ಗೋಣಿಕೊಪ್ಪಲು, ಮೇ ೧೦: ರೈತರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಚೆಸ್ಕಾಂ ಇಲಾಖೆಯ ನಿರ್ಲಕ್ಷö್ಯದಿಂದ ಬೆಳೆದು ನಿಂತಿರುವ ಫಸಲುಭರಿತ ಕಾಫಿ ಗಿಡಗಳು ವಿದ್ಯುತ್ ತಂತಿಯಿAದ ಸುಟ್ಟು ಕರಕಲಾಗುತ್ತಿರುವುದು ಕಂಡುಬAದಿದೆ.
ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ಕುರ್ಚಿ, ಬೀರುಗ ಭಾಗದಲ್ಲಿನ ರೈತರ ಕಾಫಿ ತೋಟಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗುತ್ತಿವೆ. ಈ ತಂತಿಗಳು ಅತ್ಯಂತ ತಳಮಟ್ಟದಲ್ಲಿದ್ದು ಇಲ್ಲಿಯತನಕ ಇವುಗಳ ಬಗ್ಗೆ ಚೆಸ್ಕಾಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಈ ಭಾಗದಲ್ಲಿ ವಿದ್ಯುತ್ ತಂತಿಗಳು ತೋಟದಲ್ಲಿ ತುಂಡಾಗಿ ಬಿದ್ದಿರುವುದು ಹೊಸತೇನಲ್ಲ.
ಆಶ್ಚರ್ಯವೆಂಬAತೆ ವಿದ್ಯುತ್ ತಂತಿಗಳು ಕಂಬದಿAದ ಸಂಪರ್ಕ ಕಡಿತಗೊಂಡಾಗ ಸಂಬAಧಿಸಿದ ಮುಖ್ಯ ಕಚೇರಿಗಳಲ್ಲಿ ಈ ಭಾಗದ ವಿದ್ಯುತ್ ಸಂಪೂರ್ಣ ನಿಲುಗಡೆ ಯಾಗಬೇಕು. ಆದರೆ ಈ ಭಾಗದಲ್ಲಿ ಹಲವು ವಿದ್ಯುತ್ ತಂತಿಗಳು ಕಂಬದಿAದ ತುಂಡಾಗಿ ಕಾಫಿ ತೋಟದ ಗಿಡಗಳ ಮೇಲೆ ಹಲವು ದಿನಗಳ ಕಾಲ ಬಿದ್ದಿದ್ದರೂ ವಿದ್ಯುತ್ ಸಂಪರ್ಕ ಮಾತ್ರ ಕಡಿತಗೊಳ್ಳುತ್ತಿಲ್ಲ.
ಕಾಫಿ ತೋಟಕ್ಕೆ ತೆರಳುವ ಕಾರ್ಮಿಕರು ಹಾಗೂ ಮಾಲೀಕರು ಗಮನಹರಿಸದಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತದೆ. ಇತ್ತೀಚೆಗೆ ಈ ಭಾಗದ ರೈತರ ಕಾಫಿ ತೋಟದಲ್ಲಿ ವಿದ್ಯುತ್ ತಂತಿಯು ತುಂಡಾಗಿ ಬಿದ್ದಿರುವುದರಿಂದ ಬೆಲೆ ಬಾಳುವ ಕಾಫಿ ಗಿಡಗಳು ವಿದ್ಯುತ್‌ತಂತಿಯ ಸ್ಪರ್ಶದಿಂದ ಸುಟ್ಟುಕರಕಲಾಗಿವೆೆ.
- ಹೆಚ್.ಕೆ. ಜಗದೀಶ್