ಗೋಣಿಕೊಪ್ಪ ವರದಿ, ಮೇ ೬: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಲೀಗ್ ಟೂರ್ನಿಯ ಗುರುವಾರದ ಪಂದ್ಯಗಳಲ್ಲಿ ೪ ತಂಡಗಳು ಗೆಲುವು ಸಾಧಿಸಿದವು.
ಹಾತೂರು ಸ್ಪೋರ್ಟ್ಸ್ ಕ್ಲಬ್ ತಂಡಕ್ಕೆ ಶ್ರೀಮಂಗಲ ಕೊಡವ ಸಮಾಜ ವಿರುದ್ಧ ೧-೦ ಗೋಲುಗಳ ಗೆಲುವು ದೊರೆಯಿತು. ಹಾತೂರು ಪರ ೨೮ ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ಕೌಶಿಕ್ ಗೋಲು ಹೊಡೆದು ಗೆಲುವಿನ ರೂವಾರಿಯಾದರು.
ಈಶ್ವರ ಯೂತ್ ಕ್ಲಬ್ ತಂಡವು ಪೊದ್ದಮಾನಿ ಬ್ಲೂಸ್ಟಾರ್ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ೧೨ ನಿಮಿಷದಲ್ಲಿ ಈಶ್ವರ ತಂಡದ ಆಟಗಾರ ಕೋಳೇರ ಮಿಲನ್, ೨೩ ರಲ್ಲಿ ಕೆ. ಎ. ಅಯ್ಯಮ್ಮ, ೬ ರಲ್ಲಿ ಬ್ಲೂಸ್ಠಾರ್ ತಂಡದ ಅಂಜನ್ ಗೋಲು ಹೊಡೆದರು.
ಸೋಮವಾರಪೇಟೆ ಡಾಲ್ಫಿನ್ಸ್ ಮತ್ತು ಶಿವಾಜಿ (ಎ) ತಂಡಗಳ ನಡುವಿನ ಪಂದ್ಯ ಗೋಲು ದಾಖಲಾಗದೆ ಡ್ರಾದಲ್ಲಿ ಅಂತ್ಯವಾಯಿತು.