ಪೊನ್ನಂಪೇಟೆ, ಮೇ ೯ : ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯ (ಕಾಪ್ಸ್) ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರಾಗಿರುವ ಅಣ್ಣಳಮಾಡ ಮಾನಸ ತಿಮ್ಮಯ್ಯ ಅವರು ತರಬೇತಿ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ನೀಡಲಾಗುವ ೨೦೨೨ನೇ ಸಾಲಿನ ‘ಅತ್ಯುತ್ತಮ ಮಹಿಳೆ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ಹೈದರಾಬಾದಿನ ತೆಲಂಗಾಣದ ಹಯಾತ್ ಪ್ಲೇಸ್‌ನಲ್ಲಿ ನಡೆದ ೩ನೇ ಅಂರ‍್ರಾಷ್ಟಿçÃಯ ಸ್ಪೂರ್ತಿದಾಯಕ ಮಹಿಳಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾನಸ ತಿಮ್ಮಯ್ಯ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಪ್ರಶಸ್ತಿಗಾಗಿ ಸಲ್ಲಿಕೆಯಾಗಿದ್ದ ಒಟ್ಟು ೧೭ಲಕ್ಷ ನಾಮನಿರ್ದೇಶನಗಳ ಪೈಕಿ ಅಂತಿಮಗೊAಡ ಅಗ್ರಗಣ್ಯರ ಪಟ್ಟಿಯಲ್ಲಿ ಮಾನಸ ತಿಮ್ಮಯ್ಯ ಅವರು ಸ್ಥಾನ ಗಿಟ್ಟಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿ ಮತ್ತು ಉದ್ಯೋಗ ಕ್ಷೇತ್ರದ ವಿಭಾಗದಿಂದ ಪ್ರಶಸ್ತಿಗಾಗಿ ಇವರನ್ನು ಪರಿಗಣಿಸಲಾಗಿದೆ.

ಮಾನವ ಸಂಪನ್ಮೂಲ ವೃತ್ತಿಪರರಾಗಿರುವ ಮಾನಸ ತಿಮ್ಮಯ್ಯ ಅವರು ೨೦೨೨ನೇ ಸಾಲಿನಲ್ಲೇ ಇದೇ ಕ್ಷೇತ್ರದಿಂದ ೩ ವಿಶೇಷ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಕ್ರಿಯಾಶೀಲ ಸಾಧಕಿಯರಿಗಾಗಿ ನೀಡಲಾಗುವ ‘ಜಾಗತಿಕ ಸಾಧಕಿ' ಪ್ರಶಸ್ತಿ, ಅಖಿಲ ಭಾರತ ಮಹಿಳಾ ಸಾಧಕಿಯರ ವೇದಿಕೆ ವತಿಯಿಂದ ನೀಡಲಾಗುವ ‘ಭವಿಷ್ಯದ ಮಹಿಳೆ' ಪ್ರಶಸ್ತಿ ಮತ್ತು ಇನ್‌ಕ್ರೆಡಿಬಲ್ ಭಾರತೀಯ ಮಹಿಳಾ ಸಂಪನ್ಮೂಲ ವೃತ್ತಿಪರರ ಒಕ್ಕೂಟ ಹಾಗೂ ಸ್ಟಾರ್ ಇಂಡಿಯಾ ಸಂಸ್ಥೆಯ ವತಿಯಿಂದ ನೀಡಲಾಗುವ ‘ರಿಯಲ್ ಸೂಪರ್ ವುಮನ್-೨೦೨೨'ರ ಪ್ರಶಸ್ತಿಯನ್ನು ಮಾನಸ ತಿಮ್ಮಯ್ಯ ಅವರು ತಮ್ಮದಾಗಿಸಿಕೊಂಡಿದ್ದಾರೆ.

ಅಣ್ಣಳಮಾಡ ರಾಬಿನ್ ತಿಮ್ಮಯ್ಯನವರ ಪತ್ನಿಯಾಗಿರುವ ಮಾನಸ ಅವರು, ಕೆ.ಪಿ. ರಾಜು ಮತ್ತು ಪ್ರಮೀಳಾ ದಂಪತಿಯ ಪುತ್ರಿ.