ಮಡಿಕೇರಿ, ಮೇ ೬ : ಹಿಂದೂ ಸಮಾಜವನ್ನು ಒಗ್ಗೂಡಿಸಿ ಸನಾತನ ಧರ್ಮವನ್ನು ದೇಶದಾದ್ಯಂತ ಪರಿಚಯಿಸಲು ಶಂಕರಾಚಾರ್ಯರು ಅವಿರತ ಶ್ರಮ ಪಟ್ಟಿದ್ದಾರೆ ಎಂದು ಪುತ್ತೂರಿನ ಅಂಬಿಕಾ ಪದವಿ ಕಾಲೇಜಿನ ಪ್ರಾಚಾರ್ಯ ವಿನಾಯಕ ಭಟ್ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸಹಯೋಗದಲ್ಲಿ ನಗರದ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ, ಭಟ್ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸಹಯೋಗದಲ್ಲಿ ನಗರದ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪ, ಮಾಡಿದ್ದಾರೆ. ತ್ರೇತಾಯುಗ ಹಾಗೂ ದ್ವಾಪರಯುಗಗಳಲ್ಲಿ ರಾಮ-ಕೃಷ್ಣರು ಯಾವ ರೀತಿ ಸಂಘರ್ಷಗಳಿಗೆ ಕೊನೆ ಹಾಕಿದರೋ ಅದೇ ರೀತಿ ಕಲಿಯುಗದಲ್ಲಿ ಶಂಕರಾಚಾರ್ಯರ ಅವಿಸ್ಮರಣೀಯ ಸೇವೆಯಿಂದಾಗಿ ಸನಾತನ ಧರ್ಮದ ರಕ್ಷಣೆ ಹಾಗೂ ಪರಿಚಯ ಸಾಧ್ಯವಾಗಿದೆ ಎಂದರು. ನಾವು-ನೀವು ಎಂಬುದು ವ್ಯಾವಹಾರಿಕ ಸತ್ಯ, ಪಾರಮಾತ್ಮಿಕ ಸತ್ಯವಲ್ಲ ಎಂದು ಸಾರಿದ ಶಂಕರಾಚಾರ್ಯರು, ಸರ್ವರನ್ನೂ ಆತ್ಮೀಯರು ಎಂದು ಕರೆಯುತ್ತಾ ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸುವ ಪ್ರಯತ್ನ ನಡೆಸಿದ್ದರು. ಇಂದು ಭಗವದ್ಗೀತೆ ಅಂತರರಾಷ್ಟಿçÃಯ ಮಟ್ಟದಲ್ಲೂ ಪ್ರಸಿದ್ಧಿ ಪಡೆದಿದೆ. ಮಹಾಭಾರತದ ಒಂದು ಭಾಗವಾದ ಭಗವದ್ಗೀತೆಯನ್ನು ಭಾಷ್ಯ ವ್ಯಾಖ್ಯಾನದ ಮೂಲಕ ಮಹಾಭಾರತದಿಂದ ಪ್ರತ್ಯೇಕಿಸಿ ವಿಶೇಷ ಗ್ರಂಥವೆAದು ಗುರುತಿಸಿ ನಾಮಕರಣಗೊಳಿಸಿದ ಹಿರಿಮೆಯೂ ಶಂಕರರಿಗೆ ದೊರಕುತ್ತದೆ. ಈ ಹಿಂದೆ ಶಂಕರಾಚಾರ್ಯರ ಜನ್ಮದಿನವನ್ನು ತತ್ವಜ್ಞಾನಿಗಳ ದಿನ ಎಂದು ಗುರುತಿಸಲಾಗಿತ್ತು. ಇಂದು ಇಂತಹ ಮಹಾನ್ಪುರುಷರನ್ನು ಸರಕಾರ ಗುರುತಿಸಿ ಅಧಿಕೃತ ಸರಕಾರಿ ಕಾರ್ಯಕ್ರಮ ಎಂದು ಘೋಷಿಸಿರುವುದು ಸ್ವಾಗತಾರ್ಹ ಎಂದು ಹೇಳಿದರು.

(ಮೊದಲ ಪುಟದಿಂದ)

ತತ್ವಾದರ್ಶಗಳ ಪಾಲನೆ - ಕೆ.ಜಿ ಬೋಪಯ್ಯ

ಶಂಕರಾಚಾರ್ಯರ ನೆನಪು ವರ್ಷಕ್ಕೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಅವರ ಆದರ್ಶ, ತತ್ವಗಳನ್ನು ಹಿಂದೂ ಧರ್ಮದವರು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿ, ಪಾಲಿಸುವುದರ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಹೀಗಾದರೆ ಮಾತ್ರ ಇಂತಹ ಆಚರಣೆಗಳಿಗೆ ಅರ್ಥವಿರುತ್ತದೆ ಎಂದು ಶಾಸಕ ಕೆ.ಜಿ ಬೋಪಯ್ಯ ಅವರು ಅಭಿಪ್ರಾಯಪಟ್ಟರು. ದೇಶದಲ್ಲಿ ಅವರು ಸಾಮಾಜಿಕ ನ್ಯಾಯ ಸ್ಥಾಪಿಸಿದ ಕೀರ್ತಿಗೆ ಪಾತ್ರರು ಎಂದರು.

ಶAಕರಾಚಾರ್ಯರು ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದು ಪ್ರಕೃತಿಯ ವಿಪರ್ಯಾಸ. ಇಷ್ಟು ಚಿಕ್ಕ ಪ್ರಾಯದಲ್ಲೇ ಹಿಂದೂ ಧರ್ಮದ ಏಳಿಗೆಗೆ ಶ್ರಮಪಟ್ಟ ಅವರು, ಇನ್ನೂ ಹಲವಾರು ವರುಷಗಳ ಕಾಲ ಜೀವಿಸಿದ್ದಲ್ಲಿ ಧರ್ಮವನ್ನು ಮತ್ತಷ್ಟು ಅಭಿವೃದ್ಧಿಯತ್ತ ಸಾಗಿಸುತ್ತಿದ್ದರು ಎಂದು ಬೋಪಯ್ಯ ಹೇಳಿದರು.

ಸರ್ವ ಜನರ ಹಿತ - ರಂಜನ್

ಶAಕರಾಚಾರ್ಯರ ತತ್ವಗಳು ವೇದೋಪನಿಷತ್ತುಗಳ ಸಾರವನ್ನು ಒಳಗೊಂಡಿವೆ. “ಸರ್ವೆ ಜನಾಃ ಸುಖಿನೋ ಭವಂತು” ಎನ್ನುವ ಸರ್ವರ ಹಿತವನ್ನು ಬಯಸುವ ಮಾರ್ಗದರ್ಶನವಿದೆ ಎಂದು ಸಭಾಧ್ಯಕ್ಷತೆ ವಹಿಸಿದ್ದ ಎಂ.ಪಿ.ಅಪ್ಪಚ್ಚು ರಂಜನ್ ಅವರು ವಿಶ್ಲೇಶಿಸಿದರು. ಶಂಕರಾಚಾರ್ಯರ ಜಯಂತಿಯನ್ನು ಸರಕಾರಿ ಕಾರ್ಯಕ್ರಮ ಎಂದು ಘೋಷಿಸಿ ಕೊಡಗು ಜಿಲ್ಲೆಯಲ್ಲಿ ಆಚರಿಸಲು ನಿರ್ಧರಿಸಿದ್ದು ಹಮ್ಮೆಯ ವಿಚಾರ. ಸರಕಾರದಿಂದ ಈ ಕಾರ್ಯಕ್ರಮಕ್ಕೆ ರೂ.೫ ಲಕ್ಷ ಬಿಡುಗಡೆಯಾಗಿದ್ದು, ಕಾರ್ಯಕ್ರಮಕ್ಕೆ ಖರ್ಚಾಗಿ ಬಾಕಿ ಉಳಿದ ಹಣವನ್ನು ಬ್ರಾಹ್ಮಣ ಸಮಾಜಕ್ಕೆ ನೀಡುವಂತಾಗಬೇಕೆAದು ಶಾಸಕ ಅಪ್ಪಚ್ಚು ರಂಜನ್ ಅವರು ಅಭಿಪ್ರಾಯಪಟ್ಟರು. ಬ್ರಾಹ್ಮಣ ಸಮುದಾಯದವರು ಬುದ್ಧಿವಂತರು ಎಂಬ ಖ್ಯಾತಿ ಪಡೆದಿದ್ದಾರೆ. ಆದರೆ ಇಂದಿನ ಕಾರ್ಯಕ್ರಮದಲ್ಲಿ ಜನಸಂಖ್ಯೆ ವಿರಳವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕೆAದರು.

ನಮ್ಮ ಕೈಯಲ್ಲಿನ ಐದು ಬೆರಳುಗಳೂ ತಾನು ಶ್ರೇಷ್ಠ ಎಂದು ಹೇಳಿಕೊಳ್ಳುತ್ತವಂತೆ. ಆದರೆ, ಈ ಐದು ಬೆರಳುಗಳು ಸೇರಿದರೆ ಮಾತ್ರ ದೇವರಿಗೆ ಸಮರ್ಪಕವಾಗಿ ನಮಸ್ಕಾರ ಮಾಡಲು ಸಾಧ್ಯ. ಅದರಂತೆ ಬ್ರಾಹ್ಮಣ ಸಮುದಾಯ ವಿಭಿನ್ನತೆ ಮರೆತು ಒಗ್ಗಟ್ಟಿನಿಂದ ಮುನ್ನಡೆಯುವಂತೆ ಅವರು ಸಲಹೆಯಿತ್ತರು.

ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ರಾಜ್ಯಾಧ್ಯಕ್ಷ ರವಿ ಕುಶಾಲಪ್ಪ ಅವರು ಮಾತನಾಡಿ ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಅತ್ಯುತ್ತಮ ಸಾಧನೆ ಗೈದಿದ್ದರು. ಇಂತಹ ಮಹಾತ್ಮರನ್ನು ಗುರುತಿಸಿ ಅವರು ಜನಿಸಿ ಇಂದು ಸುಮಾರು ೧,೨೦೦ ವರ್ಷಗಳ ಬಳಿಕ ಜಯಂತ್ಯೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಸರಕಾರ ಮುಂದಿನ ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಶಂಕರ ಜಯಂತಿ ಆಚರಿಸಲು ಮುಂದಾಗಬೇಕೆAದರು.

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಮಾತನಾಡಿ ಸನಾತನ ಭಾರತೀಯ ಸಂಸ್ಕೃತಿಯನ್ನು ದೇಶದಾದ್ಯಂತ ಪಸರಿಸಿರುವ ಹಿರಿಮೆ ಶಂಕರಾಚಾರ್ಯರಿಗೆ ದೊರಕುತ್ತದೆ. ಹಿಂದೂ ಧರ್ಮದ ತತ್ವ ಸಿದ್ಧಾಂತಗಳನ್ನು ಪರಿಚಯಿಸಿ ದೇಶದ ೪ ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿರುವ ಶಂಕರರ ಸೇವೆ ಅವಿಸ್ಮರಣೀಯ ಎಂದರು.

ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಗೋಪಾಲಕೃಷ್ಣ ಅವರು ಮಾತನಾಡಿ ಕಡಿಮೆ ಕಾಲಾವಕಾಶದಲ್ಲಿ ಶಂಕರ ಜಯಂತಿ ಸಿದ್ಧತೆಗೆ ಶ್ರಮಿಸಿದ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಹಿಂದೂ ಧಾರ್ಮಿಕ ಜಾಗೃತಿ ನಡೆಸಿರುವ ಆಚಾರ್ಯರುಗಳಾದ ಶಂಕರಾಚಾರ್ಯರು, ಮದ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಸೇವಾ ಸ್ಮರಣಾ ದಿನವನ್ನು ಸಮಾಜದಿಂದ ಒಟ್ಟಾಗಿ ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾರ್ಯದರ್ಶಿ ಅರುಣ್ ಕುಮಾರ್, ಬ್ರಾಹ್ಮಣ ಸಮಾಜದ ಪ್ರಮುಖರಾದ ಡಾ.ರಾಜಾರಾಮ್, ಜಿ.ಟಿ ರಾಘವೇಂದ್ರ, ಬಿ.ಕೆ ಜಗದೀಶ್, ಅನಿಲ್ ಹೆಚ್.ಟಿ, ಗೀತಾ ಗಿರೀಶ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೆ.ಕೆ. ವಿಶ್ವನಾಥ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶಂಕರ ಜಯಂತಿ ಪ್ರಯುಕ್ತ ಬೆಳಿಗ್ಗಿನಿಂದಲೇ ಕಲ್ಯಾಣ ಮಂಟಪದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರುದ್ರ ಪಠಣ, ರುದ್ರಾಭಿಷೇಕ, ಗುರು ಪೂಜೆ, ಸಾಮೂಹಿಕ ಉಪನಯನ, ಭಜನಾ ಸ್ಪರ್ಧೆಗಳು ನಡೆದವು. ಭಜನಾ ಸ್ಪರ್ಧೆಯ ತೀರ್ಪುಗಾರರಾಗಿ ಜಯಲಕ್ಷಿö್ಮÃ ರಮೇಶ್, ಶ್ರೀಧರ್ ಹೆಗ್ಡೆ ಹಾಗೂ ಜಿ.ಟಿ.ರಾಘವೇಂದ್ರ ಅವರುಗಳು ಕಾರ್ಯನಿರ್ವಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನ್ ಸ್ವಾಗತಿಸಿದರು, ಮಣಜೂರು ಮಂಜುನಾಥ್ ವಂದಿಸಿದರು, ಕುಮಾರ ಹಾಗೂ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಎಮ್.ಈಶ್ವರ ಭಟ್ ಅವರು ಅತಿಥಿ ಉಪನ್ಯಾಸಕ ವಿನಾಯಕ ಭಟ್ ಅವರನ್ನು ಪರಿಚಯಿಸಿದರು. ರಾಘವೇಂದ್ರ ಪ್ರಸಾದ್ ಮತ್ತು ತಂಡ ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಹೊರತರಲಾದ ಕೀ-ಚೈನ್ ಬಿಡುಗಡೆ ಮಾಡಲಾಯಿತು.