ಮಡಿಕೇರಿ, ಮೇ ೭: ಕೊಡವಾಮೆರ ಕೊಂಡಾಟ ಸಂಘಟನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಸಂಘಟನೆಯ ಸ್ಥಾಪಕರೂ ಆಗಿರುವ ಚಾಮೆರ ದಿನೇಶ್ ಬೆಳ್ಯಪ್ಪ, ಕಾರ್ಯದರ್ಶಿಯಾಗಿ ಕುಂಞÂÃರ ಗಿರೀಶ್ ಭೀಮಯ್ಯ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಳೇಟಿರ ಅಜಿತ್ ಪೂವಣ್ಣ, ಮಹಿಳಾ ಉಪಾಧ್ಯಕ್ಷೆಯಾಗಿ ಕುಲ್ಲಚಂಡ ವಿನುತ ಕೇಸರಿ, ಖಜಾಂಚಿಯಾಗಿ ಸಣ್ಣುವಂಡ ಕಿಸುದೇವಯ್ಯ, ಸಹಕಾರ್ಯದರ್ಶಿಯಾಗಿ ಮಲ್ಲಂಡ ದರ್ಶನ್ ಮುತ್ತಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ತೀತಮಾಡ ಸೋಮಣ್ಣ, ಆಡಳಿತ ಮಂಡಳಿ ಸದಸ್ಯರಾಗಿ ಚಿರಿಯಪಂಡ ವಿಶುಕಾಳಪ್ಪ,

ನೂರೇರ ಬಬಿತ, ಅಜ್ಜಮಕ್ಕಡ ವಿನುಕುಶಾಲಪ್ಪ, ಚಾಮೆರ ಪ್ರಿಯ ದಿನೇಶ್, ಕಾನೂನು ಸಲಹೆಗಾರರಾಗಿ ಪಾಂಡAಡ ಮೇದಪ್ಪ, ಲೆಕ್ಕ ಪರಿಶೋಧಕರಾಗಿ ಕೊಡಂದೇರ ಸುಬ್ಬಯ್ಯ ಅವರು ಆಯ್ಕೆಯಾದರು.

ವೀರಾಜಪೇಟೆ ಅಖಿಲಕೊಡವ ಸಮಾಜ ಸಭಾಂಗಣದಲ್ಲಿ ಏಪ್ರಿಲ್ ೩೦ರಂದು ನಡೆದ ಸಂಘಟನೆಯ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಈ ಆಯ್ಕೆ ನಡೆಯಿತು.