ಮಡಿಕೇರಿ, ಮೇ ೧೧: ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಕೊಡಗಿನವರಾದ ಶಾಂತೆಯAಡ ವೀಣಾ ಅಚ್ಚಯ್ಯ ಅವರ ಅಧಿಕಾರಾವಧಿ ಮುಕ್ತಾಯದ ಹಂತ ತಲುಪಿದೆ. ಜೂನ್ ೧೪ ರಂದು ರಾಜ್ಯದ ೭ ವಿಧಾನಪರಿಷತ್ ಸದಸ್ಯರ ಅಧಿಕಾರ ಕೊನೆಗೊಳ್ಳಲಿದ್ದು, ಇವರಲ್ಲಿ ವೀಣಾ ಅಚ್ಚಯ್ಯ ಅವರು ಸೇರಿದ್ದಾರೆ.
ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ಕಳೆದ ಆರು ವರ್ಷಗಳ ಹಿಂದೆ ಚುನಾಯಿತರಾಗಿದ್ದ ಸದಸ್ಯರುಗಳಾದ ಲಕ್ಷö್ಮಣ್ ಸಂಗಪ್ಪ ಸವದಿ, ರಾಮಪ್ಪತಿಮ್ಮಾಪುರ್, ಅಲ್ಲಂವೀರ ಭದ್ರಪ್ಪ, ಹೆಚ್.ಎಂ. ರಮೇಶ್‌ಗೌಡ, ವೀಣಾ ಅಚ್ಚಯ್ಯ, ನಾರಾಯಣಸ್ವಾಮಿ ಕೆ.ವಿ. ಹಾಗೂ ಲಹರ್ ಸಿಂಗ್ ಸಿರೋಯ ಅವರುಗಳು ನಿವೃತ್ತರಾಗಲಿದ್ದಾರೆ.
ತೆರವಾಗಲಿರುವ ಸ್ಥಾನಕ್ಕೆ ಚುನಾವಣೆ ನಡೆಸಲು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮೇ ೧೭ ರಂದು ಅಧಿಸೂಚನೆ ಹೊರಬೀಳಲಿದ್ದು, ತಾ. ೨೪ಕ್ಕೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ತಾ. ೨೭ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದು, ಅಗತ್ಯವಾದರೆ ಜೂನ್ ೩ ರಂದು ಬೆಳಿಗ್ಗೆ ೯ ರಿಂದ ಸಂಜೆ ೪ರವರೆಗೆ ಚುನಾವಣೆ ನಡೆಯಲಿದೆ.
ರಾಜ್ಯ ವಿಧಾನಸಭೆಯ ಮೂಲಕ ವೀಣಾ ಅಚ್ಚಯ್ಯ ಅವರು, ಕಾಂಗ್ರೆಸ್ ಪಕ್ಷದ ಮೂಲಕ ಎಂಎಲ್‌ಸಿಯಾಗಿ ೨೦೧೬ರಲ್ಲಿ ಚುನಾಯಿತರಾಗಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್‌ನಿAದ ಮೂವರು ಹಾಗೂ ಜೆಡಿಎಸ್‌ನಿಂದ ಇಬ್ಬರು ಎಂಎಲ್‌ಸಿಗಳಾಗುವ ಅವಕಾಶ ಪಡೆದಿದ್ದರು. ಆದರೆ ಪ್ರಸ್ತುತ ರಾಜಕೀಯದಲ್ಲಿ ಬದಲಾವಣೆಯಾಗಿದೆ. ಇದೀಗ ರಾಜ್ಯವಿಧಾನ ಸಭೆಯಲ್ಲಿ ಬಿಜೆಪಿ ಸುಮಾರು ೧೨೦ ಸದಸ್ಯ ಬಲ ಹೊಂದಿದ್ದು, ಈ ಬಾರಿ ನಾಲ್ವರು ಬಿಜೆಪಿಯಿಂದಲೇ ಮೇಲ್ಮನೆ ಪ್ರವೇಶಿಸುವ ಅವಕಾಶವಿದೆ. ಕಾಂಗ್ರೆಸ್‌ನಿAದ ಇಬ್ಬರು ಹಾಗೂ ಜೆಡಿಎಸ್ ಮೂಲಕ ಒಬ್ಬರು ಎಂಎಲ್‌ಸಿಯಾಗಿ ನೇಮಕವಾಗುವ ಸಾಧ್ಯತೆಯಿದ್ದು, ಯರ‍್ಯಾರು ಈ ಬಾರಿ ಅವಕಾಶ ಪಡೆಯಲಿದ್ದಾರೆ ಎಂದು ಕಾದುನೋಡಬೇಕಿದೆ.