ಗೋಣಿಕೊಪ್ಪಲು, ಮೇ ೯: ತಿತಿಮತಿ ಸರ್ಕಾರಿ ಪ್ರಾಥಮಿಕ ಮೈದಾನದಲ್ಲಿ ಆಯೋಜಿಸಿದ್ದ ಯರವ ಕ್ರೀಡೋತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.
ಕ್ರಿಕೆಟ್‌ನಲ್ಲಿ ಕೆ.ಬಿ. ಸ್ಟೆçöÊರ‍್ಸ್ ಚಾಂಪಿಯನ್ ಆದರೆ, ಬ್ಲೂ ಬಾಯ್ಸ್ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತು.
೪೮ ಕ್ರಿಕೆಟ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈ.ಆರ್. ಪುಷ್ಪಜ, ವೈ.ಎಸ್. ಪ್ರತಿಮಾ, ಪಿ.ಸಿ. ಪಾಪು ಹಾಗೂ ಯರವ ಸಮಾಜದ ಅಧ್ಯಕ್ಷ ವೈ.ಆರ್. ರವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಿರಿಜನರ ಸಂಸ್ಕೃತಿ, ಆಚಾರ-ವಿಚಾರ, ಉಡುಗೆ, ತೊಡುಗೆ, ಭಾಷೆಯನ್ನು ಉಳಿಸುವ ಪ್ರಯತ್ನವಾಗಿ ಐದು ದಿನಗಳ ಕಾಲ ನಡೆದ ೧೦ನೇ ವರ್ಷದ ಎವುಲಾತ್ಲೇರಂಡ ಕ್ರೀಡೋತ್ಸವ ಜನಮನ ಸೆಳೆಯಿತು. ಮುಂದಿನ ವರ್ಷ ತಿರುಮುಂಡೆಲ್ಲಾತ್ಲೇರAಡ ಯರವ ಮನೆತನದ ಕ್ರಿಕೆಟ್ ಕಪ್ ನಡೆಯಲಿರುವುದಾಗಿ ಆಯೋಜಕರು ಘೋಷಿಸಿದರು.
ಫೈನಲ್ ಪಂದ್ಯಾಟದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಯರವ ಸಮಾಜವು ಸಮುದಾಯ ಬಾಂಧವರನ್ನು ಕ್ರೀಡೆಯ ಮೂಲಕ ಒಂದೆಡೆ ಸೇರಿಸುವ ಪ್ರಯತ್ನ ಶ್ಲಾಘನೀಯ,
(ಮೊದಲ ಪುಟದಿಂದ) ವರ್ಷದಿಂದ ವರ್ಷಕ್ಕೆ ಕ್ರೀಡೊತ್ಸವವು ಯಶಸ್ವಿಯಾಗುತ್ತಿದೆ. ಸಮಾಜದ ಮುಖ್ಯ ವಾಹಿನಿಗೆ ಯರವ ಸಮುದಾಯ ಬರಬೇಕು. ತಮಗೆ ಸಿಗುವ ನ್ಯಾಯಬದ್ದ ಹಕ್ಕನ್ನು ಪಡೆಯಬೇಕು. ಕ್ರೀಡೆಯಲ್ಲಿ ಯುವಕ ಯುವತಿಯರು ಕ್ರಿಯಾಶೀಲರಾಗಿ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಯುವ ಶಕ್ತಿ ಗಟ್ಟಿಯಾದಲ್ಲಿ ಸಮಾಜ ಹಾಗೂ ದೇಶವು ಅಭಿವೃದ್ಧಿಯಾಗಲಿದೆ. ಕೊಡಗಿನ ಮೂಲ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ತಮ್ಮ ಮೇಲಿದೆ ಈ ನಿಟ್ಟಿನಲ್ಲಿ ಯರವ ಸಮಾಜದ ಕೊಡುಗೆ ಅಪಾರವಾಗಿದೆ. ಬಡತನ, ನಿರುದ್ಯೋಗದ ನಡುವೆ ತಮ್ಮ ಆಚಾರ ವಿಚಾರಗಳಿಗೆ ದಕ್ಕೆ ಬಾರದ ರೀತಿಯಲ್ಲಿ ಪಾಲಿಸುತ್ತಿರುವುದು ಶ್ಲಾಘನೀಯ. ಯುವಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಉತ್ತಮ ಬೆಳವಣಿಗೆ ಮುಂದಿನ ಬಾರಿ ಯರವ ಕ್ರೀಡೋತ್ಸವಕ್ಕೆ ಸರ್ಕಾರದಿಂದ ಸಹಾಯ ಧನ ಕೊಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಬಹುಮಾನ ವಿತರಿಸಿದ ಆರ್.ಎಂ.ಸಿ. ಸದಸ್ಯ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಮಾತನಾಡಿ ಕ್ರೀಡೆ ನಡೆಸುವುದು ಸುಲಭದ ಕೆಲಸವಲ್ಲ. ಕೇವಲ ದಾನಿಗಳ ಸಹಕಾರದಿಂದ ೧೦ ವರ್ಷಗಳ ಕಾಲ ಯಶಸ್ವಿ ಕ್ರೀಡೋತ್ಸವ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಮನ್ನಣೆ ಸಿಗುವ ರೀತಿಯಲ್ಲಿ ಸಮಾಜವು ಕೆಲಸ ನಿರ್ವಹಿಸಬೇಕು ಎಂದರು.
