ಸೋಮವಾರಪೇಟೆ, ಮೇ ೮: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸತೀಶ್ ಮತ್ತು ಅಂಜಲಿ ದಂಪತಿಯ ಒಂದೂವರೆ ವರ್ಷದ ಮಗು ರೇಷ್ಮಾ ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ನಿಂದ ಧನ ಸಹಾಯ ನೀಡಲಾಯಿತು.
ಟ್ರಸ್ಟ್ನ ಸಮಾನ ಮನಸ್ಕರ ತಂಡ ೨೧,೮೦೦ ಗಳನ್ನು ಬೋವಿ ಸಮಾಜದ ಅಧ್ಯಕ್ಷ ಸುಜಿತ್ ಮೂಲಕ ಮಗುವಿನ ಪೋಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷ ಅಕ್ಬರ್, ಉಪಾಧ್ಯಕ್ಷ ಜುನೈದ್ ಹೊಸತೋಟ, ಪ್ರಧಾನ ಕಾರ್ಯದರ್ಶಿ ರಫೀಕ್, ಸಲಹೆಗಾರ ತಾಜುದ್ದೀನ್ ಅವರುಗಳು ಉಪಸ್ಥಿತರಿದ್ದರು.