ಗೋಣಿಕೊಪ್ಪ ವರದಿ, ಮೇ ೧೦ : ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ೧೭ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು. ಮಾಜಿ ಚಾಂಪಿಯನ್ ಕಾಣತಂಡ ಮೊದಲ ಗೆಲುವಿನೊಂದಿಗೆ ಶುಭಾರಂಭ ಮಾಡಿತು.
ಕಡೇಮಾಡ ಚೌರೀರ (ಹೊದವಾಡ) ತಂಡವನ್ನು ೧೮ ರನ್‌ಗಳಿಂದ ಸೋಲಿಸಿತು. ಕಡೇಮಾಡ ೧ ವಿಕೆಟ್ ನಷ್ಟಕ್ಕೆ ೬೮ ರನ್ ಗಳಿಸಿತು. ಚೌರೀರ ೫ ವಿಕೆಟ್ ಕಳೆದುಕೊಂಡು ೨೯ ರನ್ ದಾಖಲಿಸಿತು.
ತೀತಮಾಡ ಬೇಪಡಿಯಂಡವನ್ನು ೨೦ ರನ್‌ಗಳಿಂದ ಮಣಿಸಿತು. ವಿಕೆಟ್ ಕಳೆದುಕೊಳ್ಳದೆ ತೀತಮಾಡ ೫೫ ರನ್ ಗುರಿ ನೀಡಿತು. ಬೇಪಡಿಯಂಡ ೨ ವಿಕೆಟ್ ಕಳೆದುಕೊಂಡು ೩೪ ರನ್‌ಗೆ ಕುಸಿಯಿತು.
ಚೊಟ್ಟೆಯಂಡಮಾಡ ಕರಿನೆರವಂಡ ವಿರುದ್ಧ ೮ ರನ್‌ಗಳ ಗೆಲುವು ಪಡೆಯಿತು. ಕರಿನೆರವಂಡ ೭ ವಿಕೆಟ್ ಕಳೆದುಕೊಂಡು ೫೨ ರನ್ ದಾಖಲಿಸಿತು. ಕರಿನೆರವಂಡ ೬ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು.
ಕಡೇಮಾಡ ಕೊಂಗAಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಕೊಂಗAಡ ೨ ವಿಕೆಟ್‌ಗೆ ೪೧ ರನ್ ದಾಖಲಿಸಿತು. ಕಡೇಮಾಡ ೩.೪ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.
ತಂಬುಕುತ್ತೀರ ತೀತಮಾಡ ವಿರುದ್ಧ ೩೪ ರನ್‌ಗಳ ಭರ್ಜರಿ ಗೆಲುವು ಪಡೆಯಿತು. ತಂಬುಕುತ್ತಿರ ೫ ವಿಕೆಟ್‌ಗೆ ೬೭ ರನ್, ತೀತಮಾಡ ೪ ವಿಕೆಟ್ ಕಳೆದುಕೊಂಡು ೩೩ ರನ್ ದಾಖಲಿಸಿತು.
ಚಿಮ್ಮಣಮಾಡವು ಕನ್ನಿಗಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಕನ್ನಿಗಂಡ ೧ ವಿಕೆಟ್ ನಷ್ಟಕ್ಕೆ ೬೦ ರನ್ ಗುರಿ ನೀಡಿತು. ಚಿಮ್ಮಣಮಾಡ ೨ ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಅಚ್ಚಪಂಡವು ಪುಟ್ಟಿಚಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ಪುಟ್ಟಿಚಂಡ ೩ ವಿಕೆಟ್‌ಗೆ ೩೬, ಅಚ್ಚಪಂಡ ೧ ವಿಕೆಟ್ ಕಳೆದುಕೊಂಡು ೨ ಒವರ್‌ಗಳಲ್ಲಿ ಜಯ ಪಡೆಯಿತು.
ಅಮ್ಮಣಿಚಂಡವು ೬ ವಿಕೆಟ್‌ಗಳಿಂದ ಕಳ್ಳೇಂಗಡ ವಿರುದ್ಧ ಜಯಿಸಿತು. ಅಮ್ಮಣಿಚಂಡ ೪ ವಿಕೆಟ್‌ಗಳಲ್ಲಿ ೫೮ ರನ್, ಕಳ್ಳೇಂಗಡ ೬ ವಿಕೆಟ್ ಕಳೆದುಕೊಂಡು ೩೬ ರನ್‌ಗಳಷ್ಟೆ ಸೇರಿಸಿತು.
