ಕೂಡಿಗೆ, ಮೇ ೮: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ವಸತಿ ಶಾಲೆ ಮತ್ತು ವಸತಿ ನಿಲಯಕ್ಕೆ ಅರ್ಹ ವಿದ್ಯಾರ್ಥಿಗಳ ಅಂತಿಮ ಪರಿಶೀಲನಾ ಆಯ್ಕೆ ಪ್ರಕ್ರಿಯೆ ಶಿಬಿರ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲಾ ಮೈದಾನದಲ್ಲಿ ಆರಂಭಗೊAಡಿದೆ.
ಕೂಡಿಗೆ ಕ್ರೀಡಾ ಶಾಲೆಯ ಮೈದಾನದಲ್ಲಿ ರಾಜ್ಯಮಟ್ಟದ ಫುಟ್ಬಾಲ್, ಹಾಕಿ, ಜಿಮ್ನಾಸ್ಟಿಕ್ ವಿಭಾಗಗಳ ಕಿರಿಯರ ಮತ್ತು ಹಿರಿಯರ ವಿಭಾಗಗಳ ಮೂರು ವಿಭಾಗದ ಕ್ರೀಡೆಗೆ ವಿದ್ಯಾರ್ಥಿಗಳ ಅಂತಿಮ ಪರಿಶೀಲನಾ ಪ್ರಕ್ರಿಯೆ ಶಿಬಿರ ಆರಂಭಗೊAಡು, ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪ್ರಥಮ ಹಂತದ ಆಯ್ಕೆ, ನಂತರ ವಿಭಾಗಿಯ ಮಟ್ಟದ ಆಯ್ಕೆ ಮುಗಿದು, ರಾಜ್ಯಮಟ್ಟಕ್ಕೆ ಆಯ್ಕೆಯಾದ ಎಲ್ಲಾ ಜಿಲ್ಲೆಗಳ ಮೂರು ಕ್ರೀಡೆಗೆ ಅಂತಿಮ ಪಟ್ಟಿಯಲ್ಲಿರುವ ೨೦೨ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಈಗಾಗಲೇ ಫುಟ್ಬಾಲ್ ಹಿರಿಯ ವಿಭಾಗಕ್ಕೆ ೩೪, ಕಿರಿಯ ವಿಭಾಗಕ್ಕೆ ೨೭ ಬಾಲಕರು ನೋಂದಣಿ ಮಾಡಿಕೊಂಡಿದ್ದಾರೆ. ಹಾಕಿ ವಿಭಾಗದಿಂದ ಹಿರಿಯ ಬಾಲಕರು ೫೮, ಕಿರಿಯ ಬಾಲಕರು ೪೧, ಅದೇ ರೀತಿಯಲ್ಲಿ ಹಾಕಿ ವಿಭಾಗಕ್ಕೆ ಬಾಲಕಿಯರ ಹಿರಿಯರ ವಿಭಾಗಕ್ಕೆ ೯ ಕಿರಿಯ ವಿಭಾಗಕ್ಕೆ ೧೫, ನಂತರ ಜಿಮ್ನಾಸ್ಟಿಕ್ಸ್ ವಿಭಾಗಕ್ಕೆ ಹಿರಿಯರ ಬಾಲಕರು ೨, ಕಿರಿಯ ಬಾಲಕರು ೬ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು ೨೦೨ ವಿದ್ಯಾರ್ಥಿಗಳು ಆಗಮಿಸಿದ್ದು, ಇದರಲ್ಲಿ ೧೭೨ ಬಾಲಕರು ಮತ್ತು ೩೦ ಬಾಲಕಿಯರು ಭಾಗವಹಿಸಿದ್ದಾರೆ.
ಈ ಸಂದರ್ಭ ಕೂಡಿಗೆ ಕ್ರೀಡಾ ಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ. ಧನುಕುಮಾರ್, ಹಾಕಿ ವಿಭಾಗದ ತರಬೇತುದಾರರುಗಳಾದ ವಿಜಯ ಕೃಷ್ಣ, ಬಿ.ಎಸ್. ವೆಂಕಟೇಶ್, ಸುಂದರೇಶ್, ಕೆ.ಕೆ. ಬಿಂದಿಯಾ, ದಿನಾಮಣಿ ಜಾಕೀರ್ ಮತ್ತು ಜಿಮ್ನಾಸ್ಟಿಕ್ಸ್ ವಿಭಾಗದ ಸಂಚಾಲಕರುಗಳಾದ ಸುಧೀರ್ ದೇವರಾಜ್, ಲೋಕೇಶ್, ಮಹಾದೇವ ಫಟ್ನಟ್ಟಿ, ಫುಟ್ಬಾಲ್ ವಿಭಾಗದ ಸಂಚಾಲಕರಾಗಿ ಗೋಪಾಲ್, ಕೃಷ್ಣ, ಮಹಮ್ಮದ್ ಮಸೂದ್, ಎಸ್. ಶಾಂತಿ ಹಾಜರಿದ್ದರು.