ಅAತಿಮ ರೋಚಕ ಪಂದ್ಯದಲ್ಲಿ ೧೧ನೇ ಮೈಲ್ ಬ್ಲೂ ಬಾಯ್ಸ್ ತಂಡವು ವಿರುದ್ಧ ನಂಜರಾಯಪಟ್ಟಣದ ಕೆ.ಬಿ. ಸ್ಟೆçöÊಕರ್ ಈ ಬಾರಿಯ ಎವುಲ್ಲಾತ್ಲೇರಂಡ ಯರವ ಕ್ರಿಕೆಟ್ ಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ದುಡಿಕೊಟ್ಟ್ ಕುಣಿತ, ವಾಲಗತ್ತಾಟ್, ಮಹಿಳೆಯರಿಗಾಗಿ ನಡೆದ ಹಗ್ಗಜಗ್ಗಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ಗಮನ ಸೆಳೆದರು. ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಲವೆಂತ್‌ಮೈಲ್ ಎ ತಂಡ ಪ್ರಥಮ ಸ್ಥಾನ ಪಡೆದರೆ ಲವೆಂತ್ ಮೈಲ್ ಬಿ ತಂಡ ದ್ವಿತೀಯ ಸ್ಥಾನ ಪಡೆಯಿತು. ಕ್ರಿಕೆಟ್ ಪಂದ್ಯಾಟದಲ್ಲಿ ಮ್ಯಾನ್ ಆಫ್‌ದ ಮ್ಯಾಚ್ ಪ್ರಶಸ್ತಿಯು ಬ್ಲೂ ಬಾಯ್ಸ್ನ ಸುಜಯ್ ಪಡೆದರು. ಮ್ಯಾನ್ ಆಫ್ ದಿ ಸೀರಿಸ್‌ನ್ನು ಕೆ.ಬಿ.ಸ್ಟೆçöÊರ‍್ಸ್ನ ಕಿರಣ್ ತನ್ನದಾಗಿಸಿಕೊಂಡರು.
ಯರವಗೀತೆ, ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಯರವ ಜನಾಂಗ ಸಂಭ್ರಮಪಟ್ಟಿತು.
ಕಾರ್ಯಕ್ರಮದಲ್ಲಿ ತಿತಿಮತಿ ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮಣಿಕುಂಞ, ಪೊನ್ನಂಪೇಟೆಯ ಸಮಾಜ ಸೇವಕಿ ಹಾಗೂ ಹೋರಾಟಗಾರ್ತಿ ತಾಯಮ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷ ವೈ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯರವ ಸಮಾಜದ ಸದಸ್ಯರಾದ ಪ್ರತಿಮಾ, ಸುಮಿತ ಪ್ರಾರ್ಥಿಸಿ, ವೈ.ಎಸ್. ಪ್ರಸನ್ನ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪಿ.ಆರ್.ಮಂಜು ಸ್ವಾಗತಿಸಿ, ಸದಸ್ಯರಾದ ವೈ.ಎಂ. ರೂಪೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ವಿವಿಧ ಸದಸ್ಯರು ಪಾಲ್ಗೊಂಡಿದ್ದರು.