ಮಡಿಕೇರಿ, ಮೇ ೧೦: ಕೊಡಗಿನ ಗೌರಮ್ಮ ಹಾಗೂ ಹವ್ಯಕ ಮಹಾಮಂಡಲ ಮಾತೃ ಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆ ಆಯೋಜಿಸಲಾಗಿದೆ.

ಅಖಿಲ ಭಾರತ ಮಟ್ಟದಲ್ಲಿ ಕಥಾ ಸ್ಪರ್ಧೆ ಆಯೋಜನೆಗೊಂಡಿದೆ. ಯಾವುದೇ ವಯೋಮಿತಿಯ ಹವ್ಯಕ ಮಹಿಳೆಯರು ಭಾಗವಹಿಸಬಹುದು.

ಯಾವುದೇ ಸೀಮೆಯ ಹವ್ಯಕ ಭಾಷೆಯಲ್ಲಿ ಕಥೆ ಬರೆಯಬಹುದು. ಈವರೆಗಿನ ಪ್ರಥಮ ಬಹುಮಾನಿತರಿಗೆ ಅವಕಾಶ ಇಲ್ಲ.

ಈವರೆಗೆ ಎಲ್ಲೂ ಪ್ರಕಟವಾಗದ, ಭಾಷಾಂತರ ಅಲ್ಲದ ಸಾಮಾಜಿಕ ಕಥೆಯಾಗಿರಬೇಕು. ಎಂಟು ಪುಟಕ್ಕೆ ಮೀರದೆ, ಕಾಗದದ ಒಂದೇ ಬದಿಗೆ ಸ್ಪುಟವಾಗಿ, ಟೈಪ್ ಮಾಡಿದ್ದಾದರೆ ಉತ್ತಮ (ಸಾಧಾರಣ ಎರಡು ಸಾವಿರ ಪದಗಳು) ಹೆಸರು, ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಕಥೆ ಬರೆದ ಕಾಗದದಲ್ಲಿ ಹೆಸರೂ ಇರಬಾರದು. ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸುವುದು ಸ್ವೀಕೃತವಾಗದು. ವಿಜೇತರಿಗೆ ಸ್ಮರಣಿಕೆ ಜೊತೆಗೆ (ಪ್ರಥಮ) ಮೂರು ಸಾವಿರ, (ದ್ವಿತೀಯ) ಎರಡು ಸಾವಿರ, (ತೃತೀಯ) ಒಂದು ಸಾವಿರ ರೂಪಾಯಿಗಳು ನೀಡಲಾಗುವುದು.

ಆಸಕ್ತರು ಕಥೆ ಕಳುಹಿಸಬೇಕಾದ ಕೊನೆಯ ದಿನಾಂಕ ೩೧-೫-೨೦೨೨. ವಿಳಾಸ: ವಿಜಯಾ ಸುಬ್ರಮಣ್ಯ ಕುಂಬಳೆ, ಸಂಚಾಲಕಿ, ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ, ಕಾರ್ತಿಕೇಯ, ನಾರಾಯಣ ಮಂಗಲ, ಪೋಸ್ಟ್, ಕುಂಬಳೆ - ೬೭೧೩೨೧, ಕಾಸರಗೋಡು ಜಿಲ್ಲೆ., ಮೊ. ೮೫೪೭೨೧೪೧೨೫, ೬೨೩೮೫೩೭೨೬೭.