ನಾಪೋಕ್ಲು, ಮೇ ೧೦: ಕಾಫಿ ಬೆಳೆಗಾರರು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕೆ ಕಾಫಿ ಮಂಡಳಿ ಮುಂದಾಗಬೇಕು ಎಂದು ನಾಪೋಕ್ಲು ವ್ಯಾಪ್ತಿಯ ಬೆಳೆಗಾರರು ಒತ್ತಾಯಿಸಿದರು. ಇಲ್ಲಿನ ಕೊಡವ ಸಮಾಜದಲ್ಲಿ ಸರ್ಕಾರದ ಯೋಜನೆಗಳ ಪರಾಮರ್ಶೆಗಾಗಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಫಿ ಬೆಳೆಗಾರರು ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಮುಕ್ಕಾಟಿರ ವಿನಯ್, ಅಪ್ಪಾರಂಡ ಸುಧೀರ್ ಅಯ್ಯಪ್ಪ, ಕಂಗಾAಡ ಜಾಲಿ ಪೂವಪ್ಪ, ಕುಲ್ಲೇಟಿರ ಅಜಿತ್ ನಾಣಯ್ಯ, ಪಟ್ರಪಂಡ ಮೋಹನ್, ಕೋಟೇರ ಚಂಗಪ್ಪ, ಎಡಿಕೇರಿ ಪ್ರವೀಣ್, ನೆರೆಯಡಮ್ಮಂಡ ಪ್ರಭು ಸೇರಿದಂತೆ ಹಲವರು ಅಧಿಕಾರಿಗಳ ಎದುರು ಬೆಳೆಗಾರರ ಸಂಕಷ್ಟವನ್ನು ತೋಡಿಕೊಂಡರು.
೧೧ನೇ ಪಂಚವಾರ್ಷಿಕ ಯೋಜನೆಯಡಿ ಕಾಫಿ ಮಂಡಳಿ ಬೆಳೆಗಾರರಿಗೆ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಹಾಯಧನ ನೀಡುತಿತ್ತು. ಇದೀಗ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿದ್ದು ಹಿಂದೆ ಇದ್ದ ಎಲ್ಲಾ ಸಹಾಯಧನವನ್ನು ಮುಂದುವರಿಸುವAತೆ ಬೆಳೆಗಾರರು ಒತ್ತಾಯಿಸಿದರು. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರ ಸಂಖ್ಯೆ ಕಡಿಮೆ ಇದೆ. ಅವರಿಗೆ ಸಹಾಯಧನ ನೀಡಲಾಗುತ್ತಿದೆ. ಸಹಾಯಧನವನ್ನು ಎಲ್ಲಾ ಬೆಳೆಗಾರರಿಗೂ ವಿಸ್ತರಿಸಬೇಕಾಗಿದೆ. ಕಾಫಿ ತೋಟದ ಮಾಲೀಕರು ಕೂಲಿ ಕಾರ್ಮಿಕರ ಕೊರತೆಯಿದೆ. ಸಮಸ್ಯೆಯನ್ನು ಎದುರಿಸುತ್ತಿದ್ದು, ಯಾಂತ್ರೀಕರಣಕ್ಕೆ ಒತ್ತು ನೀಡಬೇಕಾಗಿದೆ ಎಂದರು. ಕಾಫಿ ಬೆಳೆಗಾರರ ಮಕ್ಕಳಿಗೆ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದು ಮುಂದುವರಿಯಬೇಕು. ಸಣ್ಣ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳಾದ ಔಟ್‌ಟರ್ನ್ ಮೀಟರ್ ಹಾಗೂ ಮಾಯಿಶ್ಚರ್ ಮೀಟರ್ ಖರೀದಿಗೆ ಬೆಳೆಗಾರರಿಗೆ ಸಬ್ಸಿಡಿ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಇದೆ. ಬೆಳೆಗಾರರಿಗೆ ನೀರಾವರಿ ವ್ಯವಸ್ಥೆ ಮಾಡಲು ಅಸಾಧ್ಯವಾಗಿದೆ. ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸಲು ಸರ್ಕಾರ ಉತ್ತೇಜನ ನೀಡಬೇಕು. ಕಾಫಿ ಉದ್ಯಮದಲ್ಲಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ರಸಗೊಬ್ಬರದ ಬೆಲೆ ದ್ವಿಗುಣಗೊಂಡಿದೆ. ಬೆಳೆಗಾರರಿಗೆ ತೋಟದ ನಿರ್ವಹಣೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಹೆಚ್ಚಿನ ಸಹಾಯಧನವನ್ನು ನೀಡಬೇಕಾಗಿದೆ. ದೇಶದಲ್ಲಿ ಎಲ್ಲಾ ಬೆಳೆಗಳಿಗೆ ವಿಮಾ ಸೌಲಭ್ಯ ಇದೆ. ಫಸಲು ಬಿಮ ಯೋಜನೆಯಡಿ ಕಾಫಿ ಬೆಳೆಗೂ ವಿಮಾ ಸೌಲಭ್ಯವನ್ನು ಕಲ್ಪಿಸಬೇಕು. ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರ ಅವಶ್ಯಕತೆಗಳನ್ನು ಬೆಳೆಗಾರರೇ ಪೂರೈಸುತ್ತಿದ್ದು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕಾಫಿ ಬೆಳೆಗಾರರಿಗೆ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಜೆಎಲ್‌ಒ ಶಿವಕುಮಾರ್ ಬೆಳೆಗಾರರಿಗೆ ಪೂರಕ ಮಾಹಿತಿಗಳನ್ನು ನೀಡಿದರು. ನೀತಿ ಆಯೋಗ ತಂಡದ ಮುಖ್ಯಸ್ಥ ಧೀರ್‌ಸಿಂಗ್, ಸದಸ್ಯರಾದ ಪ್ರೀತಂ ಸಿಂಗ್ ಮಿನಾಲ್ ಶರ್ಮ, ಸುನಾಲ್ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಉಪಸ್ಥಿತರಿದ್ದರು.
- ವರದಿ : ದುಗ್ಗಳ ಸದಾನಂದ