ಮಣವಟ್ಟೀರವು ಮಡೆಯಂಡ (ಮೂರ್ನಾಡ್) ತಂಡವನ್ನು ೪ ರನ್‌ಗಳಿಂದ ಮಣಿಸಿತು. ಮಣವಟ್ಟೀರ ೫ ವಿಕೆಟ್ ನಷ್ಟಕ್ಕೆ ೫೦ ರನ್ ಗುರಿ ನೀಡಿತು. ಮಡೆಯಂಡ ೧ ವಿಕೆಟ್ ಕಳೆದುಕೊಂಡು ೪೫ ರನ್ ಮಾತ್ರ ಗಳಿಸಿತು.
ಚೊಟ್ಟೆಯಂಡಮಾಡವು ಆದೇಂಗಡ ವಿರುದ್ಧ ೧೦ ವಿಕೆಟ್ ಜಯ ಸಂಪಾದಿಸಿತು. ಆದೇಂಗಡ ೩ ವಿಕೆಟ್ ನಷ್ಟಕ್ಕೆ ೧೭ ರನ್, ಚೊಟ್ಟೆಯಂಡಮಾಡ ವಿಕೆಟ್ ಕಳೆದುಕೊಳ್ಳದೆ ಗುರಿ ಸಾಧಿಸಿತು.
ಕರಿನೆರವಂಡವು ಚೇಂದೀರವನ್ನು ೩೩ ರನ್‌ಗಳಿಂದ ಸೋಲಿಸಿತು. ಕರಿನೆರವಂಡ ೨ ವಿಕೆಟ್‌ಗೆ ೮೦ ರನ್ ಗುರಿ ನೀಡಿತು. ಚೇಂದೀರ ವಿಕೆಟ್ ನಷ್ಟವಿಲ್ಲದೆ ೪೬ ರನ್ ಮಾತ್ರ ಗಳಿಸಿತು.
ಚೆಟ್ಟಿಯಾರಂಡವು ಕಟ್ಟೇರ ವಿರುದ್ಧ ೯ ವಿಕೆಟ್ ಜಯ ಸಾಧಿಸಿತು. ಕಟ್ಟೇರ ೨ ವಿಕೆಟ್‌ಗಳಲ್ಲಿ ೩೪ ರನ್, ಚೆಟ್ಟಿಯಾರಂಡ ೧ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿತು.
ಅಜ್ಜಮಾಡಕ್ಕೆ ಚೆನ್ನಪಂಡ ವಿರುದ್ಧ ೧೦ ವಿಕೆಟ್ ಗೆಲುವು ದಕ್ಕಿತು. ಚೆನ್ನಪಂಡ ವಿಕೆಟ್ ಕಳೆದುಕೊಳ್ಳದೆ ೫೯ ರನ್ ದಾಖಲಿಸಿತು. ಅಜ್ಜಮಾಡ ೬೦ ರನ್ ಕಲೆ ಹಾಕಿತು.
ಮುಕ್ಕಾಟೀರ ( ಮಾದಾಪುರ) ತಂಡವು ಕುಟ್ಟಂಡ (ಅಮ್ಮತ್ತಿ) ವಿರುದ್ಧ ೨೪ ರನ್‌ಗಳ ಗೆಲುವು ಪಡೆಯಿತು. ಮುಕ್ಕಾಟೀರ ೪ ವಿಕೆಟ್‌ಗಳಲ್ಲಿ ೬೭ ರನ್, ಕುಟ್ಟಂಡ ೫ ವಿಕೆಟ್ ಕಳೆದುಕೊಂಡು ೪೩ ರನ್ ಮಾತ್ರ ಗಳಿಸಿತು.
ಮುಂಡAಡವು ಸಾದೇರವನ್ನು ೩೧ ರನ್‌ಗಳಿಂದ ಸೋಲಿಸಿತು. ಮುಂಡAಡ ೧ ವಿಕೆಟ್‌ಗೆ ೫೮ ರನ್, ಸಾದೇರ ೨ ವಿಕೆಟ್ ಕಳೆದುಕೊಂಡು ೨೭ ರನ್‌ಗೆ ಕುಸಿಯಿತು.
