*ಗೋಣಿಕೊಪ್ಪ, ಮೇ ೧೨: ಕರ್ನಾಟಕ ನಾಯರ್ ಸೊಸೈಟಿ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಚಂದ್ರಾವತಿ ರಾಧಕೃಷ್ಣನ್, ಪ್ರಧಾನ ಕಾರ್ಯದರ್ಶಿಯಾಗಿ ಲಿನಿಷಾ ಉಣ್ಣಿಕೃಷ್ಣನ್ ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಜಯಶ್ರೀ ಸಂಜೀವ, ಸಹ ಕಾರ್ಯದರ್ಶಿಯಾಗಿ ವಿನ್ಯಾ ವೇಣುಗೋಪಾಲ್, ಖಜಾಂಚಿ ಯಾಗಿ ಗೀತಾ ವಿಜಯಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಡಳಿತ ಮಂಡಳಿ ಸದಸ್ಯರುಗಳಾಗಿ ಸರಳ ಮಣಿಲಾಲ್, ಜಯಶ್ರೀ ಸುರೇಶ್, ನಿಶಾ ಚಂದ್ರನ್, ಲೀನಾ ಲೋಹಿತಾಕ್ಷನ್, ಜ್ಯೋತಿ ಮೋಹನ್, ಶೈಲಜಾ ಪರಮಚಂದ್ರನ್, ರಶ್ಮಿ ರಾಜನ್, ಕಾರ್ತಿಯಾಯಿನಿ ಭಾಸ್ಕರನ್, ವಿಮಲ ಶ್ರೀಧರನ್, ಲೀಲಾಮಣಿ ವಿಜಯಕುಮಾರ್, ಜಾನಕಿಯಮ್ಮ, ಶೀಜಾ ಪ್ರದೀಪ್ ಇವರುಗಳನ್ನು ಮುಂದಿನ ಅವಧಿಯವರೆಗೆ ಆಡಳಿತ ಮಂಡಳಿಗೆ ಸರ್ವ ಸದಸ್ಯರ ಒಮ್ಮತದಂತೆ ಆಯ್ಕೆ ಮಾಡಲಾಗಿದೆ.