ಪಿಎಸ್‌ಐ ಹಗರಣದ ಬಂಧಿತ ಆರೋಪಿ ಸಹೋದರ ಆತ್ಮಹತ್ಯೆ
ಹಾಸನ, ಮೇ ೧೧: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ಸಂಬAಧ ತನಿಖೆ ನಿರ್ಣಾಯಕ ಹಂತ ತಲುಪಿರುವಂತೆಯೇ ಇತ್ತ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಯೊಬ್ಬರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಅಭ್ಯರ್ಥಿ ಮನು ಕುಮಾರ್ ಅವರ ಅಣ್ಣ ವಾಸು (೩೬) ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ತಮ್ಮನ ಪಿಎಸ್‌ಐ ಕೆಲಸಕ್ಕೆಂದು ಮಧ್ಯವರ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣವನ್ನು ವಾಸು ಹೊಂದಿಸಿಕೊಟ್ಟಿದ್ದರು ಎಂದು ಹೇಳಲಾಗಿದೆ. ಆದರೆ ಈಗ ಹಣವೂ ಹೊಯ್ತು, ತಮ್ಮನ ಕೆಲಸವೂ ಹೊಯ್ತು ಎಂದು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಏಪ್ರಿಲ್ ೩೦ ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಮನುಕುಮಾರ್‌ನನ್ನು ಬಂಧಿಸಿದ್ದರು. ಪ್ರಸ್ತುತ ಮನುಕುಮಾರ್ ಸಿಐಡಿ ಪೊಲೀಸರ ವಶದಲ್ಲಿದ್ದಾನೆ. ಮನುಕುಮಾರ್‌ನನ್ನು ಅಂತಿಮ ದರ್ಶನಕ್ಕೆ ಕರೆದೊಯ್ಯಲು ವಕೀಲ ಲೋಹಿತ್ ಅರ್ಜಿ ಸಲ್ಲಿಸಿದ್ದಾರೆ. ಮೃತ ವಾಸು ತಾಯಿ ಶಿವಮ್ಮ ಅವರು ಮಾತನಾಡಿ, ಪಿಎಸ್‌ಐ ಅಕ್ರಮಕ್ಕೂ ಹಿರಿಯ ಮಗ ವಾಸು ಆತ್ಮಹತ್ಯೆಗೆ ಯಾವುದೇ ಸಂಬAಧ ಇಲ್ಲ. ಹಣ ಕಳೆದುಕೊಂಡ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ಇದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ. ಬಳಿಕ ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆAಧ್ರದ ಸಮುದ್ರದಲ್ಲಿ ತೇಲಿ ಬಂದ ರಥ
ಅಮರಾವತಿ, ಮೇ ೧೧: ‘ಅಸನಿ’ ಚಂಡಮಾರುತದ ಪ್ರಭಾವಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇದೇ ಅಬ್ಬರದ ಅಲೆಗಳಲ್ಲಿ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿರುವ ಅಸನಿ ಚಂಡಮಾರುತ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದು, ಆಂಧ್ರ ಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ನಿಗೂಢ ಚಿನ್ನದ ಬಣ್ಣದ ರಥವೊಂದು ಶ್ರೀಕಾಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂದು ತಲುಪಿದೆ. ಈ ರಥ ಬೇರೆ ದೇಶದಿಂದ ಬಂದಿರಬಹುದು. ಇದರ ಬಗ್ಗೆ ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಎಸ್‌ಐ ನೌಪಾದ ಹೇಳಿದ್ದಾರೆ.