ಶನಿವಾರಸಂತೆ, ಮೇ ೬: ಪೆಯಿಂಟರ್ ಪ್ರದೀಪ್ ಪೆಯಿಂಟಿAಗ್ ಕೆಲಸಕ್ಕೆ ಅರಸಿನ ಗುಪ್ಪೆಯಿಂದ ಶನಿವಾರಸಂತೆಗೆ ಬಂದು ಬುಧವಾರ ರಾತ್ರಿ ವಾಪಸು ಬೈಕ್ನಲ್ಲಿ ಮನೆಗೆ ಮರಳುತ್ತಿದ್ದಾಗ ಮಾಲಂಬಿ ಕಣಿವೆ ಬಸವನಹಳ್ಳಿ ಬಳಿ ಮಳೆ- ಗಾಳಿಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಕೊಂಬೆಗೆ ಡಿಕ್ಕಿ ಪಡಿಸಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಪ್ರಜ್ಞೆ ತಪ್ಪಿದ್ದ ಗಾಯಾಳು ಪ್ರದೀಪ್ನನ್ನು ಸಾರ್ವಜನಿಕರು ಶನಿವಾರಸಂತೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದ ಸಂದರ್ಭ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ, ಪ್ರದೀಪನನ್ನು ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿ ಹೇಮಾ ಗುರುವಾರ ಸಂಜೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಲಂ ೨೭೯, ೩೩೭, ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತಾರೆ. ಪಿಎಸ್ಐ ಗೋವಿಂದ್ ರಾಜ್, ಕೊಡ್ಲಿಪೇಟೆ ಎಎಸ್ಐ ಚೆನ್ನಯ್ಯ, ಹೆಡ್ಕಾನ್ಸ್ಟೇಬಲ್ ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.