ಗೋಣಿಕೊಪ್ಪ ವರದಿ, ಮೇ ೬ : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಅಮ್ಮತ್ತಿ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಪೊರುಕೊಂಡ ಕ್ರಿಕೆಟ್ನಲ್ಲಿ ೧೫ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದವು. ಆತಿಥೇಯ ಪೊರುಕೊಂಡ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿತು.
ದೇಯಂಡವು ಕೆತ್ತೀರವನ್ನು ೨೯ ರನ್ಗಳಿಂದ ಸೋಲಿಸಿತು. ದೇಯಂಡ ೪ ವಿಕೆಟ್ ಕಳೆದುಕೊಂಡು ೫೦ ರನ್ ದಾಖಲಿಸಿತು. ಕೆತ್ತೀರ ೩ ವಿಕೆಟ್ ಕಳೆದುಕೊಂಡು ೨೧ ರನ್ ಮಾತ್ರ ಸೇರಿಸಿತು.
ಬೊಳ್ತಂಡ ತಂಡಕ್ಕೆ ಮಾಣೀರ ವಿರುದ್ಧ ೮ ವಿಕೆಟ್ ಜಯ ದೊರೆಯಿತು. ಮಾನೀರ ೩ ವಿಕೆಟ್ ಕಳೆದುಕೊಂಡು ೩೪ ರನ್ ಗುರಿ ನೀಡಿತು. ಬೊಳ್ತಂಡ ೨ ವಿಕೆಟ್ ಕಳೆದುಕೊಂಡು ೪ ಚೆಂಡು ಉಳಿದಿರುವಂತೆ ಗುರಿ ಸಾಧಿಸಿತು.
ಓಡಿಯಂಡಕ್ಕೆ ಮೂಕಳಮಾಡ ವಿರುದ್ಧ ೯ ವಿಕೆಟ್ ಜಯ ದೊರೆಯಿತು. ಓಡಿಯಂಡ ೧ ವಿಕೆಟ್ ಕಳೆದುಕೊಂಡು ೫೬ ರನ್ ಪೇರಿಸಿತು. ಮೂಕಳಮಾಡ ೨ ವಿಕೆಟ್ ನಷ್ಟಕ್ಕೆ ೪೮ ರನ್ ಮಾತ್ರ ಗಳಿಸಿತು.
ಕಾಂಡೇರ ತಂಡ ಅಮ್ಮಂಡ ತಂಡದ ವಿರುದ್ಧ ೮೮ ರನ್ಗಳಿಂದ ಅಮೋಘ ಗೆಲುವು ಸಾಧಿಸಿತು. ವಿಕೆಟ್ ನಷ್ಟವಿಲ್ಲದೆ ಕಾಂಡೇರ ೧೦೯ ರನ್ ಸಿಡಿಸಿತು. ಅಮ್ಮಂಡ ೨ ವಿಕೆಟ್ ನಷ್ಟಕ್ಕೆ ೨೧ ರನ್ ಮಾತ್ರ ಗಳಿಸಿ ಹೀನಾಯ ಪ್ರದರ್ಶನ ನೀಡಿತು. ಆತಿಥೇಯ ಪೊರುಕೊಂಡವು ಕಾಂಡೇರವನ್ನು ೧೪ ರನ್ಗಳಿಂದ ಮಣಿಸಿತು. ಪೊರುಕೊಂಡ ೪ ವಿಕೆಟ್ ನಷ್ಟಕ್ಕೆ ೪೭ ರನ್ ದಾಖಲಿಸಿತು. ಕಾಂಡೇರ ೬ ವಿಕೆಟ್ ಕಳೆದುಕೊಂಡು ೩೩ ರನ್ ಮಾತ್ರ ಸೇರಿಸಿ ಸೋಲೊಪ್ಪಿಕೊಂಡಿತು.
ಮುAಡಿಯೋಳAಡವು ಅಮ್ಮಣಕುಟ್ಟಂಡವನ್ನು ೯ ವಿಕೆಟ್ಗಳಿಂದ ಮಣಿಸಿತು. ಅಮ್ಮಣಕುಟ್ಟಂಡ ೪ ವಿಕೆಟ್ ನಷ್ಟಕ್ಕೆ ೨೪ ರನ್ ಗಳಿಸಿತು. ಮುಂಡಿಯೋಳAಡವು ೨ ಓವರ್ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿತು.
ಮೂಕಳೇರವು ಮುಕ್ಕಾಟೀರ (ಕುಂಬಳದಾಳು) ತಂಡದ ವಿರುದ್ಧ ೭ ವಿಕೆಟ್ ಜಯ ಸಾಧಿಸಿತು. ಮುಕ್ಕಾಟೀರ ವಿಕೆಟ್ ನಷ್ಟವಿಲ್ಲದೆ ೩೫ ರನ್ ಗುರಿ ನೀಡಿತು. ಮೂಕಳೇರ ೩ ವಿಕೆಟ್ ಕಳೆದುಕೊಂಡು ೩೫ ರನ್ ಗಳಿಸಿತು.
ಪೊನ್ನಚಂಡ ತಂಡವು ಪಾಲೇಕಂಡವನ್ನು ೮ ರನ್ಗಳಿಂದ ಸೋಲಿಸಿತು. ಪಾಲೇಕಂಡ ೨ ವಿಕೆಟ್ ಕಳೆದುಕೊಂಡು ೨೯ ರನ್ ದಾಖಲಿಸಿತು. ಪೊನ್ನಚಂಡ ೧ ವಿಕೆಟ್ ನಷ್ಟಕ್ಕೆ ೨.೨ ಓವರ್ಗಳಲ್ಲಿ ಗುರಿ ಮುಟ್ಟಿತು.
ಮುಂಡಿಯೋಳAಡ ತಂಡವು ಚೋಡುಮಾಡ ತಂಡವನ್ನು ೭ ವಿಕೆಟ್ಗಳಿಂದ ಸೋಲಿಸಿತು. ಮುಂಡಿಯೋಳAಡ ೩ ವಿಕೆಟ್ ಕಳೆದುಕೊಂಡು ೪೪ ರನ್ ದಾಖಲಿಸಿತು. ಚೋಡುಮಾಡ ೩ ವಿಕೆಟ್ಗೆ ೪೧ ರನ್ ಗಳಿಸಲಷ್ಟೆ ಶಕ್ತವಾಯಿತು. ಚೆರಿಯಪಂಡ ತಂಡಕ್ಕೆ ಪೊದುವಡ ವಿರುದ್ಧ ೮ ವಿಕೆಟ್ ಜಯ ದೊರೆಯಿತು. ಪೊದುವಡ ೩ ವಿಕೆಟ್ ಕಳೆದುಕೊಂಡು ೩೬ ರನ್ ಗುರಿ ನೀಡಿತು. ಚಿರಿಯಪಂಡ ೨ ವಿಕೆಟ್ ಕಳೆದುಕೊಂಡು ೧ ಓವರ್ ಉಳಿದಿರುವಂತೆ ಗೆದ್ದು ಬೀಗಿತು. ಕಳ್ಳೇಂಗಡಕ್ಕೆ ಚಟ್ಟಂಗಡ ವಿರುದ್ಧ ೪೫ ರನ್ಗಳ ಭರ್ಜರಿ ಗೆಲುವು ದೊರೆಯಿತು. ಕಳ್ಳೇಂಗಡ ೨ ವಿಕೆಟ್ ಕಳೆದುಕೊಂಡು ೬೩ ರನ್ ಗಳಿಸಿತು. ಚಟ್ಟಂಗಡ ೬ ವಿಕೆಟ್ ಕಳೆದುಕೊಂಡು ೧೮ ರನ್ ಮಾತ್ರ ಗಳಿಸಿತು. ಮಚ್ಚಮಾಡ ತಂಡವು ಪೊನ್ನಚಂಡವನ್ನು ೫೫ ರನ್ಗಳಿಂದ ಸೋಲಿಸಿತು. ಮಚ್ಚಮಾಡ ೩ ವಿಕೆಟ್ಗೆ ೭೫ ರನ್ ಪೇರಿಸಿತು. ಪೊನ್ನಚಂಡ ೧ ವಿಕೆಟ್ ಕಳೆದುಕೊಂಡು ೨೦ ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಚೋಡುಮಾಡ ತಂಡವು ಬೇರೇರವನ್ನು ೨೧ ರನ್ಗಳಿಂದ ಸೋಲಿಸಿತು. ಚೋಡುಮಾಡ ೨ ವಿಕೆಟ್ ನಷ್ಟಕ್ಕೆ ೮೦ ರನ್ ದಾಖಲಿಸಿತು. ಬೇರೇರ ೧ ವಿಕೆಟ್ ಕಳೆದುಕೊಂಡು ೫೯ ರನ್ ದಾಖಲಿಸಿತು. ಪೊದುವಡವು ಮಂಡೇಡ ವಿರುದ್ಧ ೯ ವಿಕೆಟ್ಗಳಿಂದ ಜಯಿಸಿತು. ಮಂಡೇಡ ೩ ವಿಕೆಟ್ ನಷ್ಟಕ್ಕೆ ೩೪ ರನ್ ಗಳಿಸಿತು. ಪೊದುವಡ ೧ ವಿಕೆಟ್ ಕಳೆದುಕೊಂಡು ೩೬ ರನ್ ದಾಖಲಿಸಿತು.
ಕಳ್ಳೇಂಗಡ ತಂಡಕ್ಕೆ ಬೊಟ್ಟೋಳಂಡ ವಿರುದ್ಧ ೬ ವಿಕೆಟ್ ಜಯ ದೊರೆಯಿತು. ಕಳ್ಳೇಂಗಡ ೪ ವಿಕೆಟ್ ಕಳೆದುಕೊಂಡು ೬೦ ರನ್ ಗುರಿ ನೀಡಿತು. ಬೊಟ್ಟಂಗಡ ೩ ವಿಕೆಟ್ ನಷ್ಟಕ್ಕೆ ೪೭ ರನ್ ಗಳಿಸಿತು. ಪೊನ್ನೋಲ್ತಂಡವು ಅಣ್ಣೀರವನ್ನು ೭ ವಿಕೆಟ್ಗಳಿಂದ ಸೋಲಿಸಿತು. ಅಣ್ಣೀರ ೩ ವಿಕೆಟ್ ನಷ್ಟಕ್ಕೆ ೪೪ ರನ್ ದಾಖಲಿಸಿತು. ಪೊನ್ನೋಲ್ತಂಡ ೩ ವಿಕೆಟ್ ಕಳೆದುಕೊಂಡು ೪೬ ರನ್ ಗಳಿಸಿತು.
ಪಂದ್ಯ ಪುರುಷ ಪ್ರಶಸ್ತಿಯನ್ನು ಕಾಂಡೇರ ಮುದ್ದಪ್ಪ, ಮೂಕಳಮಾಡ ಅಯ್ಯಪ್ಪ, ಮಾಣೀರ ಸಂದೇಶ್, ಕೆತ್ತೀರ ಯತೀಶ್, ಅಣ್ಣೀರ ದೀಪಕ್, ಬೊಟ್ಟೋಳಂಡ ಸಚಿನ್, ಮಂಡೇಡ ಚೇತನ್, ಬೇರೇರ ಧೀರಜ್, ಪೊನ್ನಚಂಡ ಕಾಳಪ್ಪ, ಚಟ್ಟಂಗಡ ಅಮಲ್, ಪೊದುವಡ ಸುಜಯ್, ಚೋಡುಮಾಡ ಗಗನ್, ಪಾಲೇಕಂಡ ಆನಂದ್, ಮುಕ್ಕಾಟೀರ (ಕುಂಬಳದಾಳ್) ಕಿರಣ್ಕುಮಾರ್, ಕಾಂಡೇರ ದಿನು, ಅಮ್ಮಣಕುಟ್ಟಂಡ ಬೋಪಯ್ಯ ಪಡೆದುಕೊಂಡರು.