ಮಡ್ಳಂಡಕ್ಕೆ ಚೆಟ್ಟಿಯಾರಂಡ ವಿರುದ್ಧ ೧೦ ವಿಕೆಟ್ ಅಮೋಘ ಗೆಲುವು ದಕ್ಕಿತು. ಚೆಟ್ಟಿಯಾರಂಡ ೬ ವಿಕೆಟ್‌ಗೆ ೧೮ ರನ್, ಮಡ್ಲಂಡ ೨ ಓವರ್‌ಗಳಲ್ಲಿ ಗುರಿ ಸಾಧಿಸಿತು.
ಮುಕ್ಕಾಟೀರ (ಮಾದಾಪುರ) ತಂಡಕ್ಕೆ ಕಾಡ್ಯಮಾಡ ವಿರುದ್ಧ ೧೫ ರನ್‌ಗಳ ಗೆಲುವು ದೊರೆಯಿತು. ಮುಕ್ಕಾಟೀರ ೩ ವಿಕೆಟ್‌ಗಳಲ್ಲಿ ೫೮ ರನ್ ಪೇರಿಸಿತು. ಕಾಡ್ಯಮಾಡ ೬ ವಿಕೆಟ್‌ಗೆ ೪೩ ರನ್ ಗಳಿಸಿತು.
ಮುಂಡAಡಕ್ಕೆ ಕುಲ್ಲೇಟಿರ ವಿರುದ್ಧ ೬ ವಿಕೆಟ್ ಗೆಲುವು ದೊರೆಯಿತು. ಕುಲ್ಲೇಟೀರ ೫ ವಿಕೆಟ್‌ಗಳಲ್ಲಿ ೨೫ ರನ್, ಮುಂಡAಡ ೪ ವಿಕೆಟ್‌ಗಳಲ್ಲಿ ೨೭ ರನ್ ಗಳಿಸಿತು.
ಕಾಣತಂಡ ಅಜ್ಜಮಾಡವನ್ನು ೮೮ ರನ್‌ಗಳಿಂದ ಮಣಿಸಿ ಸಾಧನೆ ಮಾಡಿತು. ಕಾಣತಂಡ ೧ ವಿಕೆಟ್ ಕಳೆದುಕೊಂಡು ೧೦೩ ಗಳಿಸಿತು. ಅಜ್ಜಮಾಡ ತಂಡದ ೫ ವಿಕೆಟ್ ಕಳೆದುಕೊಂಡು ೧೫ ರನ್‌ಗಳಿಗೆ ಕುಸಿಯಿತು.
ಕುಲ್ಲೇಟೀರ ನಿಶ್ಚಲ್, ಕಾಡ್ಯಮಾಡ ಅಭಿಷೇಕ್, ಅಜ್ಜಮಾಡ ಸೋಮಯ್ಯ, ಚೆಟ್ಟಿಯಾರಂಡ ತಮ್ಮಯ್ಯ, ಸಾದೇರ ಜೀವನ್, ಕುಟ್ಟಂಡ ಸಂದೀಪ್, ಚೆನ್ನಪಂಡ ದೇವಯ್ಯ, ಕಟ್ಟೇರ ಪವನ್, ಚೇಂದೀರ ಪವನ್, ಆದೇಂಗಡ ಶಾನ್, ಮಡೆಯಂಡ ಸುತನ್, ಕಳ್ಳೇಂಗಡ ಕಾರ್ಯಪ್ಪ, ಪುಟ್ಟಿಚಂಡ ಬಿಪಿನ್, ಕನ್ನಿಗಂಡ ಪೂವಯ್ಯ, ತೀತಮಾಡ ಡೆಲ್ವಿನ್, ಕೊಂಗAಡ ಯಶಸ್, ಕರಿನೆರವಂಡ ದಿವಿನ್, ಚೌರೀರ ಪ್ರತಾಪ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಚೊಟ್ಟೆಯಂಡಮಾಡ ನಿವಿನ್ ಕರಿನೆರವಂಡ ವಿರುದ್ಧ, ತೀತಮಾಡ ಡೆಲ್ವಿನ್ ತಂಬುಕುತ್ತೀರ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.