ವೀರಾಜಪೇಟೆ, ಮೇ. ೧೧: ನಗರದಲ್ಲಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನ ಇಲ್ಲದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳಿAದು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದವು.

ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಘಟಕ, ಡಿ.ವೈ.ಎಫ್.ಐ. ವೀರಾಜಪೇಟೆ ಮತ್ತು ನಾಗರಿಕ ಸಮಿತಿ ವೀರಾಜಪೇಟೆ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನಾಗರಿಕ ಸಮಿತಿಯ ಸಂಚಾಲಕ ಡಾ. ಇ.ಆರ್. ದುರ್ಗಾಪ್ರಸಾದ್, ದೇಶವ್ಯಾಪ್ತಿ ಕೊರೊನಾದಿಂದ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇಂತಹ ಸಂದÀರ್ಭದಲ್ಲಿ ಪಟ್ಟಣ ಪಂಚಾಯಿತಿಯು ನೀರಿನ ದರ, ವಾಣಿಜ್ಯ ದರಗಳನ್ನು ಏರಿಕೆ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶುದ್ಧವಾದ ಕುಡಿಯುವ ನೀರು ಒದಗಿಸಲು ಪಟ್ಟಣ ಪಂಚಾಯಿತಿ ಕ್ರಮಕೈಗೊಂಡಿಲ್ಲ. ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸದೆ ನೀರಿನ ದರವನ್ನು ಏರಿಕೆ ಮಾಡಿರುವುದು ಖಂಡನೀಯ. ನಗರದ ಎಲ್ಲಾ ಪ್ರದೇಶಗಳಲ್ಲಿ ಮಾಂಸದAಗಡಿಗಳಿಗೆ ಮನ ಬಂದAತೆ ಪರವಾನಗೆ ನೀಡಿ ನಗರದ ಸ್ವಾಸ್ಥö್ಯವನ್ನು ಕೆಡಿಸಲಾಗುತ್ತಿದೆ.

ಸರ್ಕಾರವು ಕೋಟಿ ರೂ.ಗಳ ವೆಚ್ಚದಲ್ಲಿ ಹಸಿ ಮೀನು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿದ್ದರೂ ಕೂಡ ಮೂಲಭೂತ ಸೌಕರ್ಯ ಒದಗಿಸದೆ ಬೆರಳಣಿಕೆಯಷ್ಟು ಮಳಿಗೆಗಳು ಮಾತ್ರ ವಹಿವಾಟು ನಡೆಸುತ್ತಿದ್ದು, ಸರ್ಕಾರದ ಹಣ ಪೋಲಾಗಿದೆ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರಕ್ಕೆ ಪಟ್ಟಣ ಪಂಚಾಯಿತಿಯು ಶೀಘ್ರವಾಗಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ತಾ. ಅಧ್ಯಕ್ಷ ಅನಿಲ್‌ಕುಮಾರ್ ಮಾತನಾಡಿ ನಗರದಲ್ಲಿ ಬೆಟ್ಟಗುಡ್ಡ ಪ್ರದೇಶದಲ್ಲಿ ವಾಸಿಸುವ ನಾಗರಿಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ನಗರವಾಸಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ನೀಡಲು ಪಟ್ಟಣ ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ. ಬೀದಿ ದೀಪ ಸಮಸ್ಯೆ, ಒಳಚರಂಡಿ ವ್ಯವಸ್ಥೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ನಗರವಾಸಿಗಳು ಎದುರಿಸುತ್ತಿದ್ದೇವೆ. ಸಮಸ್ಯೆಗಳ ಅರಿವಿದ್ದರೂ ಪಟ್ಟಣ ಪಂಚಾಯಿತಿ ತಟಸ್ಥ ಧೋರಣೆಯನ್ನು ತಾಳಿದೆ ಎಂದು ಆರೋಪಿಸಿದರು.

ಡಿ.ವೈ.ಎಫ್.ಐ ಪಕ್ಷದ ವೀರಾಜಪೇಟೆ ಶಾಖೆಯ ಪ್ರಮುಖ ರಮೇಶ್ ಶಾಜಿ ಮಾತನಾಡಿ, ಪ್ರಾಕೃತಿಕ ವಿಕೋಪ ವೇಳೆ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ ನೆಹರುನಗರ ಬೆಟ್ಟದಲ್ಲಿ ವಾಸ ಮಾಡುವ ನಿವಾಸಿಗಳ ಮನೆಗಳಿಗೆ ಹಾನಿಯಾಗಿದ್ದವು. ಬೆಟ್ಟದಲ್ಲಿ ವಾಸ ಮಾಡುವುದು ಸುರಕ್ಷಿತವಲ್ಲ ಎಂದು ವಿಜ್ಞಾನಿಗಳು ಹೇಳಿದ್ದರು. ಪಟ್ಟಣ ಪಂಚಾಯಿತಿಯು ಬೆಟ್ಟ ಪ್ರದೇಶದಲ್ಲಿ ವಾಸ ಮಾಡುವ ನಿವಾಸಿಗಳನ್ನು ಸ್ಥಳಾಂತರಿಸಿ ಬಾಡಿಗೆ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಅದರೆ ಇಂದಿನವರೆಗೆ ಬಾಡಿಗೆ ಹಣವು ಬಂದಿಲ್ಲ. ಪರ್ಯಾಯ ವಸತಿಗಾಗಿ ಸ್ಥಳವನ್ನು ನೀಡಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ನಾಗರಿಕ ಸಮಿತಿಯ ಹಿರಿಯರಾದ ನಾಣಯ್ಯ, ವಕೀಲ ಲೋಕನಾಥ ಮತ್ತು ಕ.ರ.ವೇಯ ಪ್ರಮುಖರಾದ ಬಾವ ಮಾಲ್ದಾರೆ ಮಾತನಾಡಿದರು. ಪ್ರತಿಭಟನಾಕಾರರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್. ಸುಶ್ಮೀತ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಮತ್ತು ಪ.ಪಂ.ನ ಮುಖ್ಯಾಧಿಕಾರಿ ಚಂದ್ರಕುಮಾರ್ ಅವರ ಸಮ್ಮುಖದಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.

ನಾಗರಿಕ ಸಮಿತಿಯ ಸದಸ್ಯರು ಡಿ.ವೈ.ಎಫ್.ಐ. ಪಕ್ಷದ ಕಾರ್ಯಕರ್ತರು ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಹಾಜರಿದ್ದರು.