ಮಡಿಕೇರಿ, ಮೇ ೧೧: ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವ ಉದ್ಯೋಗ ಆಸಕ್ತರಿಗೆ ಸೂಕ್ತ ಭದ್ರತೆ ಹಾಗೂ ಸುರಕ್ಷತೆ ಒದಗಿಸುವಲ್ಲಿ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಅಂರ‍್ರಾಷ್ಟಿçÃಯ ವಲಸೆ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಅವಿನಾಶ್ ಅವರು ಮಾಹಿತಿ ನೀಡಿದರು.
ಅಂರ‍್ರಾಷ್ಟಿçÃಯ ವಲಸೆ ಕೇಂದ್ರದ ಪರಿಚಯ ಮತ್ತು ಅನುಷ್ಠಾನ ಕುರಿತು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸೇವಾ ಪೂರೈಕೆದಾರರಾಗಿ ‘ಪಬ್ಲಿಕ್ ಅಫರ‍್ಸ್ ಸೆಂಟರ್’ ಸಂಸ್ಥೆಯು ಅಂರ‍್ರಾಷ್ಟಿçÃಯ ವಲಸೆ ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಜಿಲ್ಲೆಯ ಕೌಶಲ್ಯಯುತ ಯುವಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕೌಶಲ್ಯಯುತ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅವಿನಾಶ್ ವಿವರಿಸಿದರು.
ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಈ ಸಂಸ್ಥೆಗಳ ಮೂಲಕ ಕರ್ನಾಟಕ ರಾಜ್ಯ ನೇಮಕಾತಿ ಏಜೆನ್ಸಿಗಳಾಗಿ ನೋಂದಾಯಿಸಲಾಗಿದೆ. ಈ ಸಂಸ್ಥೆಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಪ್ರೊಟೆಕ್ಟ್ ಜನರಲ್ ಆಫ್ ಎಮಿಗ್ರೆಂಟ್ಸ್, ವಿದೇಶಾಂಗ ವ್ಯವಹಾರ ಸಚಿವಾಲಯದೊಂದಿಗೆ ನೋಂದಾಯಿಸಿಕೊAಡಿರುವ ನೇಮಕಾತಿ ಏಜೆನ್ಸಿಯಾಗಿ ಮಾನ್ಯತೆ ಪಡೆದಿದೆ ಎಂದು ಮಾಹಿತಿ ನೀಡಿದರು.
ಅಂರ‍್ರಾಷ್ಟಿçÃಯ ವಲಸೆ ವಿಭಾಗದ ಸ್ವಾಮಿ ಮಾತನಾಡಿ, ಉದ್ಯೋಗ ಅರಸಿ ಹಲವರು ವಿದೇಶಗಳಿಗೆ ತೆರಳುತ್ತಾರೆ. ಅವರಿಗೆ ಸೂಕ್ತ ಭದ್ರತೆ ಮತ್ತು ಸುರಕ್ಷತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುವಂತೆ ಕೋರಿದರು. ಚಿಕ್ಕಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಯೋಗ ವಿಜ್ಞಾನ ವಿಭಾಗದ ಡಾ.ಶ್ಯಾಮಸುಂದರ ಜ್ಞಾನ ಕಾವೇರಿ ಕ್ಯಾಂಪಸ್ ಚಟುವಟಿಕೆ, ಬಸ್ ಸೌಲಭ್ಯ, ಮತ್ತಿತರ ಬಗ್ಗೆ ಹಲವು ವಿಚಾರಗಳ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಶ್ರೀಧರ ಹೆಗ್ಡೆ ಕೌಶಲ್ಯ ತರಬೇತಿ ಸಂಬAಧಿಸಿದAತೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು. ಯುವಜನರ ಸುರಕ್ಷತೆ ಮತ್ತು ಭದ್ರತೆ ಅತಿ ಮುಖ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಉಮಾ, ನಗರಸಭೆಯ ಕೌಶಲ್ಯಾಭಿವೃದ್ಧಿ ವಿಭಾಗದ ರೇಖಾ, ಕೌಶಲ್ಯಾಭಿವೃದ್ಧಿ ವಿಭಾಗದ ರೂಪ, ಇತರರು ಇದ್ದರು.
