ಗೋಣಿಕೊಪ್ಪ ವರದಿ, ಮೇ ೭: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ನಡೆಯುತ್ತಿರುವ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್‌ನಲ್ಲಿ ಆಂಡಮಾಡ, ಕೊಂಡಿಜಮ್ಮAಡ ಹಾಗೂ ಅಮ್ಮತ್ತೀರ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆಯಿತು.
ಕ್ವಾರ್ಟರ್ ಫೈನಲ್‌ನಲ್ಲಿ ಗೋಣಿಕೊಪ್ಪ ವರದಿ, ಮೇ ೭: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಅಖಿಲ ಅಮ್ಮಕೊಡವ ಸಮಾಜ, ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ನಡೆಯುತ್ತಿರುವ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್‌ನಲ್ಲಿ ಆಂಡಮಾಡ, ಕೊಂಡಿಜಮ್ಮAಡ ಹಾಗೂ ಅಮ್ಮತ್ತೀರ ತಂಡಗಳು ಸೆಮಿ ಫೈನಲ್ ಪ್ರವೇಶ ಪಡೆಯಿತು.
ಕ್ವಾರ್ಟರ್ ಫೈನಲ್‌ನಲ್ಲಿ ಆಂಡಮಾಡ ತಂಡಕ್ಕೆ ಗುಂಬೀರ ವಿರುದ್ಧ ೪೮ ರನ್‌ಗಳ ಭರ್ಜರಿ ಗೆಲುವು ಲಭಿಸಿತು. ಆಂಡಮಾಡ ೪ ವಿಕೆಟ್ ನಷ್ಟಕ್ಕೆ ೧೦೭ ರನ್ ಪೇರಿಸಿತು. ಗುಂಬೀರ ೫ ವಿಕೆಟ್ ಕಳೆದುಕೊಂಡು ೫೯ ರನ್ ಗಳಿಸಲಷ್ಟೆ ಶಕ್ತವಾಯಿತು. ಆಂಡಮಾಡ ಜಗ್ಗು ೫೪ ರನ್ ದಾಖಲಿಸಿ ತಂಡಕ್ಕೆ ನೆರವಾದರು. ಪಂದ್ಯ ಪುರುಷ ಪ್ರಶಸ್ತಿ ಕೂಡ ದೊರೆಯಿತು.
ಅಮ್ಮತ್ತೀರ ತಂಡವು ಮನ್ನಕಮನೆ ವಿರುದ್ಧ ೫೪ ರನ್‌ಗಳಿಂದ ಗೆಲುವು ಪಡೆದುಕೊಂಡಿತು. ಅಮ್ಮತ್ತೀರ ೪ ವಿಕೆಟ್ ನಷ್ಟಕ್ಕೆ ೮೯ ರನ್ ಸಿಡಿಸಿತು. ಮನ್ನಕಮನೆ ೬ ವಿಕೆಟ್ ನಷ್ಟಕ್ಕೆ ೩೫ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪುತ್ತಾಮನೆ ತಂಡಕ್ಕೆ ನೆರಿಯಮ್ಮಂಡ ವಿರುದ್ಧ ೨೧ ರನ್‌ಗಳ ಭರ್ಜರಿ ಗೆಲುವು ದೊರೆಯಿತು. ಪುತ್ತಾಮನೆ ೭ ವಿಕೆಟ್ ನಷ್ಟಕ್ಕೆ ೭೧ ರನ್ ದಾಖಲಿಸಿತು. ನೆರೆಯಮ್ಮಂಡ ೩ ವಿಕೆಟ್ ಕಳೆದುಕೊಂಡು ೫೦ ರನ್ ದಾಖಲಿಸಿತು. ಪುತ್ತಾಮನೆ ಸುನಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಅಮ್ಮತ್ತೀರವು ಅಚ್ಚಿಯಂಡವನ್ನು ೪೪ ರನ್‌ಗಳಿಂದ ಮಣಿಸಿತು. ಅಮ್ಮತ್ತೀರ ೩ ವಿಕೆಟ್ ನಷ್ಟಕ್ಕೆ ೮೯ ರನ್ ಪೇರಿಸಿತು. ಅಚ್ಚಿಯಂಡ ೪ ವಿಕೆಟ್‌ಗಳಲ್ಲಿ ೪೬ ರನ್ ದಾಖಲಿಸಿತು. ಅಮ್ಮತ್ತೀರ ಸುನಿಲ್ ಪಂದ್ಯ ಶ್ರೇಷ್ಠ ಬಹುಮಾನ ಪಡೆದರು.
ಮನ್ನಕಮನೆ ಚೀರಮ್ಮನವನ್ನು ೭ ವಿಕೆಟ್‌ಗಳಿಂದ ಸೋಲಿಸಿತು. ಚೀರಮ್ಮನ ೫ ವಿಕೆಟ್ ಕಳೆದುಕೊಂಡು ೪೭ ರನ್ ದಾಖಲಿಸಿತು. ಮನ್ನಕಮನೆ ೩ ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.