ನಾಪೋಕ್ಲು, ಮೇ ೬ : ನಾಪೋಕ್ಲು ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ರಭಸದ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಅಲ್ಲಲ್ಲಿ ಮರದ ರೆಂಬೆಗಳು ಮುರಿದು ಬಿದ್ದವು. ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದ ಅರ್ಚಕ ಮಕ್ಕಿ ದಿವಾಕರ ಅವರ ಮನೆಯ ಮೇಲೆ ಬೃಹತ್‌ಗಾತ್ರದ ಮರವೊಂದು ಮುರಿದುಬಿದ್ದು ಹಾನಿ ಸಂಭವಿಸಿದೆ. ಮರ ಬುಡಸಹಿತ ಕುಸಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಸAಜೆ ವೇಳೆಗೆ ಗ್ರಾಮಸ್ಥರು ಮರದ ರೆಂಬೆಗಳನ್ನು ತೆರವುಗೊಳಿಸಿದರು.
ಬೇತು ಗ್ರಾಮದ ಪುಷ್ಪ ಎಂಬ ಮಹಿಳೆಯ ಮನೆಯ ಶೀಟ್‌ಗಳು ಹಾರಿಹೋಗಿ ಹಾನಿ ಸಂಭವಿಸಿದೆ. ಕೊಳಕೇರಿ ಗ್ರಾಮದ ಪಟ್ರಪಂಡ ಗಣೇಶ್ ಎಂಬವರ ಮನೆಯ ೫೦೦ ಹೆಂಚುಗಳು ಹಾರಿಹೋಗಿ ನಷ್ಠ ಸಂಭವಿಸಿದೆ. ಪಟ್ಟಣದ ಮಸೀದಿ ಎದುರಿನ ಮಳಿಗೆಯ ಶೀಟ್‌ಗಳು ಹಾರಿಹೋಗಿವೆ. ರಭಸದ ಗಾಳಿ ಮಳೆಗೆ ಹಲವೆಡೆ ನಷ್ಟ ಸಂಭವಿಸಿದ್ದು ಸಂಬAಧಿಸಿದವರು ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತೋಟಗಳಲ್ಲೂ ಹಲವು ಮರಗಳು ಮುರಿದು ಬಿದ್ದಿವೆ ಎಂದು ಬೆಳೆಗಾರರು ತಿಳಿಸಿದ್ದಾರೆ.
ವರದಿ: ದುಗ್ಗಳ ಸದಾನಂದ.