ಮಡಿಕೇರಿ, ಮೇ ೧೦ : ಸಿದ್ದಾಪುರ ಅಮೃತ ಯುವ ಮೊಗೇರ ಸಂಘ ಆಯೋಜಿಸಿದ್ದ ಅಮೃತ ಮೊಗೇರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋಮವಾರಪೇಟೆಯ ಪ್ರೆಸಿಡೆಂಟ್ ಇಲವೆನ್ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿದ್ದು, ಮಡಿಕೇರಿ ಜನನಿ ವಾರಿರ‍್ಸ್ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.

ಸೆಮಿಫೈನಲ್ ಪಂದ್ಯಾವಳಿಯಲ್ಲಿ ಜನನಿ ವಾರಿರ‍್ಸ್ ತಂಡ ಹಂಚಿಕಾಡು ಹೆಚ್.ಎಫ್.ಸಿ ತಂಡವನ್ನು ಮಣಿಸಿ ಫೈನಲಿಗೇರಿದರೆ, ಸೋಮವಾರಪೇಟೆಯ ಪ್ರಿಸಿಡೆಂಟ್ ಇಲವೆನ್ ತಂಡವು ಹೆಬ್ಬೆಟ್ಟಗೇರಿಯ ಷಣ್ಮುಗ ಕ್ರಿಕೆರ‍್ಸ್ ತಂಡವನ್ನು ಸೋಲಿಸಿ ಪೈನಲ್‌ಗೆ ಲಗ್ಗೆಯಿಟ್ಟಿತು. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪ್ರೆಸಿಡೆಂಟ್ ಇಲವೆನ್ ತಂಡ ನಿಗದಿತ ಆರು ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ೩೮ ರನ್ ಗಳಿಸಿತು. ನಂತರ ಬ್ಯಾಟ್ ಮಾಡಿದ ಜನನಿ ವಾರಿರ‍್ಸ್ ತಂಡ ೨೬ ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ೧೩ ರನ್ ನಿಂದ ಸೋಲೊಪ್ಪಿಕೊಂಡಿತು.

ಸಮಾರೋಪ

ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿ ಪ್ರದೀಪ್ ಹಾಗೂ ಉತ್ತಮ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ಮೇಘನ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ, ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು, ಜಿಲ್ಲಾ ಕಾರ್ಯದರ್ಶಿ ಪಿ.ಬಿ.ಜನಾರ್ಧನ್, ಅಮೃತ ಮೊಗೇರ ಸಮಾಜದ ಅಧ್ಯಕ್ಷ ಪಿ.ಬಿ.ಮಂಜು, ಜಿ.ಪಂ ಮಾಜಿ ಸದಸ್ಯ ವಿಜು ಸುಬ್ರಮಣಿ, ಮಡಿಕೇರಿ ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಪಿ.ಬಿ.ಸುರೇಶ್, ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷ ಮುತ್ತಪ್ಪ, ಸದಸ್ಯ ಗಣೇಶ್, ಮೊಗೇರ ಸಮಾಜದ ಹಿರಿಯ ಸದಸ್ಯ ಪೊಡಿಯ, ಜಿಲ್ಲಾ ಖಜಾಂಚಿ ಪಿ.ಕೆ.ಚಂದ್ರು, ದಾನಿಗಳಾದ ಮುತ್ತಪ್ಪ, ಪ್ರವೀಣ್, ವೀರಾಜಪೇಟೆ ತಾಲೂಕು ಮೊಗೇರ ಸಮಾಜದ ಗೌರವಾಧ್ಯಕ್ಷ ಜಿ.ಮೋಹನ್ ಸೇರಿದಂತೆ ಅಮೃತ ಮೊಗೇರ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪಿ.ಸಿ.ರಮೇಶ್ ನಿರೂಪಿಸಿ, ವಂದಿಸಿದರು. ಅಮ್ಮತ್ತಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಿತು.