ಗೋಣಿಕೊಪ್ಪ ವರದಿ, ಮೇ ೭: ಯರವ ಸಮಾಜದ ವತಿಯಿಂದ ತಿತಿಮತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಯರವ ಜನಾಂಗದ ‘ಎವುಲಾತಿಲ್ಲೇರಂಡ’ ಕ್ರಿಕೆಟ್ ಟೂರ್ನಿಯಲ್ಲಿ ೭ ತಂಡಗಳು ಗೆಲುವು ಪಡೆದುಕೊಂಡವು.

ಚೆನ್ನAಗಿ ಶಿವು ಕ್ರಿಕೆಟರ್ಸ್ ಶ್ರೀರಾಮ ವಿರುದ್ಧ ೨೭ ರನ್ ಗೆಲುವು ಪಡೆಯಿತು. ಚೆನ್ನಂಗಿ ೭೫, ಶ್ರೀರಾಮ ೪೮ ರನ್ ಗಳಿಸಿತು.

ಕಾರೆಕಂಡಿ ಡಿವೈಸಿ ಗದ್ದೆಮನೆ ವಿರುದ್ಧ ೧೮ ರನ್ ಜಯ ಪಡೆಯಿತು. ಕಾರೆಕಂಡಿ ೪೬, ಗದ್ದೆಮನೆ ೨೩ ರನ್ ದಾಖಲಿಸಿತು.

ಎಸ್‌ಎಫ್‌ಸಿ ಬಾಯ್ಸ್ ನೊಕ್ಯ ಡಾಲ್ಫಿನ್ಸ್ ವಿರುದ್ಧ ೭ ವಿಕೆಟ್ ಜಯ ಸಾಧನೆ ಮಾಡಿತು. ನೊಕ್ಯ ೩೭, ಬಾಯ್ಸ್ ೩೮ ರನ್ ಗಳಿಸಿತು.

ಜೆಟಿ ಫ್ರೆಂಡ್ಸ್ ನಂದ ಫ್ರೆಂಡ್ಸ್ ತಂಡವನ್ನು ೮ ವಿಕೆಟ್‌ಗಳಿಂದ ಸೋಲಿಸಿತು. ನಂದಾ ಫ್ರೆಂಡ್ಸ್ ೩೪, ಜೆಟಿ ೩೫ ರನ್ ಸೇರಿಸಿದವು.

ನ್ಯೂಟೈಟಾನ್ಸ್ ಜೆಟಿ ಫ್ರೆಂಡ್ಸ್ ವಿರುದ್ಧ ೬ ವಿಕೆಟ್ ಗೆಲುವು ಪಡೆಯಿತು. ನ್ಯೂಟೈಆನ್ಸ್ ೩೯, ಜೆ ಟಿ ೩೮ ರನ್ ದಾಖಲಿಸಿತು.

ನೊಕ್ಯ ಡಾಲ್ಫಿನ್ಸ್ ತಂಡವು ೮ ವಿಕೆಟ್‌ಗಳಿಂದ ಕಾರೆಕಂಡಿಯನ್ನು ಮಣಿಸಿತು. ನೊಕ್ಯ ೧೮, ೧೭ ರನ್ ದಾಖಲಿಸಿತು.

ಚೆನ್ನಂಗಿ ಶಿವು ಫ್ರೆಂಡ್ಸ್ ಕುಟ್ಟ ಸಿಆರ್‌ಟಿ ತಂಡವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಕುಟ್ಟ ೧೪ ರನ್, ಶಿವು ೧೬ ರನ್ ಸೇರಿಸಿತು.