ಸುಂಟಿಕೊಪ್ಪ, ಮೇ ೧೦: ಚಾಲಕನ ಹತೋಟಿ ತಪ್ಪಿದ ಟೆಂಪೊ ವಾಹನವೊಂದು ಇಲ್ಲಿನ ರಾಷ್ಟಿçÃಯ ಹೆದ್ದಾರಿಯ ಚಿತ್ರಾ ಸ್ಟುಡಿಯೋದ ಮಾಲೀಕ ಮತ್ತು ಸುಂಟಿಕೊಪ್ಪದ ಪತ್ರಕರ್ತ ಎಂ.ಬಿ. ವಿನ್ಸೆಂಟ್ ಅವರ ಮನೆಯ ಮುಂಭಾಗದಲ್ಲಿ ಮಗುಚಿದ ಘಟನೆ ವರದಿಯಾಗಿದೆ.
ಕುಶಾಲನಗರ ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ವಾಹನವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವಿನ್ಸೆಂಟ್ ಅವರ ಮನೆಯ ಮುಂಭಾಗ ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಕಂಬವಿಲ್ಲದಿದ್ದರೆ ಟೆಂಪೊ ಮನೆಯ ಒಳಗೆ ನುಗ್ಗುವ ಸಾಧ್ಯತೆಯೂ ಇದ್ದುದಾಗಿ ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಟೆಂಪೊ ಮನೆಯ ಒಳಗೆ ನುಗ್ಗುವ ಸಾಧ್ಯತೆಯೂ ಇದ್ದುದಾಗಿ ಸ್ಥಳೀಯರು ಅಭಿಪ್ರಾಯಿಸಿದ್ದಾರೆ.