ಮಡಿಕೇರಿ, ಮೇ ೬: ವೀರಾಜಪೇಟೆಯ ಕೊಡವ ಸಂಘ, ಒಕ್ಕೂಟ ಹಾಗೂ ಪಂಜರಪೇಟೆ ಕೊಡವಕೇರಿಯ ಸಹಯೋಗದಲ್ಲಿ ಬಿಟ್ಟಂಗಾಲದ ತಂಗಾಳಿ ಒಳಾಂಗಣ ಬ್ಯಾಡ್‌ಮಿಂಟನ್ ಕ್ರೀಡಾಂಗಣದಲ್ಲಿ ತಾ. ೭ ರಿಂದ (ಇಂದಿನಿAದ) ಕೊಡವ ಶಟಲ್ ಬ್ಯಾಡ್‌ಮಿಂಟನ್ ಪಂದ್ಯಾವಳಿ ಏರ್ಪಡಿಸಲಾಗಿದೆ.

ತಾ. ೭ ರ ಬೆಳಿಗ್ಗೆ ೯.೩೦ಕ್ಕೆ ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ. ತಿಮ್ಮಯ್ಯ ಪಾಲ್ಗೊಳ್ಳಲಿದ್ದು, ವೀರಾಜಪೇಟೆ ಕೊಡವ ಕೇರಿ ಒಕ್ಕೂಟದ ಅಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಾ. ೮ ರಂದು ಸಂಜೆ ೪ ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಲಿದೆ.

ಕೊಡವ ಹಾಕಿ ಅಕಾಡೆಮಿ ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್ ಕಾರ್ಯಪ್ಪ, ದ.ಕ. ಜಿಲ್ಲಾ ಬ್ಯಾಡ್‌ಮಿಂಟನ್ ಸಂಸ್ಥೆ ಅಧ್ಯಕ್ಷ ಮಾಳೆಯಂಡ ಅಶೋಕ್ ಪೂವಯ್ಯ, ಜೇನುಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕಂಜಿತAಡ ಮಂದಣ್ಣ, ಬೆಂಗಳೂರು ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ, ವೀರಾಜಪೇಟೆ ಸಮಾಜದ ಅಧ್ಯಕ್ಷ ವಾಂಚಿರ ಟಿ. ನಾಣಯ್ಯ, ಮಹೇಶ್ ನಾಚಯ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.