ಮಡಿಕೇರಿ, ಮೇ ೯: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ) ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರಿಕೆಟ್ ಸ್ಟೇಡಿಯಂನ ಪ್ರಾರಂಭಿಕ ಕೆಲಸಕ್ಕೆ ಇಂದು ಮತ್ತೆ ಅಡ್ಡಿಯುಂಟಾಯಿತು. ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೆಮಾಡುವಿನಲ್ಲಿ ಈ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತಲಿದ್ದು, ಈಗಾಗಲೇ ಕಾಮಗಾರಿ ಆರಂಭಗೊAಡಿದೆ, ಆದರೆ,

(ಮೊದಲ ಪುಟದಿಂದ) ಇಂದು ಪಾಲೆಮಾಡು ಗ್ರಾಮದ ಕೆಲವರು ಬಿಎಸ್‌ಪಿ ಪಕ್ಷದ ಬೆಂಬಲದೊAದಿಗೆ ಜೆಸಿಬಿ ಮುಂದೆ ತಡೆಯೊಡ್ಡಿ ಪ್ರತಿಭಟಿಸಿದಾಗ ಮುಂಜಾಗರೂಕತಾ ಕ್ರಮವಾಗಿ ಮಡಿಕೇರಿ ಗ್ರಾಮಾಂತರ ಪೊಲೀಸರು ಐವರನ್ನು ತಾತ್ಕಾಲಿಕ ಕ್ರಮವಾಗಿ ಬಂಧಿಸಿದ್ದಾರೆ.

ಬAಧಿತರಲ್ಲಿ ಪ್ರತಿಭಟನೆಯ ಪ್ರಮುಖ ವ್ಯಕ್ತಿ ಕೆ. ಮೊಣ್ಣಪ್ಪ ಹಾಗೂ ಹೊದ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕುಸುಮಾವತಿ ಸೇರಿದ್ದಾರೆ. ಕಾನೂನು ಭಂಗವುAಟಾದ ಹಿನ್ನೆಲೆ ಐವರನ್ನು ಬಂಧಿಸಿದ್ದು ಕೆಲಸವು ಸುಗಮಗೊಂಡ ಬಳಿಕ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಗೊಳಿಸುವುದಾಗಿ ಮಡಿಕೇರಿ ತಾಲೂಕು ಡಿವೈಎಸ್ಪಿ ಗಜೇಂದ್ರ ಪ್ರಸಾದ್ “ಶಕ್ತಿ”ಗೆ ತಿಳಿಸಿದ್ದಾರೆ.

ಒಟ್ಟು ೧೨.೭೦ ಎಕರೆ ಪ್ರದೇಶದಲ್ಲಿ ಈ ಹಿಂದೆ ಜಿಲ್ಲಾಧಿಕಾರಿ ಬಿ.ಸಿ. ಸತೀಶ ಅವರು ಸೌಹಾರ್ದಯುತ ಮಾತುಕತೆ ಮೂಲಕ ಗ್ರಾಮದ ಸ್ಮಶಾನಕ್ಕೆ ೧ ಎಕರೆ ಒದಗಿಸಿ ಉಳಿದ ೧೧.೭೦ ಎಕರೆಯನ್ನು ಸ್ಟೇಡಿಯಂ ನಿರ್ಮಾಣಕ್ಕೆ ಉಳಿಸಿಕೊಳ್ಳುವಂತೆ ನಿರ್ಧಾರ ಪ್ರಕಟಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರು. ಅಲ್ಲದೆ ಗ್ರಾಮದ ಇನ್ನೊಂದೆಡೆ ಮತ್ತೆ ಒಂದು ಎಕರೆಯನ್ನು ಸ್ಮಶಾನಕ್ಕೆ ಒದಗಿಸಿದ್ದರು. ಈ ನಿರ್ಧಾರಕ್ಕೆ ಕ್ರಿಕೆಟ್ ಸ್ಟೇಡಿಯಂ ಪರವಾಗಿ ಚೇನಂಡ ಪೃಥ್ವಿ ದೇವಯ್ಯ ಹಾಗೂ ಪಾಲೆಮಾಡು ಹೋರಾಟಗಾರರ ಪರವಾಗಿ ಮೊಣ್ಣಪ್ಪ ಸಮ್ಮತಿಯಿತ್ತಿದ್ದರು. ಇತ್ತೀಚೆಗೆ ಕೆಲಸ ಪ್ರಾರಂಭಗೊAಡಿದ್ದು ಪಾಲೆಮಾಡು ಹೋರಾಟಗಾರರು ಈ ಹಿಂದೆ ಹೆÀಚ್ಚಿನ ಪ್ರದೇಶದಲ್ಲಿ ಹಾಕಿದ್ದ ಬೇಲಿಯನ್ನು ಸ್ಟೇಡಿಯಂನವರು ತೆಗೆದು ಜೆಸಿಬಿಯಲ್ಲಿ ಕೆಲಸ ಪ್ರಾರಂಭಿಸತೊಡಗಿದಾಗ ಮತ್ತೆ ಪ್ರಕರಣ ಭುಗಿಲೆದ್ದಿದೆ. ತಕ್ಷಣ ಪೊಲೀಸರು ಮಧ್ಯೆ ಪ್ರವೇಶಿಸಿದ್ದಾರೆ. ಸರಕಾರದ ಪರವಾಗಿ ಜಿಲ್ಲಾಡಳಿತ ಕೈಗೊಂಡಿದ್ದ ನಿರ್ಧಾರಕ್ಕೆ ಪೂರಕವಾಗಿ ಕಾಮಗಾರಿ ಮುಂದುವರಿಯುವ ಸಲುವಾಗಿ ಕಾರ್ಯೋನ್ಮುಖರಾದುದಾಗಿ ಪೊಲೀಸರು ತಿಳಿಸಿದ್ದಾರೆ. ಕಾಮಗಾರಿಗೆ ಅಡ್ಡಿ ಆತಂಕ ಉಂಟು ಮಾಡಿದ ಐವರು ಹೋರಾಟ ಗಾರರನ್ನು ತಾತ್ಕಾಲಿಕ ವಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿರು ವುದಾಗಿ ಮಾಹಿತಿ ಯಿತ್ತಿದ್ದಾರೆ.

ಕಾನೂನು ಬಾಹಿರವಾಗಿ ಅಭಿವೃದ್ಧಿ ಕೆಲಸಗಳಿಗೆ ಕೆಲವರು ಅಡ್ಡಿಪಡಿಸುತ್ತಿದ್ದುದರಿಂದ ಪೊಲೀಸರು ಸಮರ್ಪಕ ಹಾಗೂ ಸಕಾಲಿಕ ಕ್ರಮ ಕೈಗೊಂಡಿದ್ದಾರೆ ಎಂದು ಕೆಎಸ್‌ಸಿಎ ಜಿಲ್ಲಾ ಸಂಯೋಜಕ ಪೃಥ್ವಿ ದೇವಯ್ಯ ಸ್ವಾಗತಿಸಿದ್ದಾರೆ.

ಆದರೆ, ಕ್ರಿಕೆಟ್ ಸ್ಟೇಡಿಯಂ ವಿಚಾರವಾಗಿ ಹೋರಾಟಗಾರರನ್ನು ಬಂಧಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸುವುದಾಗಿ ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್ ತಿಳಿಸಿದ್ದಾರೆ. ಹೋರಾಟಗಾರರ ಮೇಲೆ ಯಾವುದೇ ಪ್ರಕರಣ ದಾಖಲಿಸದೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