ಮಡಿಕೇರಿ, ಮೇ ೭: ಬಾವಲಿ ಪುತ್ತ್ಮಾಡು ಯುವಕ ಸಂಘದ ವತಿಯಿಂದ ಕಳೆದ ನಾಲ್ಕು ದಿನಗಳಿಂದ ಪಾರಾಣೆ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೆಂಬಟ್ಟಿ ಕ್ರೀಡಾಕೂಟ-೨೦೨೨ ಅಂತಿಮ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ತಾ. ೮ ರಂದು (ಇಂದು) ನಡೆಯಲಿದೆ.

ಜನಾಂಗ ಬಾಂಧವರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್, ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿಗಳು ನಡೆಯುತ್ತಿವೆ. ಇದರ ಫೈನಲ್ ಪಂದ್ಯಾಟ ಇಂದು ನಡೆಯಲಿದೆ.

ಕೆಂಬಟ್ಟಿ ಸಮಾಜ ಅಧ್ಯಕ್ಷ ದೊಡ್ಡ ಕುಟ್ಟಡ ರಾಮು ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ, ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ರಾಜ್ಯ ಸರಕಾರದ ಕೆಪಿಎಸ್‌ಸಿ ಸದಸ್ಯ ಮಂಡೇಕುಟ್ಟಡ ಪವಿತ್ರ, ಕಾರ್ಮಿಕ ಮುಖಂಡ ನಾಪಂಡ ಮುತ್ತಪ್ಪ, ಕೊಣಂಜಗೇರಿ ಗ್ರಾ.ಪಂ. ಸದಸ್ಯ ಕಾದೀರ ಉಮೇಶ್ ಪಳಂಗಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಮುಕ್ಕಾಟೀರ ಚೋಟು ಅಪ್ಪಯ್ಯ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಯುವಕ ಸಂಘದ ಅಧ್ಯಕ್ಷ ಬಿದ್ದಣಕುಟ್ಟಡ ಕಿರಣ್ ಕಾವೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.