ವಿವಾಹ ಮಾಡಿಕೊಡಲಾಗಿದೆ. ಈ ಬಾರಿ ಐದು ಜೋಡಿಗಳಿಗೆ
ವಿವಾಹ ಮಾಡಿಸಲಿದ್ದು, ಮಾಂಗಲ್ಯ ಸೇರಿದಂತೆ ವಧು ವರರಿಗೆ
ಬೇಕಾಗುವ ಚಿನ್ನಾಭರಣಗಳು, ವಸ್ತçಗಳು, ವಾಚ್ ಎಲ್ಲವನ್ನೂ
ಸಮಿತಿ ನೀಡುತ್ತಿದೆ. ತಾ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ಕೊಂಡAಗೇರಿಯ ಶಾದಿ ಮಹಲ್‌ನಲ್ಲಿ ವಿವಾಹ ಸಮಾರಂಭ ನೆರವೇರಲಿದೆ ಎಂದು ತಿಳಿಸಿದರು.
(ಮೊದಲ ಪುಟದಿಂದ) ನಿಖಾಃ ಹಾಗೂ ದುಅವನ್ನು ಸಯ್ಯದ್ ಇಬ್ರಾಹಿಂ ಬಾಖಾಫಿ ತಂಙಳ್ ಕೊಯಿಲಾಂಡಿ ನೆರವೇರಿಸುವರು. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ನಾಯಿಬ್ ಖಾಝಿ ಉಸ್ತಾದ್ ಶಾದುಲಿ ಫ್ಯಝಿ ನೆರವೇರಿಸುವರು. ಮುಖ್ಯ ಭಾಷಣಕಾರರಾಗಿ ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಫಿ ಸಅದಿ ಆಗಮಿಸುವರು. ಕೆಎಸ್‌ಡಬ್ಲೂö್ಯಎ ಜಿಸಿಸಿ ಅಧ್ಯಕ್ಷ ಅಬೂಬಕರ್ ಹಾಜಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಹಲವು ಗಣ್ಯರು ಭಾಗವಹಿಸುವರೆಂದು ಅವರು ಮಾಹಿತಿ ನೀಡಿದರು.
ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಸಾಧಕರುಗಳನ್ನು ಸನ್ಮಾನ ಮಾಡಲಾಗುವುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜ ಸೇವಕರುಗಳಾದ ವಿ.ಪಿ. ಶಶಿಧರ್, ಪಿ.ಆರ್. ಭರತ್, ನೆರವಂಡ ಉಮೇಶ್ ಅವರುಗಳನ್ನು ಸನ್ಮಾನಿಸಲಾಗುವದೆಂದು ತಿಳಿಸಿದರು.
ಸಂಕಷ್ಟಗಳಿಗೆ ನೆರವು
ಯುಎಇ ಸಮಿತಿಯು ಜಾತಿ, ಮತ ಭೇದ ಮರೆತು ಎಲ್ಲ ಧರ್ಮದವರ ಸಂಕಷ್ಟಗಳಿಗೆ ನೆರವಾಗುತ್ತಿದೆ. ಜಿಲ್ಲೆಯ ಶೋಷಿತರ ಆಶಾಕೇಂದ್ರವಾಗಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ತರಲು ವಿದೇಶದಿಂದ ಕೈಜೋಡಿಸಿ, ಸಾಂತ್ವನ ಕಾರ್ಯಕ್ರಮಗಳ ಮೂಲಕ ಸಂಕಷ್ಟಗಳಿಗೆ ಸ್ಪಂದಿಸಲು ಕಳೆದೆರಡು ದಶಕಗಳಿಂದ ಕಾರ್ಯಾಚರಿಸುತ್ತಿದೆ. ತುರ್ತು ಅವಶ್ಯಕತೆಗೆ ಆ್ಯಂಬ್ಯುಲೆನ್ಸ್, ವಿದ್ಯಾರ್ಥಿಗಳಿಗೆ ಧನಸಹಾಯ, ಹಾಗೂ ಉದ್ಯೋಗ ಅರಸಿ ಗಲ್ಫ್ ರಾಷ್ಟçಗಳಿಗೆ ಬರುವ ಕೊಡಗಿನ ಅನಿವಾಸಿಗಳಿಗೆ ವಸತಿ, ಊಟ, ಧನ ಸಹಾಯ ಸೇರಿದಂತೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲೂ ಸಹಾಯ ಮಾಡುತ್ತಿದೆ. ಮರಣಪಟ್ಟವರ ಮೃತದೇಹವನ್ನು ಸ್ವದೇಶಕ್ಕೆ ಕೊಂಡೊಯ್ಯಲೂ ಕೂಡ ನೆರವಾಗುತ್ತಿದೆ. ಸಮಿತಿಯವರನ್ನು ಸಂಪರ್ಕಿಸಿದರೆ ಎಲ್ಲ ರೀತಿಯ ನೆರವು ನೀಡಲಾಗುವದೆಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಹಲವರಿಗೆ ಸಹಾಯ ಮಾಡಲಾಗಿದೆ. ಜಿಲ್ಲೆಗೆ ಸಮರ್ಪಿಸಿದ ಆ್ಯಂಬ್ಯುಲೆನ್ಸ್ನಿAದ ಹಲವಷ್ಟು ಮಂದಿಗೆ ಸಹಾಯವಾಗಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿಯೂ ಸಮಿತಿ ಪೂರಕವಾಗಿ ಸ್ಪಂದಿಸಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಜಿಸಿಸಿ ಅಧ್ಯಕ್ಷ ಅಬೂಬಕರ್ ಹಾಜಿ ಕೊಟ್ಟಮುಡಿ (ದುಬೈ), ಕೋಶಾಧಿಕಾರಿ ಅಹಮ್ಮದ್ ಚಾಮಿಯಾಲ್ (ಶಾರ್ಜಾ), ಕಾರ್ಯದರ್ಶಿ ಮುಜೀಬ್ ಕಡಂಗ (ಅಬೂದಾಬಿ), ಸಂಚಾಲಕ ಅರಾಫತ್ ನಾಪೋಕ್ಲು, ಕ್ಯಾಬಿನೆಟ್ ಸದಸ್ಯ ಹಾರಿಸ್ ಕುಂಜಿಲ (ದುಬೈ) ಇದ್ದರು.