ಕೂಡಿಗೆ, ಮೇ ೯: ಕೂಡಿಗೆಯ ಶ್ರೀ ದಂಡಿನಮ್ಮ ಶ್ರೀ ಬಸವೇಶ್ವರ, ಮುತ್ತತ್ತಿ ರಾಯ ದೇವಸ್ಥಾನ ಹಾಗೂ ಗ್ರಾಮ ಸೇವಾ ಸಮಿತಿ ಇವರ ವತಿಯಿಂದ ವಾರ್ಷಿಕ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಕಾರ್ಯಕ್ರಮ ತಾ. ೯ ರಿಂದ ಆರಂಭಗೊAಡು ತಾ. ೧೫ ರವರೆಗೆ ವಿವಿಧ ದೇವರುಗಳ ಪೂಜೋತ್ಸವ ಕಾರ್ಯಕ್ರಮ ನಡೆಯಲಿವೆ.
ತಾ. ೯ ರಂದು ಬಸವೇಶ್ವರ ದೇವರ ಪೂಜೋತ್ಸವದಿಂದ ಆರಂಭವಾಗಿ ತಾ. ೧೩ ರಂದು ಗ್ರಾಮ ದೇವತೆ ಶ್ರೀ ದಂಡಿನಮ್ಮ ದೇವಿಯ ಹಬ್ಬ ಹಾಗೂ ಜಾತ್ರೋತ್ಸವ, ವಾರ್ಷಿಕ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ತಿಳಿಸಿದ್ದಾರೆ. ಇದರ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ನವಗ್ರಹ ಶಾಂತಿ ಪೂಜೆ, ದುರ್ಗಿ ಶಾಂತಿ ಹೋಮ ಬಲಹರಣ, ಪೂರ್ಣಾಹುತಿ, ಶ್ರೀ ದೇವಿಗೆ ಪಂಚಾಮೃತ ಅಭಿಷೇಕದ ನಂತರ ಕೂಡಿಗೆ ಕಾವೇರಿ ನದಿಯಲ್ಲಿ ಕಲಶ ಪೂಜೆ, ಹಣ್ಣಾಡಗೆ ಉತ್ಸವ ಮತ್ತು ಮಧ್ಯರಾತ್ರಿ ಉಯ್ಯಾಲೆ ಮಹೋತ್ಸವ ನಡೆಯಲಿದೆ. ತಾ. ೧೪ ರಂದು ಶ್ರೀ ದಂಡಿನಮ್ಮ ದೇವಿಗೆ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಲಿದೆ. ತಾ. ೧೫ ರಂದು ಶ್ರೀ ಮುತ್ತತ್ತಿ ರಾಯ ದೇವರ ಹರಿಸೇವೆ ಮಹೋತ್ಸವ ನಡೆಯಲಿದೆ ಎಂದು ದೇವಾಲಯ ಸಮಿತಿಯ ಕಾರ್ಯದರ್ಶಿ ಗುರುಪಾದಸ್ವಾಮಿ ತಿಳಿಸಿದ್ದಾರೆ.