ಕುಶಾಲನಗರ, ಮೇ ೧೦: ಕುಶಾಲನಗರ ರೋಟರಿ ವತಿಯಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನತೂರು ಗ್ರಾಮದಲ್ಲಿ ನಿರ್ಮಿಸಲಾದ ಮನೆಯನ್ನು ತಾ. ೧೨ರಂದು ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು ರೋಟರಿ ಜಿಲ್ಲೆ ೩೧೮೧ ರಾಜ್ಯಪಾಲ ಎ.ಆರ್. ರವೀಂದ್ರ ಭಟ್ ಉಪಸ್ಥಿತಿಯಲ್ಲಿ ಮನೆಯನ್ನು ಅಲ್ಲಿನ ಬಡ ದಂಪತಿಗಳಾದ ರಾಜಣ್ಣ, ನಾಗಮ್ಮ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು.

ಇದೇ ಸಂದರ್ಭ ರೋಟರಿಗೆ ಅಧಿಕೃತ ಭೇಟಿ ನೀಡಲಿರುವ ಜಿಲ್ಲಾ ರಾಜ್ಯಪಾಲರು ಅಂದು ಸಂಜೆ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವರು ಹಾಗೂ ರೋಟರಿ ಕುಶಾಲನಗರದ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ವಿವರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯ ದರ್ಶಿ ರಿಚರ್ಡ್ ಡಿಸೋಜ, ನಿಕಟಪೂರ್ವ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್, ಎಂ.ಜಿ. ಪ್ರಕಾಶ್ ಇದ್ದರು.