ಮತ್ತಷ್ಟು ಮಾಹಿತಿ: ಸಾಗರೋತ್ತರ ಉದ್ಯೋಗ ಮಾರ್ಗದೊಂದಿಗೆ ಕರ್ನಾಟಕದ ಯುವಕ, ಯುವತಿಯರಿಗೆ ಸಹಾಯ ಮಾಡಿ ಮತ್ತು ಜಾಗತಿಕ ಮಾರುಕಟ್ಟೆಗಾಗಿ ನುರಿತ, ತರಬೇತಿ ಪಡೆದ ಮತ್ತು ಪ್ರಾಮಾಣೀಕೃತ ಹೊರ ದೇಶಕ್ಕೆ ಉದ್ಯೋಗಕ್ಕಾಗಿ ಕಳುಹಿಸುವುದು. ವಲಸೆ ಮಾಹಿತಿ ಕೇಂದ್ರ ಸ್ಥಾಪನೆ, ಆಸಕ್ತ ಯುವಕರ ಮಾರ್ಗದರ್ಶಿ ಮತ್ತು ಪ್ರೋಫೈಲ್‌ಗಳನ್ನು ನೋಂದಾಯಿಸಲು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ವಲಸೆ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ.
ಪೂರ್ವ ನಿರ್ಧಾರ, ವಿದೇಶದಲ್ಲಿನ ಉದ್ಯೋಗಾವಕಾಶ ಗಳು, ಸಮಾಲೋಚನೆ ಮತ್ತು ಮಾರ್ಗದರ್ಶನ, ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ (ಎಂಐಎಸ್) ವ್ಯವಸ್ಥೆಯಲ್ಲಿ ನೋಂದಾಯಿಸುವುದು.
ನೇಮಕಾತಿ, ವಿದೇಶಿ ಉದ್ಯೋಗದಾತರ ಬೇಡಿಕೆಗೆ ಅನುಗುಣವಾಗಿ ಅರ್ಜಿದಾರರನ್ನು ಆಯ್ಕೆ ಮಾಡುವುದು, ದಾಖಲೀಕರಣ ಹಾಗೂ ಇತರ ಸೇವೆಗಳ ಮಾಹಿತಿ, ಅಭ್ಯರ್ಥಿಯ ನೇಮಕಾತಿಗೆ ಅನ್ವಯಿಸುವ ಎಲ್ಲಾ ಕಾರ್ಯ ವಿಧಾನಗಳು.
ಪೂರ್ವ ನಿರ್ಗಮನ, ವಿದೇಶಿ ಉದ್ಯೋಗ(ಎಫ್‌ಇ)ತರನ್ನು ಪರಿಚಯಿಸುವುದು. ದಾಖಲಾತಿಗಳ ಪರಿಶೀಲನೆ. ಕರಾರಿನ ವಿವರಣೆಗಳನ್ನು ತಿಳಿಸುವುದು. ಪೂರ್ವ ನಿರ್ಗಮನ ಮಾರ್ಗದರ್ಶನ ಮತ್ತು ತರಬೇತಿ (ಎಫ್‌ಡಿಓಟಿ) ಒದಗಿಸುವುದು. ಪ್ರಯಾಣಕ್ಕೆ ಸಂಬAಧಿಸಿದ ಎಲ್ಲಾ ಮಾಹಿತಿಗಳನ್ನು ಒದಗಿಸುವುದು.
ವಿದೇಶದಲ್ಲಿ ಕೆಲಸ ಮಾಡುವವರಿಗೆ ಎಲ್ಲಾ ಸಮಯದಲ್ಲೂ ಕಲ್ಯಾಣ ಕ್ರಮಗಳ ಹಾಗೂ ಸುರಕ್ಷತೆ ಮತ್ತು ರಕ್ಷಣೆ ಕ್ರಮಗಳ ಬಗ್ಗೆ ಖಚಿತಪಡಿಸಿಕೊಳ್ಳುವುದು. ವಿದೇಶಿ ಉದ್ಯೋಗದಾತರೊಂದಿಗೆ ಸಂಪರ್ಕ, ಭಾರತೀಯ ಎಂಬೆಸ್ಸಿ/ ಕಾನ್ಸುಲೇಟೆಗಳಿಂದ ನೆರವು. ವಿಮೆ ಮೊತ್ತವನ್ನು ಪಡೆಯುವುದರ ಬಗ್ಗೆ ಹಾಗೂ ಕಲ್ಯಾಣ ನಿಧಿಯಿಂದ ಸಹಾಯ ಪಡೆಯುವುದರ ಬಗ್ಗೆ ಮಾಹಿತಿ.