ಶನಿವಾರಸAತೆ, ಮೇ ೬: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆ ಜಂಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲು ಮಠಾಧೀಶ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ಅರ್ಚಕ ಚಂದ್ರಯ್ಯ ಮತ್ತು ಸಂಗಡಿಗರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಮಹಾಗಣಪತಿ ಪೂಜೆ, ಪುಣ್ಯಾಹ ನಾಂದಿ, ಪಂಚಕಳಶ ಸ್ಥಾಪನೆ, ಮಲ್ಲೇಶ್ವರ- ವೀರಭದ್ರ ಶನಿವಾರಸಂತೆ, ಮೇ ೬: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ ಸಮಿತಿ ವತಿಯಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆ ಜಂಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.

ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲು ಮಠಾಧೀಶ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ಅರ್ಚಕ ಚಂದ್ರಯ್ಯ ಮತ್ತು ಸಂಗಡಿಗರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಮಹಾಗಣಪತಿ ಪೂಜೆ, ಪುಣ್ಯಾಹ ನಾಂದಿ, ಪಂಚಕಳಶ ಸ್ಥಾಪನೆ, ಮಲ್ಲೇಶ್ವರ- ವೀರಭದ್ರ ಮೂರ್ತಿಯನ್ನು ಗಂಗಾ ಸ್ನಾನದಿಂದ ನಂದಿಧ್ವಜ ಕುಣಿತ, ವೀರಗಾಸೆ ತಂಡದವರಿAದ ವೀರಭದ್ರ ನೃತ್ಯ, ಚಿಟ್ಟೆಮೇಳ ವಾದ್ಯದೊಂದಿಗೆ ದೇವಾಲಯಕ್ಕೆ ತರಲಾಯಿತು.

ಮಂಗಳವಾರ ವೀರಭದ್ರ ದೇವರ ಮನೆತನದ ಕುಟುಂಬ ಸದಸ್ಯರು ವೀರಭದ್ರೇಶ್ವರ ದೇವರ ಕೆತ್ತನೆ ಇರುವ ಫಲಕವನ್ನು ತಮ್ಮ ಕೊರಳಿಗೆ ಹಾಕಿಕೊಂಡು ಸ್ವಾಮಿ ಉತ್ಸವ ಮೂರ್ತಿ ಮತ್ತು ಭದ್ರಕಾಳಮ್ಮ ಜೊತೆ ಶ್ವೇತವರ್ಣದ ನಡೆಮುಡಿಯ ಮೇಲೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯದೊAದಿಗೆ ಮೆರವಣಿಗೆಯಲ್ಲಿ ಸಾಗಿ ಕೆಂಡ ಹಾಯ್ದರು. ದೇವಾಲಯ ಪ್ರವೇಶ ಮಾಡಿ ಪ್ರತಿಷ್ಠಾಪನೆ ಮಾಡುವ ಮೂಲಕ ಹಲಗೆ ಜಂಪೋತ್ಸವ ಸಂಪನ್ನವಾಯಿತು.

ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಹಾಗೂ ಜಿಲ್ಲೆ, ನೆರೆ ಜಿಲ್ಲೆಗಳ ಭಕ್ತರು ನೆಲೆಸಿರುವ ಗ್ರಾಮಸ್ಥರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಎರಡೂ ದಿನಗಳಲ್ಲೂ ನಿರಂತರ ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು. ದೇವಾಲಯ ಸಮಿತಿ ಪದಾಧಿಕಾರಿಗಳು, ಗ್ರಾಮ ಮುಖಂಡರು ಹಾಜರಿದ್ದರು.