ಕೂಡಿಗೆ, ಮೇ ೮: ತೀರ ಹದಗೆಟ್ಟಿದ್ದ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಸಮೀಪದ ಜೇನುಕಲ್ಲು ಬೆಟ್ಟದ ರಸ್ತೆ ಕಾಮಗಾರಿಗೆ ೧೪ನೇ ಹಣಕಾಸು ಯೋಜನೆಯ ಅಡಿಯಲ್ಲಿ ರೂ. ೧೧ ಲಕ್ಷ ವೆಚ್ಚದಲ್ಲಿ ಆರಂಭಗೊAಡಿದೆ.

ಗ್ರಾಮ ಪಂಚಾಯಿತಿ ಅನುದಾನ ಮತ್ತು ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಗ್ರಾಮಗಳ ಉಪ ರಸ್ತೆಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು ಅದರಂತೆ ಅತಿ ಅವಶ್ಯಕತೆ ಇರುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಅನಂತ್ ತಿಳಿಸಿದರು.

ಕಾಮಗಾರಿಯ ಭೂಮಿಪೂಜೆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಜಯಶೀಲಾ, ಚಂದ್ರು, ಅನಂತ್, ಅಭಿವೃದ್ಧಿ ಅಧಿಕಾರಿ ಅಯಿಷಾ, ಕಾರ್ಯದರ್ಶಿ ಪುನೀತ್ ಸೇರಿದಂತೆ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.