ಗೋಣಿಕೊಪ್ಪ ವರದಿ, ಮೇ ೧೧: ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಚೆಕ್ಕೇರ ೨ನೇ ಗೆಲುವಿನ ಮೂಲಕ ಮುನ್ನಡೆ ಕಾಯ್ದುಕೊಂಡಿದೆ. ಮಂದನೆರವAಡ ತಂಡವನ್ನು ಸೋಲಿಸಿ ಚೆಕ್ಕೇರ ಗೆಲುವಿನ ನಾಗಾಲೋಟ ಮುಂದುವರಿಸಿತು. ೧೭ ತಂಡಗಳು ಗೆಲುವಿನ ನಗೆ ಬೀರಿದವು.
ಚೆಕ್ಕೇರ ಮಂದನೆರವAಡವನ್ನು ೫೫ ರನ್‌ಗಳಿಂದ ಮಣಿಸಿತು. ವಿಕೆಟ್ ನಷ್ಟವಿಲ್ಲದೆ ಚೆಕ್ಕೇರ ೮೯ ರನ್ ಗುರಿ ನೀಡಿತು. ಮಂದನೆರವAಡ ೫ ವಿಕೆಟ್ ಕಳೆದುಕೊಂಡು ೩೩ ರನ್‌ಗಳಿಗೆ ಕುಸಿಯಿತು.
ಚಿಯಕ್‌ಪೂವಂಡವು ಬಲ್ಲಚಂಡವನ್ನು ೬ ವಿಕೆಟ್‌ಗಳಿಂದ ಮಣಿಸಿತು. ಬಲ್ಲಚಂಡ ೨ ವಿಕೆಟ್ ಕಳೆದುಕೊಂಡು ೩೪ ರನ್, ಚೀಯಕ್‌ಪೂವಂಡ ೪ ವಿಕೆಟ್ ಕಳೆದುಕೊಂಡು ೩೮ ರನ್ ಸಿಡಿಸಿತು.
ಹಂಚೇಟೀರ ಪಾರುವಂಗಡ ವಿರುದ್ಧ ೯ ವಿಕೆಟ್ ಗೆಲುವಿನ ಸಾಧನೆ ಮಾಡಿತು. ಪಾರುವಂಗಡ ೫ ವಿಕೆಟ್‌ಗಳಿಗೆ ೧೭ ರನ್ ಗುರಿ ನೀಡಿತು. ಹಂಚೇಟೀರ ೨ ಓವರ್‌ಗಳಲ್ಲಿ ಗುರಿ ಸಾಧನೆ ಮಾಡಿತು.
ಅಳಮೇಂಗಡ ಮುಕ್ಕಾಟೀರ (ಪುಲಿಕೋಟ್) ವಿರುದ್ಧ ೫ ರನ್‌ಗಳ ಗೆಲುವು ಪಡೆಯಿತು. ಅಳಮೇಂಗಡ ೨ ವಿಕೆಟ್ ನಷ್ಟಕ್ಕೆ ೪೪ ರನ್ ಗಳಿಸಿತು. ಮುಕ್ಕಾಟೀರ ೨ ವಿಕೆಟ್ ಕಳೆದುಕೊಂಡು ೩೯ ರನ್ ಗಳಷ್ಟೆ ಸಂಪಾದಿಸಿತು.
ಮAಡೇಪAಡ ಬೊಳ್ಳಚೆಟ್ಟೀರ ವಿರುದ್ಧ ೭ ವಿಕೆಟ್ ಗೆಲುವು ಪಡೆಯಿತು. ಬೊಳ್ಳಚೆಟ್ಟೀರ ೫ ವಿಕೆಟ್ ಕಳೆದುಕೊಂಡು ೧೮ ರನ್ ಗುರಿ ನೀಡಿತು. ಮಂಡೇಪAಡ ೩ ಓವರ್‌ಗಳಲ್ಲಿ ಗೆದ್ದು ಬೀಗಿತು.
