ಮಡಿಕೇರಿ, ಮೇ ೬: ಕ್ರೀಡಾಕೂಟಗಳು ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚಿಸುವದಲ್ಲದೆ ಸಂಘಟನೆ, ಕುಟುಂಬ ಸಮ್ಮಿಲನಕ್ಕೆ ಸಹಕಾರಿಯಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕುರುಂಜಿ ರೇಣುಕಾ ಪ್ರಸಾದ್ ಅಭಿಪ್ರಾಯಪಟ್ಟರು.
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹತ್ತು ದಿನಗಳ ಕಾಲ ನಡೆದ ಗೌಡ ಜನಾಂಗದ ನಡುವಿನ ಕುಟುಂಬ-೨೦೨೨ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ದರು. ಕಲಿಕೆಯೊಂದಿಗೆ ಕ್ರೀಡೆ, ಇನ್ನಿತರ ಚಟುವಟಿಕೆ ಗಳಿರಬೇಕು; ಕ್ರೀಡಾಕೂಟಗಳಿಂದ ಸ್ನೇಹ, ಸಂಬAಧಗಳೊAದಿಗೆ ಪ್ರೀತಿ ಹೆಚ್ಚುತ್ತದೆ. ಕೊಡಗು ಜಿಲ್ಲೆಯಲ್ಲಿ ಇಂತಹ ಕ್ರೀಡಾಕೂಟಗಳನ್ನು ಕಾಣಬಹುದಾಗಿದೆ ಎಂದರು.
ಒಕ್ಕಲಿಗರ ಸಂಘದಲ್ಲಿ ೧೨ ಸಾವಿರದಷ್ಟು ಮತದಾರರಿದ್ದಾರೆ. ಆದರೆ, ಕೊಡಗಿನವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕೊಡಗಿನ ಗೌಡರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು; ಎಲ್ಲರಿಗೂ ಸದಸ್ಯತ್ವ ನೀಡಲು ನಿರ್ಧಾರ ಮಾಡಲಾಗಿದ್ದು, ಸುಲಭವಾಗಿ ಆನ್ಲೈನ್ ಮೂಲಕ ಸದಸ್ಯತ್ವ ಪಡೆಯಬಹುದೆಂದು ಹೇಳಿದರು. ಕೊಡಗಿನ ಬಡತನದಲ್ಲಿರುವ ೧೦೦ ಮಂದಿಗೆ ತಾವು ಸದಸ್ಯತ್ವ ನೀಡುವದಾಗಿ ಹೇಳಿದರು.
ಎಲ್ಲರೂ ಭಾಗವಹಿಸಬೇಕು
ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಮಾತನಾಡಿ; ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಕ್ರೀಡಾಕೂಟಗಳ ಮೂಲಕ ಎಲ್ಲರ ಒಗ್ಗೂಡುವಿಕೆಗೆ ಸಹಕಾರಿಯಾಗುತ್ತಿದೆ. ಗೌಡ ಜನಾಂಗದಲ್ಲಿ ೭೫೦ರಷ್ಟು ಕುಟುಂಬಗಳಿದ್ದರೂ ೮೮ ಕುಟುಂಬ ತಂಡಗಳು ಮಾತ್ರ ಭಾಗವಹಿಸಿವೆ. ಎಲ್ಲರೂ ಭಾಗವಹಿಸು ವಂತಾಗಬೇಕೆAದು ಹೇಳಿದರು. ಕೊಡವರು ಹಾಗೂ ಗೌಡರು ಒಂದಾದರೆ ಕೊಡಗು ಸಮೃದ್ಧವಾಗಿರುತ್ತದೆ. ನಮ್ಮ ತಾಯಿನಾಡು, ಸಮಾಜಕ್ಕೆ ತೊಂದರೆ ಎದುರಾದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೋರಾಡಿದ ನಿದರ್ಶನ ಗಳಿವೆ. ಅದೇ ರೀತಿ ಮುಂದುವರಿಯ ಬೇಕೆಂಬ ಆಶಯ ವ್ಯಕ್ತಪಡಿಸಿದರು.
ಕ್ರೀಡೆ-ಸಾಂಸ್ಕೃತಿಕ ಸಮ್ಮಿಲನ
ಕುಟುಂಬ ಕ್ರೀಡಾಕೂಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಸಮ್ಮಿಲನ ಆಗಿದೆ; ಹತ್ತು ದಿನಗಳ ಕಾಲ ಕ್ರಿಡಾಕೂಟ ಆಯೋಜನೆ ಮಾಡುವಲ್ಲಿ ಕಷ್ಟವಿರುತ್ತದೆ. ಇಂತಹ ಕ್ರೀಡಾಕೂಟಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದಾಗ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ ಎಂದು ಮಡಿಕೇರಿ ನಗರಸಭಾಧ್ಯಕ್ಷ ನೆರವಂಡ ಅನಿತಾ ಪೂವಯ್ಯ ನುಡಿದರು.
