ಮಡಿಕೇರಿ, ಮೇ ೮: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಕರ್ಣಂಗೇರಿ ಗ್ರಾಮದ ನಿಸರ್ಗ ಬಡಾವಣೆಯ ತುಳು ಭಾಷಿಕರ ಸಭೆ ನಿಸರ್ಗ ಬಡಾವಣೆಯಲ್ಲಿ ನಡೆಯಿತು.

ಕೂಟದ ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಸುರೇಶ್ ಕುಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ಣಂಗೇರಿ ಗ್ರಾಮ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ. ಐತ್ತಪ್ಪ ರೈ ಮಾತನಾಡಿ, ಪ್ರತಿ ಗ್ರಾಮ, ಹೋಬಳಿ ಮಟ್ಟದಲ್ಲಿ ತುಳುವೆರ ಜನಪದ ಕೂಟವನ್ನು ರಚಿಸಿ ತುಳು ಭಾಷಿಕರ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವುದು. ಜಿಲ್ಲೆಯಲ್ಲಿ ತುಳು ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಲು ಸಂಘಟನೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ ಎಂದರು.

ಕೂಟದ ಪ್ರಮುಖರಾದ ಬಿ.ಎನ್. ರಮೇಶ್ ಮಾತನಾಡಿ, ತುಳು ಭಾಷೆ, ಸಂಸ್ಕೃತಿಯ ಇತಿಹಾಸವನ್ನು ಜನಾಂಗ ಬಾಂಧವರು ತಿಳಿದುಕೊಳ್ಳಬೇಕು. ತುಳು ಸಂಘಟನೆಯ ಮೂಲಕ ತುಳು ಜನಾಂಗದ ಇರುವಿಕೆಯನ್ನು ಸಾಬೀತುಪಡಿಸಬೇಕು ಎಂದು ಕರೆ ನೀಡಿದರು.

ತುಳುವೆರ ಜನಪದ ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಸಂಘಟನಾ ಕಾರ್ಯದರ್ಶಿ ರಾಜೀವ್ ಲೋಚನ, ಖಜಾಂಚಿ ಪ್ರಭು ರೈ, ಉಪಾಧ್ಯಕ್ಷೆ ವಿಜಯಲಕ್ಷಿö್ಮÃ ರವಿಶೆಟ್ಟಿ, ನಿರ್ದೇಶಕಿ ಲೀಲಾ ಶೇಷಮ್ಮ, ನಗರಸಭಾ ಸದಸ್ಯೆ ಚಿತ್ರಾವತಿ ಪೂವಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ನಿರೂಪಿಸಿ, ವಂದಿಸಿ ದರು, ಭಾಗೀರಥಿ ಪ್ರಾರ್ಥಿಸಿದರು.