ಗೋಣಿಕೊಪ್ಪಲು, ಮೇ ೬: ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಆದರೆ ಚೆಸ್ಕಾಂ ಇಲಾಖೆಯು ಗುಣಮಟ್ಟದ ವಿದ್ಯುತ್ ನೀಡುವಲ್ಲಿ ವಿಫಲವಾಗಿದೆ. ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ಲನ್ನು ಪಾವತಿಸುವಂತೆ ರೈತರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ವಿದ್ಯುತ್ ಸರಿಯಾಗಿ ನೀಡದೆ ಬಿಲ್ಲನ್ನು ಕೇಳುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ರೈತರು ತಮ್ಮ ಅಭಿಪ್ರಾಯ ಸಭೆಯಲ್ಲಿ ಮಂಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಶ್ರೀಮಂಗಲ ಹೋಬಳಿ ಮಟ್ಟದ ರೈತ ಸಂಘ ಸಭೆಯು ಸ್ಥಳೀಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶ್ರೀಮಂಗಲ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ, ವನ್ಯಪ್ರಾಣಿಗಳ ಹಾವಳಿ, ಮುಂತಾದ ಸಮಸ್ಯೆಗಳ ಬಗ್ಗೆ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಸಭೆಯಲ್ಲಿ ಗಮನ ಸೆಳೆದರು.

ಈ ಭಾಗದಲ್ಲಿ ವನ್ಯ ಪ್ರಾಣಿ ಹಾವಳಿ ನಿರಂತರವಾಗಿರುವುದರಿAದ ಇದರ ಹತೋಟಿ ಹಿನೆÀ್ನಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಶ್ರೀಮಂಗಲ ಹೋಬಳಿ ಮಟ್ಟದಲ್ಲಿ ನಡೆಸಲು ಅಧಿಕಾರಿಗಳೊಂದಿಗೆ ವ್ಯವಹರಿಸುವುದಾಗಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸಭೆಗೆ ಮಾಹಿತಿ ಒದಗಿಸಿದರು.

ರೈತ ಸಂಘವನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಸದೃಢವಾಗಿ ಕಟ್ಟಲು ರೈತ ಸಂಘದ ಸದಸ್ಯರುಗಳು ಶ್ರಮಿಸಬೇಕು. ರೈತರಿಗೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕಾರ್ಯಪ್ಪ ಸಭೆಯಲ್ಲಿ ಗಮನ ಸೆಳೆದರು.

ಈ ಭಾಗದಲ್ಲಿ ವನ್ಯ ಪ್ರಾಣಿ ಹಾವಳಿ ನಿರಂತರವಾಗಿರುವುದರಿAದ ಇದರ ಹತೋಟಿ ಹಿನೆÀ್ನಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಶ್ರೀಮಂಗಲ ಹೋಬಳಿ ಮಟ್ಟದಲ್ಲಿ ನಡೆಸಲು ಅಧಿಕಾರಿಗಳೊಂದಿಗೆ ವ್ಯವಹರಿಸುವುದಾಗಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸಭೆಗೆ ಮಾಹಿತಿ ಒದಗಿಸಿದರು.

ರೈತ ಸಂಘವನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಸದೃಢವಾಗಿ ಕಟ್ಟಲು ರೈತ ಸಂಘದ ಸದಸ್ಯರುಗಳು ಶ್ರಮಿಸಬೇಕು. ರೈತರಿಗೆ ಮುಂದಾಗಬೇಕೆAದು ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ ಒತ್ತಾಯಿಸಿದರು.

ಸಭೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ತೀತಿರ ಮಂದಣ್ಣ, ಚೆಪ್ಪುಡೀರ ಪಾರ್ಥ, ಕಲ್ಲಂಗಡ ವಿಠಲ, ಬಾಚಂಗಡ ಗಣಪತಿ, ಕೋಟ್ರಮಡ ತಿಮ್ಮಯ್ಯ, ಚೇಂದAಡ ದೀಪಕ್, ಅಜ್ಜಮಾಡ ಸಿದ್ದು, ಇಮ್ಮಿ, ಸಾವಿತ್ರಿ, ನೂರೇರ ಉತ್ತಯ್ಯ, ಮಚ್ಚಮಾಡ ಸತೀಶ್, ಪೆಮ್ಮಂಡ ನರೇಂದ್ರ, ಬಾಚಂಗಡ ಕಾರ್ಯಪ್ಪ, ಚಟ್ಟಂಗಡ ಸೋಮಣ್ಣ ಮುಂತಾದವರು ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್ ಸ್ವಾಗತಿಸಿ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.