ಮಂಡುವAಡಕ್ಕೆ ಮಚ್ಚಾರಂಡ ವಿರುದ್ಧ ೧೦ ರನ್‌ಗಳ ಜಯ ದೊರೆಯಿತು. ಮಂಡುವAಡ ೪ ವಿಕೆಟ್ ನಷ್ಟಕ್ಕೆ ೩೪ ರನ್, ಮಚ್ಚಾರಂಡ ೨ ವಿಕೆಟ್ ನಷ್ಟಕ್ಕೆ ೨೪ ರ್ ದಾಖಲಿಸಿತು.
ಬಾಳೆಯಡಕ್ಕೆ ಚೆನಿಯಪಂಡ ವಿರುದ್ಧ ೭ ರನ್ ಗೆಲುವು ದೊರೆಯಿತು. ಬಾಳೆಯಡ ೧ ವಿಕೆಟ್‌ಗೆ ೪೯ ರನ್, ಚೆನಿಯಪಂಡ ೧ ವಿಕೆಟ್‌ಗಳಲ್ಲಿ ೪೨ ರನ್ ಮಾತ್ರ ಗಳಿಸಿತು.
ಐಚಂಡ ಮಂಡೀರ ವಿರುದ್ಧ ೯ ವಿಕೆಟ್‌ಗಳಲ್ಲಿ ಜಯ ಸಾಧನೆ ಮಾಡಿತು. ಐಚಂಡ ೧ ವಿಕೆಟ್‌ಗೆ ೪೨ ರನ್, ಮಂಡೀರ ೫ ವಿಕೆಟ್‌ಗಳಲ್ಲಿ ೩೮ ರನ್ ದಾಖಲಿಸಿತು.
ಬೊಜ್ಜಂಗಡ ಕಾಕಮಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ಕಾಕಮಾಡ ೩ ವಿಕೆಟ್‌ಗೆ ೧೮ ರನ್, ಬೊಜ್ಜಂಗಡ ೨ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಬಾಳೆಯಡ ತಂಡವು ಕೊಂಗಾAಡವನ್ನು ೧೮ ರನ್‌ಗಳಿಂದ ಸೋಲಿಸಿತು. ಬಾಳೆಯಡ ೨ ವಿಕೆಟ್‌ಗಳಲ್ಲಿ ೪೬ ರನ್, ಕಂಗಾAಡ ೨ ವಿಕೆಟ್ ಕಳೆದುಕೊಂಡು ೨೯ ಕ್ಕೆ ಕುಸಿಯಿತು.
ಮಲ್ಲಾಜೀರ ಚಂಗುಲAಡವನ್ನು ೧೦ ವಿಕೆಟ್‌ಗಳಿಂದ ಸೋಲಿಸಿತು. ಚಂಗುಲAಡ ೪ ವಿಕೆಟ್‌ಗೆ ೨೭ ರನ್ ಗುರಿ ನೀಡಿತು. ಮಲ್ಲಾಜೀರ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧನೆ ಮಾಡಿತು.
ಐಚಂಡಕ್ಕೆ ನಂದೇಟೀರ ವಿರುದ್ಧ ೫ ವಿಕೆಟ್ ರೋಚಕ ಗೆಲುವು ದೊರೆಯಿತು. ನಂದೇಟೀರ ೧ ವಿಕೆಟ್‌ಗೆ ೪೪ ರನ್, ಐಚಂಡ ೫ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಚಾರಿಮಂಡವು ತೀತಿಮಾಡವನ್ನು ೧೦ ವಿಕೆಟ್‌ಗಳಿಂದ ಮಣಿಸಿತು. ತೀತಿಮಾಡ ೧ ವಿಕೆಟ್‌ಗೆ ೪೪ ರನ್ ಗುರಿ ನೀಡಿತು. ಚಾರಿಮಂಡ ೪೬ ರನ್ ಗಳಿಸಿತು.
ಮೇವಂಡವು ದೇಯಂಡವನ್ನು ೯ ವಿಕೆಟ್‌ಗಳಿಂದ ಸೋಲಿಸಿತು. ದೇಯಡ ೩ ವಿಕೆಟ್‌ಗೆ ೪೬ ರನ್, ಮೇವಡ ೧ ವಿಕೆಟ್ ಕಳೆದುಕೊಂಡು ೫೦ ರನ್ ದಾಖಲಿಸಿತು.
