ಮಡಿಕೇರಿ, ಮೇ ೧೧: ಅಶೋಕಪುರದಲ್ಲಿ ಪ್ರಥಮ ವರ್ಷದ ಜೈ ಭೀಮ್ ಕಪ್ ಕಬ್ಬಡಿ ತಾ. ೮ ರಂದು ನಡೆಯಿತು. ಕಬಡ್ಡಿ ಪಂದ್ಯಾಟ ರೋಚಕವಾಗಿದ್ದು, ಜನರ ಕುತೂಹಲಕ್ಕೆ ಕಾರಣವಾಯಿತು. ಕೊನೆಯಲ್ಲಿ ಅಶೋಕಪುರದ ಜೈ ಭೀಮ್ ಕಪ್ ತಂಡ ಪ್ರಥಮ ಸ್ಥಾನ ಪಡೆದರೆ, ಬೆಟ್ಟಗೇರಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ನAತರ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯನ್ನು ಹಿರಿಯರಾದ ಹೆಚ್.ಎಲ್. ರಮೇಶ್, ಪಾಪಣ್ಣ, ಪ್ರಜ್ವಲ್, ಸುನೀಲ್, ವಿದ್ಯಾಧರ, ಸೂರ್ಯ, ಹೇಮಂತ, ಅರ್ಜುನ್ ನೆರವೇರಿಸಿದರು.
ವಂದನಾರ್ಪಣೆಯನ್ನು ಕಾರ್ತಿಕ್ ಅವರು ನಡೆಸಿಕೊಟ್ಟರು. ಅರ್ಜುನ್ ಪೂಜಾ, ಅವೀನ್ ಅವರುಗಳು ಬಹುಮಾನ ದಾನ ಮಾಡಿದರು. ಆಯೋಜಕರಾದ ಅಕಿಲೇಶ್, ಈಶ್ವರ, ಲತೇಶ್, ಆಕಾಶ್ ಹಾಗೂ ಇತರ ಸದಸ್ಯರುಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.