ಕಣಿವೆ, ಮೇ ೮: ವಾಸಕ್ಕೆ ಇಲ್ಲದ ಸೂರು....ಕನಿಷ್ಟ ಸ್ವಚ್ಛತೆಯೂ ಇಲ್ಲದ ಕೊಳಚೆ ಪ್ರದೇಶ... ಗಬ್ಬೆಂದು ನಾರುತ್ತಿರುವ ಕಸದ ರಾಶಿಯೊಳಗೆ ಕೊಳೆಯುತ್ತಿರುವ ಈ ಜನರ ಬದುಕು...

ಸುತ್ತಲೂ ಝಗಮಗಿಸುವ ಕೆಇಬಿ ಲೈಟುಗಳಿದ್ದರೂ ಕೂಡ ಈ ಮಂದಿಯ ಸೂರೊಳಗೆ ಮಾತ್ರ ಬರೇ ಕತ್ತಲು...

ಇದು ಎಲ್ಲೋ ದೂರದ ಅರಣ್ಯದ ಅಂಚಿನಲ್ಲಿ ಇರುವ ಗಿರಿಜನ ಹಾಡಿಯದಲ್ಲ. ಸಾರಿಗೆ ಸಂಪರ್ಕದಿAದ ವಂಚಿತ ಗೊಂಡAತಹ ಎಲ್ಲೋ ದೂರದ ಕೊಳಚೆ ಪ್ರದೇಶವೂ ಅಲ್ಲ. ರಾಜಕಾರಣಿಗಳು, ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿಧಿ ಗಳಿಗೆ ಅರಿವಿರದ ಪ್ರದೇಶವಂತೂ ಅಲ್ಲವೇ ಅಲ್ಲ...

ಕಣಿವೆ, ಮೇ ೮: ವಾಸಕ್ಕೆ ಇಲ್ಲದ ಸೂರು....ಕನಿಷ್ಟ ಸ್ವಚ್ಛತೆಯೂ ಇಲ್ಲದ ಕೊಳಚೆ ಪ್ರದೇಶ... ಗಬ್ಬೆಂದು ನಾರುತ್ತಿರುವ ಕಸದ ರಾಶಿಯೊಳಗೆ ಕೊಳೆಯುತ್ತಿರುವ ಈ ಜನರ ಬದುಕು...

ಸುತ್ತಲೂ ಝಗಮಗಿಸುವ ಕೆಇಬಿ ಲೈಟುಗಳಿದ್ದರೂ ಕೂಡ ಈ ಮಂದಿಯ ಸೂರೊಳಗೆ ಮಾತ್ರ ಬರೇ ಕತ್ತಲು...

ಇದು ಎಲ್ಲೋ ದೂರದ ಅರಣ್ಯದ ಅಂಚಿನಲ್ಲಿ ಇರುವ ಗಿರಿಜನ ಹಾಡಿಯದಲ್ಲ. ಸಾರಿಗೆ ಸಂಪರ್ಕದಿAದ ವಂಚಿತ ಗೊಂಡAತಹ ಎಲ್ಲೋ ದೂರದ ಕೊಳಚೆ ಪ್ರದೇಶವೂ ಅಲ್ಲ. ರಾಜಕಾರಣಿಗಳು, ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿಧಿ ಗಳಿಗೆ ಅರಿವಿರದ ಪ್ರದೇಶವಂತೂ ಅಲ್ಲವೇ ಅಲ್ಲ...

ಹೃದಯ ಭಾಗದಲ್ಲಿರುವ ಈ ಕೊಳಚೆ ಪ್ರದೇಶದಲ್ಲಿ ಎಳೆಯ ಮಕ್ಕಳಾದಿಯಾಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಭವಿಷ್ಯದ ಪ್ರಜೆಗಳು ವಾಸಿಸುತ್ತಿದ್ದಾರೆ.

ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕೂಡ ಇಲ್ಲಿದ್ದಾರೆ. ಆದರೆ ಈ ಮಂದಿಗೆ ವಾಸಕ್ಕೆ ಸೂರು, ಕುಡಿಯಲು ನೀರು, ದಾರಿ ನೀಡೋದು ಹಾಗಿರಲಿ, ಕೊನೆಯ ಪಕ್ಷ ಸ್ವಚ್ಛತೆಯ ಅರಿವು ಹೃದಯ ಭಾಗದಲ್ಲಿರುವ ಈ ಕೊಳಚೆ ಪ್ರದೇಶದಲ್ಲಿ ಎಳೆಯ ಮಕ್ಕಳಾದಿಯಾಗಿ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಭವಿಷ್ಯದ ಪ್ರಜೆಗಳು ವಾಸಿಸುತ್ತಿದ್ದಾರೆ.

ಮಹಿಳೆಯರು ಹಾಗೂ ಹದಿಹರೆಯದ ಹೆಣ್ಣು ಮಕ್ಕಳು ಕೂಡ ಇಲ್ಲಿದ್ದಾರೆ. ಆದರೆ ಈ ಮಂದಿಗೆ ವಾಸಕ್ಕೆ ಸೂರು, ಕುಡಿಯಲು ನೀರು, ದಾರಿ ನೀಡೋದು ಹಾಗಿರಲಿ, ಕೊನೆಯ ಪಕ್ಷ ಸ್ವಚ್ಛತೆಯ ಅರಿವು ನಳನಳಿಸಿದರೂ ಕೂಡ ಈ ಮಂದಿಯ ಸೂರಿನೊಳಗೆ ಸದಾ ಕತ್ತಲೆ.

ಸೂರನ್ನೇ ನೀಡದವರು ಬೆಳಕನ್ನು ನೀಡೋದಾದರು ಹೇಗೆ ? ಹಾಗಾಗಿ ಈ ಮಂದಿ ಆದಿ ಕಾಲದ ಜನರಂತೆ ಬದುಕುತ್ತಿರುವ ಕುಟುಂಬಗಳ ಮಂದಿ ಚಿಂದಿ ಆಯುವ, ಹೋಟೆಲ್ ಗಳಲ್ಲಿ ಕ್ಲೀನ್ ಮಾಡುವ, ಮಾಂಸದ ಅಂಗಡಿಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಆಯಾಯ ದಿನದ ಹೊಟ್ಟೆ ತುಂಬಿಸಿಕೊಳ್ಳುವಷ್ಟು ದೈನಂದಿನ ಸಂಪಾದನೆಗೆ ಮಾತ್ರ ತೊಡಗಿಕೊಂಡಿವೆ. ಈ ಹಿಂದೆ ಈ ಕುಟುಂಬಗಳು ಮಾರುಕಟ್ಟೆ ರಸ್ತೆಯ ಕೆಇಬಿ ಕಾಂಪೌAಡ್ ಪಕ್ಕದಲ್ಲಿ ವಾಸವಿದ್ದವು. ಕ್ರಮೇಣ ಮಾರುಕಟ್ಟೆ ರಸ್ತೆ ವಿಸ್ತರಣೆ ವೇಳೆ ಈ ಮಂದಿಯನ್ನು ಒಕ್ಕಲೆಬ್ಬಿಸಿದ ನಂತರ ಈ ಕುಟುಂಬಗಳು ಮಾಂಸದ ಮಾರುಕಟ್ಟೆ ಬಳಿಯ ಕಸದ ರಾಶಿಯ ಕೇರಿಯಲ್ಲಿ ಶೆಡ್ ಹಾಕಿಕೊಂಡು ಬದುಕು ಕಟ್ಟಿ ದಶಕಗಳೇ ಕಳೆದಿವೆ.

ಇಲ್ಲಿ ವಾಸವಿರುವ ಮಂದಿ ಪ್ರತೀ ಚುನಾವಣೆಗಳಲ್ಲಿ ಮತಗಳನ್ನು ನೀಡುತ್ತಾ ಸೌಲಭ್ಯಗಳ ಭಿಕ್ಷೆ ಬೇಡುತ್ತಲೇ ಬಂದಿದ್ದಾರೆ. ಆದರೆ ಈ ಅಮಾಯಕರು ಹಾಗೂ ಮುಗ್ಧ ಶ್ರಮಿಕರಾದ ನಮ್ಮ ಮತಗಳನ್ನು ಪಡೆದು ಚುನಾಯಿತರಾಗುವ ಮಂದಿ ಗೆದ್ದ ನಂತರ

(ಮೊದಲ ಪುಟದಿಂದ) ನಮ್ಮತ್ತ ಸುಳಿಯುತ್ತಲೇ ಇಲ್ಲ ಎನ್ನುತ್ತಾರೆ ಇಲ್ಲಿಯ ನಿವಾಸಿಗಳಾದ ಕಾವೇರಿ, ರಶ್ಮಿ, ಕವಿತ, ಅಲೀಮ.

ಮಾಂಸದ ಅಂಗಡಿಗಳ ತ್ಯಾಜ್ಯ ಹಾಗೂ ಊರಿನಿಂದ ಸಂಗ್ರಹವಾದ ಕಸದ ರಾಶಿಯನ್ನು ಸುರಿದಿರುವ ಕೊಳಚೆ ಪ್ರದೇಶದಲ್ಲಿ ವಾಸವಿರುವ ಈ ಮಂದಿಯ ಸೂರುಗಳಲ್ಲಿ ಹಗಲು ನೊಣ, ಇಲಿ ಹಾಗೂ ಹೆಗ್ಗಣಗಳು ಅತಿಥಿಗಳಾದರೆ, ಸಂಜೆಯಿAದ ರಾತ್ರಿ ಹಗಲಾಗುವ ತನಕ ಭಯಾನಕ ಹಾಗೂ ತರಹೇವಾರಿ ಸೊಳ್ಳೆಗಳು ಈ ಜನರ ರಕ್ತವನ್ನು ಹೀರುತ್ತಿವೆ. ಇದರಿಂದಾಗಿ ಇಡೀ ವ್ಯವಸ್ಥೆಗೆ ರೋಗ ರುಜಿನಗಳು ಹರಡುವ ಅಪಾಯವಿದೆ. ಆದ್ದರಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ ಹಾಗೂ ಆಡಳಿತ ಮಂಡಳಿ ಕೂಡಲೇ ಈ ಜನವಸತಿ ಪ್ರದೇಶದ ಸ್ವಚ್ಛತೆಗೆ ಮುಂದಾಗಬೇಕಿದೆ. ಅಷ್ಟೇ ಅಲ್ಲದೇ ಗುಡಿಸಲುಗಳಲ್ಲಿ ವಾಸವಿರುವ ಈ ನಿಕೃಷ್ಟ ಮಂದಿಗೆ ಅತೀ ತುರ್ತಾಗಿ ಪಂಚಾಯಿತಿ ಕಡೆಯಿಂದಲೇ ಖರೀದಿಸಿ ಸೊಳ್ಳೆ ಪರದೆಗಳು ಹಾಗೂ ಮಳೆಯಿಂದ ಆಶ್ರಯ ಪಡೆಯಲು ಪ್ಲಾಸ್ಟಿಕ್ ತಾಟುಗಳನ್ನು ನೀಡಿದರೆ ಹಸಿದವರಿಗೆ ನೀಡುವ ತಕ್ಷಣದ ಕೈ ತುತ್ತು ಆದೀತು. ಇಲ್ಲಿ ವಾಸವಿರುವ ಮಂದಿಯ ಮಕ್ಕಳಿಗೆ ಶೈಕ್ಷಣಿಕವಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಹಾಗೂ ಶಾಶ್ವತವಾದ ಸೂರು ಕಲ್ಪಿಸುವಲ್ಲಿ ಪಂಚಾಯಿತಿ ಆಡಳಿತ ಇನ್ನಾದರೂ ಮುಂದಾಗಬೇಕಿದೆ. (ವರದಿ : ಕೆ.ಎಸ್.ಮೂರ್ತಿ)