ಕೂಡಿಗೆ, ಮೇ ೧೧: ಹೆಬ್ಬಾಲೆ ಗ್ರಾಮ ಪಂಚಾಯತಿ ಅಧೀನಕ್ಕೆ ಸೇರಿದ ಸರ್ಕಲ್‌ನಲ್ಲಿರುವ ೨೦ ಅಂಗಡಿ ಮಳಿಗೆಗಳನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯ ತೀರ್ಮಾನದಂತೆ ತೆರವು ಮಾಡಲಾಯಿತು.
ಕಳೆದ ೧೫ ರಿಂದ ೨೦ ವರ್ಷಗಳಿಂದ ಗ್ರಾಮ ಪಂಚಾಯಿತಿ ಅಂಗಡಿ ಮಳಿಗೆಯಲ್ಲಿ ಅಂಗಡಿಗಳನ್ನು ನಡೆಸುತ್ತಾ ಬಂದಿದ್ದ ಮಾಲೀಕರು ಗ್ರಾಮ ಪಂಚಾಯಿತಿ ನಿಯಮಗಳ ಅನುಸಾರವಾಗಿ ಟೆಂಡರ್ ಪ್ರಕ್ರಿಯೆಗೆ ಭಾಗವಹಿಸದೆ, ಗ್ರಾ.ಪಂ.ಯ ಕಾಯ್ದೆಗಳ ನಿಯಮಗಳನ್ನು ಅನುಸರಿಸದೆ ಇದರ ಜೊತೆಗೆ ಕೆಲ ಅಂಗಡಿ ಬಾಡಿಗೆಗೆ ದಾರರು ನ್ಯಾಯಾಲಯದ ಮೆಟ್ಟಿಲು ಏರಿ ನ್ಯಾಯಾಲಯದಲ್ಲಿ ಗ್ರಾಮ ಪಂಚಾಯಿತಿ ಪರವಾಗಿ ತೀರ್ಪು ಬಂದ ಹಿನ್ನೆಲೆ ಅಂಗಡಿ ಮಳಿಗೆಗಳನ್ನು ಇಂದು ತೆರವುಗೊಳಿಸಲಾಯಿತ್ತು.
ಗ್ರಾ.ಪಂ. ವತಿಯಿಂದ ೨೦ ಅಂಗಡಿ ಮಳಿಗೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತು. ಕೆಲ ಬಾಡಿಗೆದಾರು ಇಂದು ಗ್ರಾ.ಪಂ.ಗೆ ಬಂದು ಕೆಲ ದಿನಗಳವರೆಗೆ ರಿಯಾ ಯಿತಿ ನೀಡುವಂತೆ ಮನವಿಯನ್ನು ಮಾಡಿದರು. ಆದರೆ ಇಂದು ಗ್ರಾ.ಪಂ. ತುರ್ತು ಸಭೆಯನ್ನು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅಧ್ಯಕ್ಷತೆಯಲ್ಲಿ ಸಭಾಂಗಣದಲ್ಲಿ ನಡೆಸಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ತೀರ್ಮಾನದಂತೆ ಮತ್ತು ಮಾಸಿಕ ಸಭೆಯ ನಿರ್ಣಯದಂತೆ ತೆರವು ಮಾಡಲು ನಿರ್ಧರಿಸಲಾಯಿತು.
ಗ್ರಾ.ಪಂ.ಗೆ ಅಗಮಿಸಿದ ಬಾಡಿಗೆದಾರರು ಗ್ರಾ.ಪಂ. ನಿಯಮಗಳಿಗೆ ಬದ್ಧರಾಗಿ ಸ್ವತಹ ತಾವೇ ತೆರವು ಮಾಡಿಕೊಡುವುದಾಗಿ ತಿಳಿಸಿದರು. ಅದರಂತೆಯೇ ತೆರವು ಯಿತಿ ನೀಡುವಂತೆ ಮನವಿಯನ್ನು ಮಾಡಿದರು. ಆದರೆ ಇಂದು ಗ್ರಾ.ಪಂ. ತುರ್ತು ಸಭೆಯನ್ನು ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅಧ್ಯಕ್ಷತೆಯಲ್ಲಿ ಸಭಾಂಗಣದಲ್ಲಿ ನಡೆಸಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ತೀರ್ಮಾನದಂತೆ ಮತ್ತು ಮಾಸಿಕ ಸಭೆಯ ನಿರ್ಣಯದಂತೆ ತೆರವು ಮಾಡಲು ನಿರ್ಧರಿಸಲಾಯಿತು.
ಗ್ರಾ.ಪಂ.ಗೆ ಅಗಮಿಸಿದ ಬಾಡಿಗೆದಾರರು ಗ್ರಾ.ಪಂ. ನಿಯಮಗಳಿಗೆ ಬದ್ಧರಾಗಿ ಸ್ವತಹ ತಾವೇ ತೆರವು ಮಾಡಿಕೊಡುವುದಾಗಿ ತಿಳಿಸಿದರು. ಅದರಂತೆಯೇ ತೆರವು ಯಶಶ್ವನಿ, ರತ್ನಮ್ಮ, ಲತಾ ಸೇರಿದಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್, ಕಾರ್ಯದರ್ಶಿ ಶೇರಣ್ಣಪ್ಪ ಮತ್ತಿತರರಿದ್ದರು.
ಅಸಮಾಧಾನ: ಕಾರ್ಯಾಚರಣೆ ಸಂದರ್ಭ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ನೀಡುವಂತೆ ಪೊಲೀಸ್ ಇಲಾಖೆಗೆ ಗ್ರಾ.ಪಂ.ಯ ಮೂಲಕ ಮನವಿಯನ್ನು ಸಲ್ಲಿಸಲಾಯಿತು. ಆದರೆ ಕುಶಾಲನಗರ ಪೊಲೀಸರು ಬಂದೋಬಸ್ತ್ ನೀಡಲು ನಿರಾಕರಿಸಿದರು ಎಂದು ಗ್ರಾ.ಪಂ. ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದರು.