ಗೋಣಿಕೊಪ್ಪ ವರದಿ, ಮೇ ೬: ಅಖಿಲ ಅಮ್ಮಕೊಡವ ಸಮಾಜ ಮತ್ತು ಹೆಮ್ಮಚ್ಚಿಮನೆ ಕುಟುಂಬ ಸಹಯೋಗದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಅಯ್ಯಪ್ಪ ದೇವಸ್ಥಾನ ಆವರಣದಿಂದ ಮೈದಾನದವರೆಗೆ ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟು ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಕೊಡವ ಸೀರೆಯಲ್ಲಿ ಕಂಗೊಳಿಸಿದರು. ವಾಲಗ, ಡೊಳ್ಳು ಕುಣಿತ ಗಮನ ಸೆಳೆಯಿತು. ಭರತ ನಾಟ್ಯ ಪ್ರದರ್ಶನ ನಡೆಯಿತು. ಮಹಿಳೆಯರು ಉಮ್ಮತ್ತಾಟ್ ಮೂಲಕ ಸಂಸ್ಕೃತಿ ಅನಾವರಣಗೊಳಿಸಿದರು. ಕಾವೇರಿಯನ್ನು ಸ್ತುತಿಸಿದರು. ಕೊಡವ ವಾಲಗ ಆಟ್ ಕಾರ್ಯಕ್ರಮದಲ್ಲಿ ಕುಣಿದು ಸಂಭ್ರಮಿಸಿದರು.
ಅಂತರ‍್ರಾಷ್ಟಿçÃಯ ಮಾಜಿ ಹಾಕಿ ಆಟಗಾರ ಹೆಮ್ಮಚ್ಚಿಮನೆ ಸಂದೀಪ್ ಸೋಮೇಶ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಸ್ತೂರಿ ಗೋವಿಂದಮ್ಮಯ್ಯ ಹಾಗೂ ಬಾಚಮಂಡ ಗೌರಮ್ಮ ಮಾದಮ್ಮಯ್ಯ ಬರೆದಿರುವ ಕಾವೇರಿ ಪಳಮೆ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅಂತರ‍್ರಾಷ್ಟಿçÃಯ ಮಾಜಿ ಹಾಕಿ ಆಟಗಾರ ಹೆಮ್ಮಚ್ಚಿಮನೆ ಸಂದೀಪ್ ಸೋಮೇಶ್ ಬ್ಯಾಟ್ ಮಾಡುವ ಮೂಲಕ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ ಕುಶಾಲಪ್ಪ ಉದ್ಘಾಟಿಸಿ ಮಾತನಾಡಿ, ಕೊಡವ ಮೂಲ ನಿವಾಸಿಗಳು ಹಿರಿಯರಿಂದ ಬಂದಿರುವ ಮಣ್ಣನ್ನು ರಕ್ಷಿಸಲು ಮುಂದಾಗಬೇಕಿದೆ. ಕೃಷಿ ನಷ್ಟದ ನೆಪದಲ್ಲಿ ಮಾರಾಟ ಸಲ್ಲದು. ಕೃಷಿಯಲ್ಲಿ ನಷ್ಟ ಎದುರಾದರೆ ನಾವು ಉಪಾಯ ಕಂಡುಕೊಳ್ಳುವುದು ಉತ್ತಮ. ಭೂಮಿಯಲ್ಲಿ ವ್ಯವಹಾರ ನಡೆಸುವ ಬಗ್ಗೆ ಚಿಂತನೆ ನಡೆಸಬೇಕಿದೆ. ಆಗ ಮಾತ್ರ ಮಣ್ಣಿನ ಸಂಸ್ಕೃತಿ ಪೋಷಣೆ ಸಾಧ್ಯ. ಜನಾಂಗದ ಉಳಿವು ಸಾಧ್ಯ. ಅಮ್ಮಕೊಡವರು ಶಿಕ್ಷಣ ಮತ್ತು ದಾನ ಧರ್ಮದಲ್ಲಿ ಹೆಸರು ಮಾಡಿದ್ದಾರೆ. ಜನಸಂಖ್ಯೆ ಕ್ಷೀಣಿಸುತ್ತಿದ್ದರೂ, ನಮ್ಮ ಸಂಸ್ಕೃತಿ ಪೋಷಣೆಗೆ ಮುಂದಾಗಬೇಕು ಎಂದರು.
ಹಿರಿಯರಾದ ಪಾಡಿಯಮ್ಮಂಡ ಮುರಳಿ ಕರುಂಬಮಯ್ಯ ಮಾತನಾಡಿ, ಕೊಡವ ಹಾಕಿ ಜನಕ ಪಾಂಡAಡ ಕುಟ್ಟಪ್ಪ ಅವರ ಮಾರ್ಗದರ್ಶನದಿಂದ ಕೊಡವ ಕೌಟುಂಬಿಕ ಹಾಕಿ ವಿಶ್ವ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ. ಇದರಿಂದ ಬೇರೆ ಬೇರೆ ಜನಾಂಗದವರು ಕ್ರೀಡೆ ಮೂಲಕ ಒಂದಾಗುತ್ತಿದ್ದಾರೆ. ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಅಮ್ಮಕೊಡವರು ಮಣ್ಣು, ಭಾಷೆ, ಸಂಸ್ಕೃತಿ ಆಚಾರ-ವಿಚಾರ ರಕ್ಷಣೆಗೆ ಮುಂದಾಗ ಬೇಕು ಎಂದು ಹಿರಿಯರಾದ ಹೆಮ್ಮಚ್ಚಿಮನೆ ಜಿ. ವಿಠಲ, ಡಾ. ಹೆಮ್ಮಚ್ಚಿಮನೆ ಸರಸ್ವತಿ ಸೋಮೇಶ್ ಕರೆ ಕೊಟ್ಟರು.
ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಸರ್ಕಾರ ಅಮ್ಮಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಬೇಕು. ಜನಸಂಖ್ಯೆಯಲ್ಲಿ ಅಮ್ಮಕೊಡವರು ಕ್ಷೀಣಿಸುತ್ತಿದ್ದಾರೆ. ನಮ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭ ಕಾನೂರು ಗ್ರಾ. ಪಂ. ಸದಸ್ಯೆ ಹೆಮ್ಮಚ್ಚಿಮನೆ ಧರಣಿ, ಶ್ರೀಕೃಷ್ಣ ಅಮ್ಮಕೊಡವ ಪುರುಷ ಸಂಘದ ಅಧ್ಯಕ್ಷ ಹೆಮ್ಮಚ್ಚಿಮನೆ ಧನು, ನಿವೃತ್ತ ಅಧ್ಯಾಪಕಿ ಹೆಮ್ಮಚ್ಚಿಮನೆ ಮೀನಾಕ್ಷಿ ಗೋಪಾಲ್, ನಿ. ಉಪ ಆಯುಕ್ತ ಹೆಮ್ಮಚ್ಚಿಮನೆ ವಿಶು, ನಿವೃತ್ತ ರಾಜಸ್ವ ನಿರೀಕ್ಷಕ ಹೆಮ್ಮಚ್ಚಿಮನೆ ಎ. ನಾಣಮಯ್ಯ, ನಿ. ಶಿಕ್ಷಕ ಎ ನಾಣಮಯ್ಯ ಇದ್ದರು.
ಫಲಿತಾಂಶ : ಹೆಮ್ಮಚ್ಚಿಮನೆ ಕ್ರಿಕೆಟ್ ಕಪ್‌ನಲ್ಲಿ ಆಂಡಮಾಡ, ಬಲ್ಯಂಡ ಹಾಗೂ ಕೊಂಡಿಜಮ್ಮAಡ ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದವು.
ಚಮ್ಮಣಮಾಡ ತಂಡ ಗೈರು ಹಾಜರಾದ ಕಾರಣ, ಆಂಡಮಾಡ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು.
ಬಲ್ಯಂಡ ತಂಡವು ಚೊಟ್ಟೋಳಿಯಮ್ಮಂಡ ತಂಡವನ್ನು ೫೮ ರನ್‌ಗಳಿಂದ ಮಣಿಸಿತು. ಬಲ್ಯಂಡ ನಿಗದಿತ ೮ ಓವರ್‌ಗಳಲ್ಲಿ ೧೦೨ ರನ್ ಗುರಿ ನೀಡಿತು. ಚೊಟ್ಟೋಳಿಯಮ್ಮಂಡ ೪೩ ರನ್ ಗಳಿಸಿ ಸೋಲೊಪ್ಪಿಕೊಂಡಿತು. ಬಲ್ಯಂಡ ಶರತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಕೊಂಡಿಜಮ್ಮAಡ ತಂಡವು ಆತಿಥೇಯ ಹೆಮ್ಮಚ್ಚಿಮನೆ ತಂಡವನ್ನು ೫ ವಿಕೆಟ್‌ಗಳಿಂದ ಮಣಿಸಿತು. ಹೆಮ್ಮಚ್ಚಿಮನೆ ನೀಡಿದ ೪೦ ರನ್‌ಗಳ ಗುರಿಯನ್ನು ಕೊಂಡಿಜಮ್ಮAಡ ೫ ವಿಕೆಟ್ ಕಳೆದುಕೊಂಡು ಸಾಧಿಸಿತು. ಕೊಂಡಿಜಮ್ಮAಡ ದಿನು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಪ್ರದರ್ಶನ ಪಂದ್ಯದಲ್ಲಿ ಅಮ್ಮಕೊಡವ ಇಲೆವೆನ್ ತಂಡವು ಅತಿಥೇಯ ಹೆಮ್ಮಚ್ಚಿಮನೆ ವಿರುದ್ಧ ೪೬ ರನ್‌ಗಳಿಂದ ಮಣಿಸಿತು. ಅಮ್ಮಕೊಡವ ಇಲೆವೆನ್ ೧೧೧ ರನ್ ಸಿಡಿಸಿತು. ಹೆಮ್ಮಚ್ಚಿಮನೆ ೬೫ ರನ್ ಮಾತ್ರ ಗಳಿಸಿತು. ಅಮ್ಮತ್ತೀರ ಗಣೇಶ್ ಪಂದ್ಯ ಶ್ರೇಷ್ಠ ಬಹುಮಾನ ಪಡೆದರು.