ಮಡಿಕೇರಿ, ಮೇ ೮: ಬಾವಲಿ ಪುತ್ತೂಮಾಡು ಯುವಕ ಸಂಘದ ವತಿಯಿಂದ ಪಾರಾಣೆ ಶಾಲಾ ಮೈದಾನದಲ್ಲಿ ನಡೆದ ೪ನೇ ವರ್ಷದ ಕೆಂಬಟ್ಟಿ ಜನಾಂಗದ ಕ್ರೀಡೋತ್ಸವ ಮುಕ್ತಾಯಗೊಂಡಿತು.

ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜೋಡುಪಟ್ಟಿ ತಂಡವು ನಿಗದಿತ ೫ ಓವರ್‌ಗಳಲ್ಲಿ ೪೮ ರನ್‌ಗಳ ಗುರಿ ನೀಡಿತು. ನಂತರ ಬ್ಯಾಟ್ ಮಾಡಿದ ಯಂ.ಆರ್.ಎಫ್. ಮೂರ್ನಾಡು ತಂಡ ೪೬ರನ್ ಗಳಿಸಲು ಮಾತ್ರ ಶಕ್ತವಾಯಿತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪ್ರಮೋದ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸುಜಯ್ (ಎಂಆರ್‌ಎಫ್), ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಶರಣ್ (ಯವಕಪಾಡಿ) ಪಡೆದುಕೊಂಡರು.

ಮಹಿಳಾ ಥ್ರೋ ಬಾಲ್‌ನಲ್ಲಿ ಬಿಳುಗುಂದ ವಿನ್ನರ್ ಮತ್ತು ಪುತ್ತೂಮಾಡ್ ತಂಡ ರನ್ನರ್ ಪ್ರಶಸ್ತಿ ಪಡೆದುಕೊಂಡಿತು. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಅರಮೇರಿ ವಿನ್ನರ್, ಬಾವಲಿ ಪುತ್ತೂಮಾಡ್ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಕೆಂಬಟ್ಟಿ ಜನಾಂಗ ಬಾಂಧವರು ಕ್ರೀಡೆಯಲ್ಲಿ ರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ನಡೆಸಬೇಕು ಎಂದು ಸಲಹೆಯಿತ್ತರು.

ಕೊಡವ ಭಾಷಿಕ ಸಮುದಾಯ ಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಕೆಂಬಟ್ಟಿ ಜಾನಾಂಗದವರು ತಮ್ಮ ಮಧ್ಯೆ ಐಕ್ಯತೆಯನ್ನು ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ನೀಡಿದರು. ಕರ್ನಾಟಕ ಸರ್ಕಾರದ ಕೆ.ಪಿ.ಎಸ್.ಸಿ ಸದಸ್ಯ ಮಂಡೆಕುಟ್ಟಡ

(ಮೊದಲ ಪುಟದಿಂದ) ಪವಿತ್ರ ಮಾತನಾಡಿ, ಕೆಂಬಟ್ಟಿ ಜನಾಂಗದವರು ಶೈಕ್ಷಣಿಕವಾಗಿಯೂ ಮುಂದೆ ಬಂದು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ಕರೆ ನೀಡಿದರು.

ಕೊಣಂಜಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೆರೆಯಂಡಮ್ಮನ ಬೆಳ್ಯಮ್ಮಯ್ಯ, ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷ ದೊಡ್ಡ ಕುಟ್ಟಡ ರಾಮು ಅಯ್ಯಪ್ಪ, ಮುಕ್ಕಾಟಿರ ಚೋಟು ಅಪ್ಪಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪುಡಿಞರಂಡ ಪ್ರಭು ಕುಮಾರ್, ಕೂಡಂಡ ಸಾಬಾ ಸುಬ್ರಮಣಿ, ನಿವೃತ್ತ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಬಡಕುಟ್ಟಡ ಪಾರ್ಥ, ಪುತ್ತೂಮಾಡು ಯುವಕ ಸಂಘದ ಅಧ್ಯಕ್ಷ ಬಿದ್ದಣಿಕುಟ್ಟಡ ಕಿರಣ್ ಕಾವೇರಪ್ಪ, ಮತ್ತಿತರರು ಹಾಜರಿದ್ದರು, ದಿನೇಶ್ ಪೆಗ್ಗೋಲಿ ಸ್ವಾಗತಿಸಿ, ನಾಗೇಶ್ ನಿರೂಪಿಸಿದರು.