ಮಡಿಕೇರಿ,ಮೇ.೬; ವಾಂಡರ‍್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ಮರಣಾರ್ಥ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದು ತಿಂಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರ ಮುಕ್ತಾಯ ಕಂಡಿತು.

ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೇ. ಬಿದ್ದಂಡ ನಂಜಪ್ಪ ಮಾತನಾಡಿ, ತಾವೇನು ಸಾಧನೆ ಮಾಡಬೇಕೆಂದಿರು ವಿರೋ ಅದನ್ನು ಸ್ವಪ್ನದಂತೆ ಇಟ್ಟು ಕೊಂಡು ಛಲದಿಂದ ಮುಂದುವರಿದರೆ ಖಂಡಿತಾ ಸಾಧ್ಯವಾಗಲಿದೆ. ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳು ವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿದರು.

ಶಕ್ತಿ ಪತ್ರಿಕೆ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಸದ್ಗುರು ದಿ.ಬಿ.ಕೆ.ಸುಬ್ಬಯ್ಯ ಅವರ ಬಗ್ಗೆ ಹಾಗೂ ಹಿರಿಯ ಕ್ರೀಡಾಪಟು ಜಿ.ಟಿ. ರಾಘವೇಂದ್ರ ದಿ.ಸಿ.ವಿ.ಶಂಕರ್ ಅವರುಗಳ ಬಗ್ಗೆ ಶಿಬಿರಾರ್ಥಿಗಳಿಗೆ ಪರಿಚಯ ಮಾಡಿಕೊಟ್ಟರು. ವಾಂಡರರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಕಾರ್ಯದರ್ಶಿ ಬಾಬು ಸೋಮಯ್ಯ, ಖಜಾಂಚಿ ಪಾರ್ಥ ಚಂಗಪ್ಪ, ವಕೀಲ ಬಾಳೆಯಡ ಕಿಶನ್ ಪೂವಯ್ಯ ಅತಿಥಿಗಳಾಗಿದ್ದರು.

ಶಿಬಿರಾರ್ಥಿಗಳಿಗೆ ಏರ್ಪಡಿ¸ Àಲಾಗಿದ್ದ ಕ್ರೀಡಾಕೂಟ ಹಾಗೂ ಹಾಕಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ಹಾಗೂ ಮೆಡಲ್ ವಿತರಿಸಲಾಯಿತು. ಸುಮಾರು ೯೦ ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಶಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್ ಹಾಗೂ ಲೋಕೇಶ್ ನಾಯ್ಡು ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ತಾ. ೩೦ರಂದು ನಿವೃತ್ತಿ ಹೊಂದಲಿರುವ ದೈಹಿಕ ಶಿಕ್ಷಣಾಧಿಕಾರಿ, ಯೋಗ ತರಬೇತುದಾರ ಎಸ್.ಟಿ. ವೆಂಕಟೇಶ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದಲ್ಲಿ ಪ್ರಾಣಾಯಾಮ, ವ್ಯಾಯಾಮ, ಆಟೋಟ ಹಾಗೂ ಹಾಕಿ ತರಬೇತಿ ನೀಡಲಾಗಿತ್ತು. ಶಿಬಿರಾರ್ಥಿಗಳು ತಾವು ಕಲಿತ ಪ್ರಾಣಾಯಾಮ, ಆ್ಯರೋಬಿಕ್ಸ್ ಪ್ರದರ್ಶನ ಮಾಡಿದರು. ಶಿಬಿರಾರ್ಥಿ ಗಳು ಹಾಗೂ ಪೋಷಕರ ಪರವಾಗಿ ವಕೀಲ ಎಂ.ಎಸ್. ಜಯಚಂದ್ರ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿ ಗಳ ಪೋಷಕರು ಪಾಲ್ಗೊಂಡಿದ್ದರು.

ಎಲ್ಲರಿಗೂ ಹಾಲು, ಮೊಟ್ಟೆ, ಬ್ರೆಡ್, ಬಾಳೆಹಣ್ಣು ಹಾಗೂ ಲಘು ಉಪಹಾರ ನೀಡಲಾಯಿತು.