ನೆಲ್ಲಚಂಡ ಬೊಳ್ತಂಡ ವಿರುದ್ಧ ೧೪ ರನ್‌ಗಳ ಜಯ ಸಾಧನೆ ಮಾಡಿತು. ನೆಲ್ಲಚಂಡ ೩ ವಿಕೆಟ್‌ಗಳಲ್ಲಿ ೪೫ ರನ್ ಪೇರಿಸಿತು. ಬೊಳ್ತಂಡ ೨ ವಿಕೆಟ್ ಕಳೆದುಕೊಂಡು ೨೧ ರನ್ ಸೇರಿಸಿತು.
ಕರೋಟೀರ ಬೈರೇಟೀರ ವಿರುದ್ಧ ಸೂಪರ್ ಓವರ್‌ನಲ್ಲಿ ಗೆಲುವು ಪಡೆದುಕೊಂಡಿತು. ಸೂಪರ್ ಓವರ್‌ನಲ್ಲಿ ೧೯ ರನ್ ಗುರಿ ಬೆನ್ನತ್ತಿದ ಬೈರೇಟೀರ ೩ ರನ್ ಗಳಿಸುವಷ್ಟರಲ್ಲಿ ೨ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ನಿಗದಿತ ಓವರ್‌ನಲ್ಲಿ ಬೈರೇಟೀರ ೫ ವಿಕೆಟ್‌ಗೆ ೪೯ ರನ್, ಕರೋಟೀರ ೨ ವಿಕೆಟ್ ಕಳೆದುಕೊಂಡು ಟೈ ಸಾಧನೆ ಮಾಡಿತು.
ಪೊನ್ನೋಲ್ತಂಡವು ನಂಬುಡುಮಾಡ ವಿರುದ್ಧ ಸೂಪರ್ ಓವರ್‌ನಲ್ಲಿ ಜಯಿಸಿತು. ಪೊನ್ನೋಲ್ತಂಡ ೧ ವಿಕೆಟ್‌ಗೆ ೫೭ ರನ್, ನಂಬುಡುಮಡ ೨ ವಿಕೆಟ್‌ಗೆ ಟೈ ಮಾಡಿಕೊಂಡಿತು. ಸೂಪರ್ ಓವರ್‌ನಲ್ಲಿ ನಂಬುಡುಮಾಡ ನೀಡಿದ ೨ ರನ್‌ಗಳ ಗುರಿಯನ್ನು ಪೊನ್ನೋಲ್ತಂಡ ವಿಕೆಟ್ ನಷ್ಟವಿಲ್ಲದೆ ಸಾಧಿಸಿತು.
ಪಾರುವಂಗಡ ಪೂಣಚ್ಚ, ಮುಕ್ಕಾಟೀರ ದೀಪಕ್, ಬೈರೇಟೀರ ಮದನ್, ಮಂದನೆರವAಡ ವೈಭವ್, ಬೊಳ್ಳಚೆಟ್ಟೀರ ಅಚ್ಚಪ್ಪ, ಮಚ್ಚಾರಂಡ ಕಿರಣ್, ಬಲ್ಲಚಂಡ ಕಿರಣ್, ನಂಬುಡುಮಾಡ ಅಪ್ಪಣ್ಣ, ಚೆನಿಯಪಂಡ ಬೋಪಯ್ಯ, ಮಂಡೀರ ಬೋಪಣ್ಣ, ಕಾಕಮಾಡ ಆದರ್ಶ್, ಕಂಗಾAಡ ಸಂಪತ್, ಚಂಗುಲAಡ ಪವನ್, ನಂದೇಟೀರ ನವೀನ್, ತೀತಿಮಾಡ ಬಿದ್ದಪ್ಪ, ದೇಯಂಡ ಪೂವಣ್ಣ, ಬೊಳ್ತಂಡ ಕಿರಣ್.