ಭಾಗಮಂಡಲ, ಮೇ ೧೦ : ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದರಿಂದ ಜನಾಂಗ ಬಾಂಧವರು ಎಲ್ಲರೂ ಒಟ್ಟಿಗೆ ಬೆರೆಯಲು ಸಹಕಾರಿಯಾಗುತ್ತದೆ ಎಂದು ಕೆಎಸ್‌ಆರ್‌ಪಿ ಪೊಲೀಸ್ ಇನ್ಸ್ಪೆಕ್ಟರ್ ಅರೆಯಂಡ ಮೊಣಪ್ಪ ಹೇಳಿದರು. ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕೊಡಗು ಗೊಲ್ಲ ಸಮಾಜದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಫೈನಲ್ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮತ್ತೋರ್ವ ಮುಖ್ಯ ಅತಿಥಿ ಬಿದ್ದಿಯಂಡ ಬಾನು ಮಾಚಯ್ಯ ಮಾತನಾಡಿ, ಕ್ರೀಡೆ ಎಂಬುದು ಮನೋಲ್ಲಾಸ ತರುವಂತದ್ದು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೊಲ್ಲ ಸಮಾಜದ ಅಧ್ಯಕ್ಷೆ ಪೊನ್ನುಕಂಡ ಚಿತ್ರಾ ಮೊಣ್ಣಪ್ಪ ಮಾತನಾಡಿ, ಕೊಡಗಿನಲ್ಲಿ ಗೊಲ್ಲ ಸಮಾಜ ಇದೆ ಎಂಬುದೇ ಸರ್ಕಾರದ ಗಮನದಲ್ಲಿ ಇಲ್ಲ. ಕೊಡಗಿನಲ್ಲಿ ಅತಿ ಚಿಕ್ಕ ಜನಸಂಖ್ಯೆ ಹೊಂದಿರುವ ಗೊಲ್ಲ ಸಮುದಾಯವು ತನ್ನದೇ ಆದ ವಿಶಿಷ್ಟö್ಯತೆಯನ್ನು ಹೊಂದಿದೆ. ಗೊಲ್ಲ ಸಮಾಜಕ್ಕೆ ತನ್ನದೇ ಆದ ಕಟ್ಟಡ ಹಾಗೂ ಮೈದಾನದ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.

ಪAದ್ಯಾಟದ ಮೊದಲ ದಿನ ವಿವಿಧ ಕ್ರೀಡಾಕೂಟವನ್ನು ಕಡೋಡಿರ ಸಂತೋಷ, ಕುಶಾಲಪ್ಪ ತೀರ್ಥ ತಮ್ಮಯ್ಯ ಉದ್ಘಾಟಿಸಿದರು. ಪಿ.ಯು.ಸಿ. ಹಾಗೂ ಹತ್ತನೆ ತರಗತಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಿಂಚನ ಬಿದ್ದಿಯಂಡ ಮತ್ತು ಅರೆಯಂಡ ಜಸ್ಮಿತ ಅವರನ್ನು ಸನ್ಮಾನಿಸಲಾಯಿತು.

ಪುರುಷರ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ಕೋಡಿಯಂಡ ತಂಡ ಪ್ರಥಮ ಸ್ಥಾನವನ್ನು ಕೈಬುಲಿರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಂಡಿಯAಡ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಕೋಡಿಯಂಡ ತಂಡ ಗಳಿಸಿತು. ಕ್ರೀಡಾಕೂಟದಲ್ಲಿ ೧೪ ತಂಡಗಳು ಭಾಗವಹಿಸಿದ್ದವು. ಅಯ್ಯಂಗೇರಿ ಎಸ್.ಕೆ.ವೈ.ಸಿ.ಎ. ತಂಡವು ಪ್ರಥಮ ಸ್ಥಾನ ಗಳಿಸಿದರೆ, ಬಿ ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತು ವೇದಿಕೆಯಲ್ಲಿ ಪೊಂಗೇರ ಪ್ರಕಾಶ್, ಕೊಂಗಿರ ಪೂಣಚ್ಚ, ಆಚಿರ ಕಾವೇರಮ್ಮ, ತೊತ್ತಿಯಂಡ ಮಿಲನ್ ಭೀಮಯ್ಯ ಉಪಸ್ಥಿತರಿದ್ದರು. ಪೊನ್ನುಕಂಡ ಸುಶ್ಮಿತಾ ತಮ್ಮಯ್ಯ ಮತ್ತು ಕುಂಡಿಯAಡ ದೃಶ್ಯ ದೇಚಮ್ಮ ಪ್ರಾರ್ಥಿಸಿ, ಪ್ರತಿನ್ ಸ್ವಾಗತಿಸಿದರು. ತೊತ್ತಿಯಂಡ ಅಮಿತಾ ಕಾರ್ಯಕ್ರಮ ನಿರೂಪಿಸಿದರು. - ಸುನಿಲ್