ಸೋಮವಾರಪೇಟೆ, ಮೇ ೧೦: ಇಲ್ಲಿನ ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ತಾಲೂಕಿನ ಒಕ್ಕಲಿಗ ಜನಾಂಗ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಸಂಚಾಲಕ ಬಿ.ಜೆ. ದೀಪಕ್ ತಿಳಿಸಿದ್ದಾರೆ.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೧ ಮತ್ತು ೨೨ ರಂದು ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರಕಾರಿ ಪದವಿ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ತಾ. ೨೧ ರಂದು ಪುರುಷರಿಗೆ ವಾಲಿಬಾಲ್, ಕ್ರಿಕೆಟ್, ಓಟದ ಸ್ಪರ್ಧೆ, ತಾ. ೨೨ ರಂದು ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ನಿಧಾನ ನಡಿಗೆ, ನಿಧಾನ ಬೈಕ್ ಚಾಲನೆ, ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲಾ ವಯೋಮಾನದವರಿಗೂ ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಪುರುಷರ ವಾಲಿಬಾಲ್ ಹಾಗೂ ಕ್ರಿಕೆಟ್ ಸ್ಫರ್ಧೆಯಲ್ಲಿ ಭಾಗವಹಿಸುವ ತಂಡಗಳು ಕ್ರೀಡಾ ಸಮಿತಿಯ ನಿರ್ದೆಶಕರಾದ ಚೇತನ್ (ಮೊ. ೯೭೪೩೫೭೭೭೮೧) ಹಾಗೂ ಮಹಿಳೆಯರ ವಿಭಾಗದ ಸ್ಫರ್ಧಾ ತಂಡಗಳು ಲೋಕೇಶ್ವರಿ ಗೋಪಾಲ್ (೯೪೪೮೧೦೦೬೯೦) ಇವರನ್ನು ಸಂಪರ್ಕಿಸಿ ತಾ. ೧೭ ರೊಳಗಾಗಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕೆAದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ನಿರ್ದೇಶಕರಾದ ನಿತೀಶ್ ಮಂದಣ್ಣ, ದಯಾನಂದ, ಲೋಕೇಶ್ವರಿ ಗೋಪಾಲ್ ಮತ್ತು ಪೃಥ್ವಿ ಉಪಸ್ಥಿತರಿದ್ದರು.