ಮಡಿಕೇರಿ, ಮೇ ೧೨: ಅಕ್ರಮವಾಗಿ ಹುಲಿ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸಿಐಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.
ನಗರದ ಸುದರ್ಶನ ವೃತ್ತದ ಬಳಿ ಸಿದ್ದಾಪುರಕ್ಕೆ ತೆರಳುವ ರಸ್ತೆಯ ಬಸ್ ನಿಲ್ದಾಣದ ಸಮೀಪ ಜಡೆಸ್ವಾಮಿ ಮತ್ತು ರಾಮಚಂದ್ರ ಎಂಬಿಬ್ಬರು ಅಕ್ರಮವಾಗಿ ಹುಲಿಯ ೨೨ ಉಗುರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.