ಜಾತ್ಯತೀತ ಕ್ರೀಡಾಕೂಟವಾಗಲಿ
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ; ಘಟಾನುಘಟಿಗಳು, ಅಂತರ್ರಾಷ್ಟಿçÃಯ ಮಟ್ಟದಲ್ಲಿ ಆಟವಾಡಿದವರು, ಸಿ.ವಿ.ಶಂಕರ್ ಅವರಂತಹ ತರಬೇತು ದಾರರು ಆಡಿದ ಈ ಜಿಲ್ಲಾ ಕ್ರೀಡಾಂಗಣದಲ್ಲಿ ಆಟವಾಡುತ್ತಿರುವ ಎಲ್ಲರೂ ಅದೃಷ್ಟಶಾಲಿಗಳೆಂದು ಹೇಳಿದರು. ೨೩ ವರ್ಷಗಳಿಂದ ಕ್ರೀಡಾಕೂಟ ನಡೆಸಿಕೊಂಡು ಬರುತ್ತಿರುವದು ದೊಡ್ಡ ಸಾಧನೆ ಎಂದು ಶ್ಲಾಘಿಸಿದ ಅವರು; ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಜಾತ್ಯತೀತವಾಗಿ ಕ್ರೀಡಾಕೂಟ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕೆಂದು ಅಭಿಪ್ರಾಯಿಸಿದರು.
ಎಲ್ಲರ ಸಹಕಾರ ಬೇಕು
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಮಾತನಾಡಿ; ಹಿಂದೆ ಕ್ರೀಡಾಕೂಟ ನಡೆಯುವಾಗ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಇದೀಗ ಕಡಿಮೆಯಾತ್ತಿದೆ; ಎಲ್ಲರೂ ಸೇರಬೇಕು. ಯುವ ವೇದಿಕೆಯವರು ಕಷ್ಟಪಟ್ಟು ಕ್ರಿಡಾಕೂಟಗಳನ್ನು ಆಯೋಜಿಸಿ ಕೊಂಡು ಬರುತ್ತಿದ್ದಾರೆ. ಅವರಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು.
ಪ್ರತಿವರ್ಷ ಸಹಕಾರ
ದಾನಿ ಡಾ. ಮಂಥರ್ ಗೌಡ ಮಾತನಾಡಿ, ಕ್ರೀಡಾಕೂಟ ಒಂದು ಒಗ್ಗಟ್ಟಿನ ಕಾರ್ಯಕ್ರಮವಾಗಿದ್ದು, ಕ್ರೀಡೆಯ ಮೂಲಕ ಒಗ್ಗಟ್ಟಾಗಬೇಕು. ಕ್ರೀಡಾಕೂಟದಲ್ಲಿ ಎಲ್ಲರೂ ಭಾಗವಹಿಸುವದಲ್ಲದೆ ಅಭ್ಯಾಸ ಕೂಡ ಮಾಡಬೇಕು. ಕ್ರೀಡೆ ಖುಷಿ ಕೊಡುತ್ತದೆ ಎಂದು ಹೇಳಿದರಲ್ಲದೆ, ಈ ಒಂದು ಕ್ರೀಡಾಕೂಟಕ್ಕೆ ಪ್ರತಿವರ್ಷ ಸಹಕಾರ ಮಾಡುವದಾಗಿ ಘೋಷಿಸಿದರು. ಎಲ್ಲ ಸಮುದಾಯದವರು ಸೇರಿಕೊಂಡು ಒಟ್ಟಾಗಿ ಕ್ರೀಡಾಕೂಟ ಮಾಡಬೇಕು. ಜಾತ್ಯತೀತತೆ ಮನಸಿನಿಂದ ಮೂಡಬೇಕೆಂದರು.
ಹಲವು ಚಟುವಟಿಕೆಗಳು
ಅಧ್ಯಕ್ಷತೆ ವಹಿಸಿದ್ದ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ; ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಪ್ರಾರಂಭ ಮಾಡಿದ ಈ ಕ್ರಿಕೆಟ್ ಹಬ್ಬವನ್ನು ಯುವ ವೇದಿಕೆ ಮುಂದುವರಿಸಿ ಕೊಂಡು ಬರುತ್ತಿದ್ದು, ಕ್ರೀಡೆ ಮಾತ್ರವಲ್ಲದೆ, ರಕ್ತದಾನ ಶಿಬಿರ, ನೇತ್ರ ತಪಾಸಣಾ ಶಿಬಿರ, ಶ್ರಮದಾನ ಸೇರಿದಂತೆ ಸಾಮಾಜಿಕ ಚಟುವಟಿಕೆ ಗಳಲ್ಲೂ ತೊಡಗಿಸಿಕೊಂಡಿದೆ. ಸಾಂಸ್ಕೃತಿಕವಾಗಿಯೂ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸಿ ಕೊಂಡು ಹೋಗುವ ನಿಟ್ಟಿನಲ್ಲೂ ಕಾರ್ಯಾಚರಿಸುತ್ತಿದೆ. ಇದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ. ಮುಂದೆಯೂ ಹಲವಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಎಲ್ಲರೂ ಸಹಕಾರ ನೀಡಬೇಕು. ಕ್ರೀಡಾಕೂಟ ನಡೆಸುವ ನಿಟ್ಟಿನಲ್ಲಿ ಕುಟುಂಬಗಳು ಮುಂದೆ ಬರಬೇಕೆಂದು ಕೋರಿದರು. ಸಮಾರಂಭದಲ್ಲಿ ಮಡಿಕೇರಿಯ ಕಲಾ ಕಾವ್ಯ ನಾಟ್ಯ ಶಾಲೆಯ ವಿಧುಷಿ ದುಗ್ಗಳ ಕಾವ್ಯಶ್ರೀ ಕಪಿಲ್ ಅವರ ಶಿಷ್ಯಂದಿರಿAದ ಪ್ರದರ್ಶಿಸಲ್ಪಟ್ಟ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.